
ಸಕಲೇಶಪುರ : ಶನಿವಾರ ನಡೆದ ಕಾರ್ಯಕ್ರಮದಲ್ಲಿ ತಾಲೂಕು ಅತಿಥಿ ಶಿಕ್ಷಕರ ಸಂಘವು ತಾಲೂಕು ಜಿಲ್ಲೆ ಹಾಗೂ ರಾಜ್ಯದಲ್ಲಿರುವ ಸುಮಾರು 43000 ಸಾವಿರ ಅಧಿಕ ಅಥಿತಿ ಶಿಕ್ಷಕರ ಪರವಾಗಿ ಮುಂದಿನ ಚಳಿಗಾಲದ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರಕ್ಕೆ ಅತಿಥಿ ಶಿಕ್ಷಕರ ಸಾಕಷ್ಟು ಬೇಡಿಕೆ ಸಲ್ಲಿಸಲಾಗಿದೆ, ಅದನ್ನು ಸದನದಲ್ಲಿ ಮಾತನಾಡಿ ನಮ್ಮ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮನವಿ ಕೊಡುವುದರ ಜೊತೆಗೆ ಅತಿಥಿ ಶಿಕ್ಷಕರ ಎಲ್ಲಾ ಸಮಸ್ಯೆಗಳನ್ನು ಕ್ಷಣ ಮಾತ್ರದಲ್ಲಿ ಎಲ್ಲಾ ಪರಿಹಾರ ಮಾಡಿರುವ ಕಾರಣಕ್ಕೆ ತಾಲೂಕು ಅತಿಥಿ ಶಿಕ್ಷಕರ ಸಂಘ ದ ವತಿಯಿಂದ ಗೌರವ ಸೂಚಕವಾಗಿ ಸನ್ಮಾನಿಲಾಯಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷ ವೆಂಕಟೇಶ್ ಮೈತ್ರಿಯ ತಾಲೂಕು ಗೌರವ ಅಧ್ಯಕ್ಷರು ಹಾಲಪ್ಪ ಎಂ ಎಸ್ ಅಧ್ಯಕ್ಷರು ನವೀನ್ ಕೃಷ್ಣಕುಮಾರ್ ಪ್ರದಾನ ಕಾರ್ಯದರ್ಶಿ ರಾಧಾ ಕೆ. ಎಚ್. ಪ್ರಶಾಂತ್ ಹಾಗೂ ಎಲ್ಲಾ ಅತಿಥಿ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜೈಲು ಖೈದಿಗಿಂತ ಕಡಿಮೆ ಮಟ್ಟದ ವೇತನ ಪಡೆಯುತ್ತಿದ್ದೇವೆ ಗುಣಮಟ್ಟದ ಶಿಕ್ಷಣ ನೀಡಲು ನಾವು ಎಲ್ಲಾ ರೀತಿಯ ತರಬೇತಿ ಪಡೆದಿದ್ದೇವೆ ಸಾಕಷ್ಟು ವರ್ಷದಿಂದ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದೇನೆ ಸಂಸಾರ ನಿಭಾಯಿಸಲು ಈ ವೇತನ ಇವತ್ತಿನ ದುಬಾರಿ ಬೆಲೆಯ ವೆಚ್ಚದಲ್ಲಿ ಸಾಕಾಗುವುದಿಲ್ಲ ನಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಆಗುತ್ತಿಲ್ಲ ಒಳ್ಳೆ ಬಟ್ಟೆ ಕೊಡಿಸಲು ಆಗುತ್ತಿಲ್ಲ ನಾವು ಸರ್ಕಾರಿ ಶಾಲೆಯ ಶಿಕ್ಷಕರ ಹಾಗೆ ಕೆಲಸ ಮಾಡಿದರು ಅವರಿಗೆ ಸಿಗುವ ಯಾವ ಸೌಲಭ್ಯ ನಮಗಿಲ್ಲ ಒಂದು ರಜೆ ದಿನಗಳಿಲ್ಲ ಆರೋಗ್ಯ ಭತ್ಯೆ ಇಲ್ಲ ತಿಂಗಳಿಗೆ ಸರಿಯಾಗಿ ಸಂಬಳ ಆಗಲ್ಲ ಶಾಲೆಯಲ್ಲಿ ತಾರತಮ್ಯ ಎದುರಿಸಬೇಕು ಹಾಗಾಗಿ ನಮ್ಮ ಎಲ್ಲ ಬೇಡಿಕೆಗಳು ಜಾರಿಗೆ ತರುವ ಕೆಲಸ ಶಾಸಕರು ಮಾಡಿ ಎಂದು ಅತಿಥಿ ಶಿಕ್ಷಕರ ಸಮಸ್ಯೆಯನ್ನು ಆಲೂರು ಸಕಲೇಶಪುರ ಬಾಗದ ಜನಪ್ರಿಯ ಶಾಸಕ ಸಿಮೆಂಟ್ ಮಂಜು ಅವರಿಗೆ ತಿಳಿಯಪಡಿಸುವ ಮೂಲಕ ತಾಲೂಕಿನ ಒಳಗೆ ಇರುವ ಅತಿಥಿ ಶಿಕ್ಷಕರ ಸಾಕಷ್ಟು ಸಮಸ್ಯೆಯನ್ನು ಕಂಡಿತಾ ಬಗೆಹರಿಸುವ ವಿಶ್ವಾಸ ನೀಡಿದರು.
