
ಸಕಲೇಶಪುರ :- ತಾಲೂಕು ಯಸಳೂರು ಹೋಬಳಿ ಹೊಸೂರು ಗ್ರಾಮಪಂಚಾಯಿತಿಯ ಈಚಲಬೀಡುನಲ್ಲಿ ಜ್ಞಾನ ಸಮೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ವತಿಂದ ಜೆ ಹೆಚ್ ಪಿ ಎಸ್ ಶಾಲೆಯಲ್ಲಿ ಗೀತಾ ರಾಮಾನಂದ ಅವರ ಮಾರ್ಗದರ್ಶನದಲ್ಲಿ ಉಚಿತ ಸ್ಪೋಕನ್ ಇಂಗ್ಲಿಷ್ ಕೋರ್ಸ್ ಪ್ರಾರಂಭಿಸಲಾಯಿತು.
ಜ್ಞಾನ ಸಮೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಸಂಸ್ಥಾಪಕರಾದ ಕಾಮನಹಳ್ಳಿ ಕೀರ್ತನಂದ(ಕೀರ್ತಿ ) ಮಾತನಾಡಿ ” ಗ್ರಾಮೀಣಮಟ್ಟದಿಂದಲೂ ಮಾತೃಭಾಷೆಯ ಜೊತೆಗೆ ಇಂಗ್ಲಿಷ್ ಕಲಿಕೆ ಮುಖ್ಯವಾಗಿದ್ದು. ನಮ್ಮ ಜ್ಞಾನ ಸಮೃದ್ಧಿ ಚಾರಿಟೇಬಲ್ ಟ್ರಸ್ಟ್ (ರಿ ) ಸಂಸ್ಥೆಯ ಮುಖಾಂತರ ಆರಂಭಿಸಿರುವ ಈ ಉಚಿತ ಸ್ಪೋಕನ್ ಇಂಗ್ಲೀಷ್ ಕ್ಲಾಸಿನ ಉಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳುವಂತಾಗಲಿ. ಹಾಗೂ ಮುಂದಿನ ದಿನಗಳಲ್ಲಿ ಪ್ರತಿ ಹೋಬಳಿ ಮಟ್ಟದಲ್ಲೂ ಕೂಡ ಈ ತರದ ಶಾಲೆಯನ್ನು, ಸಂಸ್ಥೆಯ ಮುಖಾಂತರ ತೆರೆಯಲಾಗುವುದು.” ಎಂದು ಹೇಳಿದರು
ಈ ಸಂದರ್ಭದಲ್ಲಿ ಉಪನ್ಯಾಸಕಿಯಾದ ಗೀತಾ ರಮಾನಂದ್,ಸೇರಿದಂತೆ ಅಕ್ಕ ಪಕ್ಕದ ಗ್ರಾಮಸ್ಥರು, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.




