ಸಕಲೇಶಪುರ : ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್, ಸಾಮೂಹಿಕ ಶ್ರೀ ಲಕ್ಷ್ಮಿ ಪೂಜಾ ಸಮಿತಿ, ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟಗಳ ಬಾಳ್ಳುಪೇಟೆ ವಲಯ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ವತಿಯಿಂದ ಹೊಂಕರವಳ್ಳಿ ಈಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆದ ಸಾಮೂಹಿಕ ಲಕ್ಷ್ಮಿ ಪೂಜಾ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.

ಸಾಮೂಹಿಕ ಲಕ್ಷ್ಮೀ ಪೂಜಾ ಕಾರ್ಯಕ್ರಮ ದಿವ್ಯ ಸಾನಿಧ್ಯವನ್ನು ಶ್ರೀ ಷ. ಬ್ರ. ಚೆನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ತೆಂಕಲಗೂಡು ಮಠ ಯಸಳೂರು ವಹಿಸಿ ಜ್ಯೋತಿ ಬೆಳಗುವ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಗ್ಗೋವೆ ಪುಟ್ಟರಾಜು ವಹಿಸಿದರು. ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾಮ ಅಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪುರುಷೋತ್ತಮ್ ಮಾತನಾಡಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಡಾ. ಹೇಮಾವತಿ ಹೆಗ್ಗಡೆಯವರ ಆಶೀರ್ವಾದಗಳೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇಮಾ ಅಭಿವೃದ್ಧಿ ಯೋಜನೆ ಯ ಮೂಲಕ ರಾಜ್ಯದ ಎಲ್ಲಾ ಭಾಗಗಳಲ್ಲೂ ಸ್ವ ಸಹಯ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಸಮಾಜದಲ್ಲಿ ಮುಖ್ಯವಾಹಿನಿಗೆ ಬರಬೇಕು ಎನ್ನುವ ಮುಖ್ಯ ಉದ್ದೇಶ ಹೊಂದಿ ಸಮಾಜದಲ್ಲಿ ತಮ್ಮನ್ನ ತಾವು ಗುರುತಿಸಿಕೊಳ್ಳುವ ಜೊತೆಗೆ ಆರ್ಥಿಕ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮುಂದೆ ಬರಬೇಕೆನ್ನುವ ಉದ್ದೇಶ ಸ್ವ ಸಹಾಯ ಸಂಘಗಳನ್ನು ಪ್ರಾರಂಭ ಮಾಡಿದ್ದೇವೆ.

ಸಕಲೇಶಪುರ ತಾಲೂಕಿನಲ್ಲಿ 2100 ಸ್ವಸಹಾಯ ಸಂಘಗಳಿದ್ದು 15911 ಜನ ಪಾಲುದಾರ ಸ್ವಸಹಾಯ ಸದಸ್ಯರಿದ್ದಾರೆ. ವಾರದಲ್ಲಿ 10 ರೂ ಉಳಿತಾಯವಾದ ಹಣ ಇಂದು1 ಕೋಟಿ54 ಲಕ್ಷ ಆಗಿರುವುದು ಹೆಮ್ಮೆ ಎಂದರು. ಸ್ವಸಹಾಯ ಸಂಘದ ಮುಖಾಂತರ ಹಲವಾರು ಯೋಜನೆಗಳ ಮೂಲಕ ಕೆಲಸ ಮಾಡುತ್ತಿದ್ದೇವೆ ಜನ ವಂದನ ಕಾರ್ಯಕ್ರಮದ ಯೋಜನೆ ಅಡಿ ಅಂಗವಿಕಲರಿಗೆ ಉಚಿತ ವಾಟರ್ ಬೆಡ್, ಸ್ಟ್ರಿಕ್, ಇತ್ಯಾದಿಗಳನ್ನು ನೀಡುತ್ತಿದ್ದು. ಉಚಿತ ಮಧ್ಯವರ್ಜನ ಶಿಬಿರ, ಕೆರೆಗಳ ಹೂಳೆತ್ತುವ, ಸ್ವಚ್ಛತಾ ಕಾರ್ಯಕ್ರಮ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವನ್ನ 48000 ಹೊರಗೆ ಕೊಡುತ್ತಿದ್ದೇವೆ ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಪ್ರವಚನ ನೀಡಿದ ಶ್ರೀ ಚನ್ನ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಎಲ್ಲರ ಬದುಕನ್ನ ಕತ್ತಲೆಯಿಂದ ಬೆಳಕಿನೆಡೆಗೆ ತಂದಿದ್ದು ಬಸವಾದಿ ಶಿವಶರಣರುಗಳು. ಇಡೀ ಪ್ರಪಂಚದಲ್ಲಿ ಹಲವಾರು ದೇಶಗಳು ಮುಂದುವರೆದಿದ್ದು ಯಾವ ದೇಶವು ಸಹ ವಿಶ್ವಗುರು ಆಗಲಿಲ್ಲ, ಇಡೀ ವಿಶ್ವದಲ್ಲೇ ವಿಶ್ವಗುರು ಅಂತಹ ಕರೆಸಿಕೊಂಡ ಏಕೈಕ ರಾಷ್ಟ್ರ ವೆಂದರೆ ಅದು ಭಾರತ ದೇಶ. ಯಾಕೆಂದರೆ ಇಡೀ ವಿಶ್ವಕ್ಕೆ ಆಧ್ಯಾತ್ಮಿಕ ಶಕ್ತಿಯನ್ನು ದಾರೆಯೇರದ ದೇಶ ಭಾರತ ದೇಶ, ಧಾರ್ಮಿಕತೆಯನ್ನು ಒಗ್ಗೂಡಿಸಿ ಧಾರ್ಮಿಕ ಮನೋಭಾವದಿಂದ ಶ್ರೀ ಲಕ್ಷ್ಮಿ ಪೂಜೆ ಕಾರ್ಯಕ್ರಮ ನಡೆಯುತ್ತಿದೆ.