ಬೇಡಿಕೆಗಳು ಕನಿಷ್ಠ 25000 ವೇತನ ಮಂಜೂರು ಮಾಡುವಂತೆ ಸದನದಲ್ಲಿ ಚರ್ಚಿಸುವುದು
ಸರ್ಕಾರಿ ಶಾಲೆಗಳ ಶಿಕ್ಷಕರ ಹಾಗೆ ಎಲ್ಲಾ ರೀತಿಯ ಸವಲತ್ತು ಕಲ್ಪಿಸುವುದು
ಅತಿಥಿ ಶಿಕ್ಷಕರು ಎನ್ನುವ ತಾರತಮ್ಯ ಬಿಟ್ಟು ಗೌರವ ಧನ ಪಡೆಯುವ ಶಿಕ್ಷಕರು ಆಗಿರುವ ಕಾರಣಕ್ಕೆ ಗೌರವ ಶಿಕ್ಷಕರು ಎಂದು ಪರಿಗಣಿಸುವುದು
ಪ್ರತಿ ವರ್ಷ ನೇಮಕಾತಿ ಮಾಡಿಕೊಳ್ಳುವುದು ಹ ನೇಮಕಾತಿಯಲ್ಲಿ ಗೌರವ ಶಿಕ್ಷಕರಿಗಾಗಿ 50% ಮೀಸಲಿಡುವುದು
ಪ್ರತಿ ವರ್ಷ 5%ಅಂತೆ ಕೃಪಾಂಕ ಪಡೆಯುವುದು ತಾಲೂಕು ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ನಡೆಯುವ ಎಲ್ಲಾ ಸನ್ಮಾನಕ್ಕೆ ಉತ್ತಮ ಮಟ್ಟದ ಗೌರವ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸುವುದು
ಹರಿಯಾಣ ಪಂಜಾಬ್ ಈಗೆ ಹಲವಾರು ಕಡೆಗಳಲ್ಲಿ ಅತಿಥಿ ಶಿಕ್ಷಕರನ್ನು ಖಾಯಂ ಮಾಡಿಕೊಂಡ ಹಾಗೆ ಕರ್ನಾಟಕ ರಾಜ್ಯದಲ್ಲಿ ಮಾಡಿಕೊಳ್ಳುವುದುಬೇರೆ ಜಿಲ್ಲೆಗಳ ಅತಿಥಿ ಶಿಕ್ಷಕರಿಗೆ ಹಾಗೂ ಬೇರೆ ಬೇರೆ ಜಿಲ್ಲೆಗಳಿಂದ ಬಂದಿರುವ ಸರ್ಕಾರಿ ನೌಕರರು ಪತಿ ಅಥವಾ ಪತ್ನಿಯರಿಗೆ ಈ ತಾಲೂಕಿನಲ್ಲಿ ಅತಿಥಿ ಶಿಕ್ಷಕರ ಕೆಲಸ ನೀಡಬಾರದು
ಇದರಿಂದ ಸ್ಥಳೀಯ ಮಟ್ಟದ ಪದವಿದರಾ ಶಿಕ್ಷಕರಾಗಿರುವ ನಿರುದ್ಯೋಗಿಗಳು ಮನೆಯಲ್ಲಿ ಕುಳಿತಿದ್ದಾರೆ ಬೇರೆ ಜಿಲ್ಲೆಗಳಿಂದ ಬಂದಿರುವವರು ಉದ್ಯೋಗ ಪಡೆದು ಸ್ಥಳೀಯರ ಅವಕಾಶ ಕಸಿಯುತಿದ್ದಾರೆ ಹಾಗಾಗಿ ಮೊದಲು ಸ್ಥಳೀಯರಿಗೆ ಅವಕಾಶ ಕಲ್ಪಿಸಿಕೊಡುವನಿಟ್ಟಿನಲ್ಲಿ ಆದ್ಯತೆ ನೀಡುವುದು
ಮೊದಲು ಕರ್ತವ್ಯ ನಿರ್ವಹಿಸಿದ ಶಿಕ್ಷಕರನ್ನು ಮುಂದಿನ ವರ್ಷ ಬಿಡುಗಡೆ ಗೊಳಿಸದೆ ಮುಂದುವರೆಸುವುದು
ವರ್ಷದ 12ತಿಂಗಳು ವೇತನ ನೀಡುವುದುಸಮಾನ ಕೆಲಸಕ್ಕೆ ಸಮಾನ ವೇತನ ಎನ್ನುವ ಸುಪ್ರೀಂ ಕೋರ್ಟಿನ ಆದೇಶದಂತೆ ಸಮಾನ ವೇತನ ಮಂಜೂರು ಮಾಡುವಂತೆ ಸದನದಲ್ಲಿ ಪ್ರಸ್ತಾಪ ಮಾಡುವುದು
ಸರ್ಕಾರ ಗಮನ ಹರಿಸಿ ಬೇಡಿಕೆ ಈಡೇರಿಸುವುದು ಈಗೆ ಹಲವಾರು ಬೇಡಿಕೆಗಳನ್ನು ಶಾಸಕರ ಮುಂದೆ ಮನವಿ ಮಾಡಿದರು