ಇಂತಹ ಕಾರ್ಯಕ್ರಮಗಳ ಜೊತೆಗೆ ಮಹಿಳೆಯರು ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಸದೃಢಗೊಳ್ಳಬೇಕು, ಪ್ರಥಮವಾಗಿ ಸ್ತ್ರೀಯರು ಸಹ ಪುರುಷರಿಗಿಂತ ಸಮಾನರು ಎಂದು ಸಮಾನತೆ ಸಾರಿದ ಧರ್ಮ ಎಂದರೆ ಅದು ವೀರಶೈವ ಲಿಂಗಾಯತ ಧರ್ಮ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹೆಗ್ಗೋವೆ ಪುಟ್ಟರಾಜು ಈ ಸಮಯದಲ್ಲಿ ಲಕ್ಷ್ಮಿ ಪೂಜೆ ಕಾರ್ಯಕ್ರಮ ಮಾಡುವ ಉದ್ದೇಶ ಏನೆಂದರೆ ಈ ಭಾಗದಲ್ಲಿ ಅತಿ ಹೆಚ್ಚು ರೈತರಗಳಿದ್ದು ರೈತರಿಗೆ ಸುಗ್ಗಿ ಕಾಲ ಎಂದರೆ ಇದೇ ತಿಂಗಳಿನಲ್ಲಿ ಯಾಕೆಂದರೆ ರೈತರಿಗೆ ಅವರು ಬೆಳೆದಂತಹ ಬೆಳೆ ಕಟಾವು ಮಾಡಿ ಮನೆಗೆ ಬರುವಂತಹ ಸಂದರ್ಭ ಸುಗ್ಗಿ ಎಂದು ಕರೆಯುತ್ತೇವೆ.ನಾವು ಬೆಳದಿಂದಿರುವಂತಹ ಬೆಳೆ ಲಕ್ಷ್ಮಿಯಾಗಿ ಎಲ್ಲರ ಮನೆ ಬಾಗಿಲಿಗೂ ಬರಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಸಾಮೂಹಿಕ ಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷ ರು ಹೆಗ್ಗೊವೆ ಪುಟ್ಟರಾಜು, ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕರು ಮಮತಾ ಹರೀಶ್ ರಾವ್, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರು ನವೀನ್ ಚಂದ್ರ ಶೆಟ್ಟಿ, ಸದಸ್ಯರು ಉಮಾನಾಥ್ ಸುವರ್ಣ,ಕುನಿಗನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಶಿಲ್ಪಾ ಜಗದೀಶ್, ಮಾಜಿ ಅಧ್ಯಕ್ಷರು ಇಬ್ರಾಹಿಂ, ಸದಸ್ಯರು ಕೆ ಎಸ್ ಪ್ರಕಾಶ್, ಕಾಫಿ ಬೆಳೆಗಾರರು ಹೆಚ್ಎಸ್ ಧರ್ಮರಾಜ್, ಎಪಿಎಂಸಿ ಮಾಜಿ ಅಧ್ಯಕ್ಷರು ಆರ್ ಎಲ್ ದೇವರಾಜ್, ಯೋಗ ಗುರುಗಳು ಚೇತನ್ ಗುರೂಜಿ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *