ಹಾಸನ: ಪತ್ರಕರ್ತ ಸೋಮೇಶ್ (ಸುಗಂಧರಾಜು) ಅವರ ಪುತ್ರಿ ನೇಹ ಎಸ್. ರಾಜು ೧೭ ವರ್ಷ ಎಂಬುವರು ಬೆಂಗಳೂರು ಆಸ್ಪತ್ರೆಯಲ್ಲಿ ಸಾವನಪ್ಪಿ ನಂತರ ಅವರ ಮೃತ ದೇಹವನ್ನು ಆಕೆಯ ಆಸೆಯಂತೆಯೇ ನಗರದ ಹಿಮ್ಸ್ ಆಸ್ಪತ್ರೆಗೆ ದಾನ ಮಾಡಲಾಯಿತು.

ಹಾಸನದ ಪತ್ರಕರ್ತರಾದ ಸೋಮೇಶ್ ಮಗಳು ನೇಹಾ, ತೀವ್ರ ಅನಾರೋಗ್ಯದಿಂದ ಕಳೆದ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಅಲ್ಲಿಂದ ತಡರಾತ್ರಿ ೨ ಗಂಟೆ ಸುಮಾರಿಗೆ ಮೃತದೇಹವನ್ನು ನಗರಕ್ಕೆ ತರಲಾಯಿತು.

ಬೆಳಗ್ಗೆ ಎಲ್ಲಾ ಪ್ರಕ್ರಿಯೆ ಮುಗಿದ ಬಳಿಕ ಮಗಳ ಇಚ್ಛೆಯಂತೆ, ಸೋಮೇಶ್ ದಂಪತಿ ಹಾಗೂ ಇತರರು ದೇಹದಾನ ಮಾಡಿದರು.

ಪ್ರತಿಭಾವಂತ ವಿದ್ಯಾರ್ಥಿನಿ ನೇಹಾಳಿಗೆ ಕ್ಯಾನ್ಸರ್ ಇತ್ತು ಎನ್ನಲಾಗಿದೆ. ಇದಕ್ಕಾಗಿ ಕೆಲ ತಿಂಗಳಿಂದ ಚಿಕಿತ್ಸೆ ಸಹ ಪಡೆಯುತ್ತಿದ್ದಳು. ಆದರೆ ಅದು ಗಂಭೀರ ಸ್ವರೂಪ ಪಡೆಯಿತು.

ಕೆಲ ದಿನಗಳ ಹಿಂದೆ = ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಶುಕ್ರವಾರ ಸಂಜೆ ಕೊನೆಯುಸಿರೆಳೆದಳು. ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ೬೨೫ಕ್ಕೆ ೬೨೪ ಅಂಕ ಪಡೆದಿದ್ದ ಪ್ರತಿಭಾವಂತೆ ನೇಹಾ. ಹಾಸನಕ್ಕೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರತಿಭಾ ಪುರಸ್ಕಾರ ಮಾಡಿ ಅಭಿನಂದಿಸಲಾಗಿತ್ತು.

ಹಾಸನದ ಹೋಲಿ ಚಿನ್ ಶಾಲೆಯಲ್ಲಿ ೧೦ ನೇ ತರಗತಿ ಓದುವಾಗಲೇ ರಾಜ್ಯಕ್ಕೆ ಎರಡನೇ ೨ ರ‍್ಯಾಂಕ್ ಪಡೆಯುವ ಮೂಲಕ ಹೆತ್ತವರ ಆಸೆಯನ್ನು ಈಡೇರಿಸುವರೆ ಭರವಸೆ ಮೂಡಿಸಿದ್ದಳು. ಹಾಲಿ ಬೆಂಗಳೂರಿನ ನಾರಾಯಣ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಳು. ಭವಿಷ್ಯದಲ್ಲಿ ಡಾಕ್ಟರ್ ಆಗಬೇಕೆಂದು ಕನಸು ಕಂಡಿದ್ದಳು. ಆದರೆ ಅವಳ ಮತ್ತು ಹೆತ್ತವರ ಆಸೆ ಕೈಗೂಡುವ ಮುನ್ನವೇ ಕೊನೆ ಉಸಿರು ಎಳೆದಿದ್ದಾಳೆ.

ಮಗಳನ್ನು ಕಳೆದುಕೊಂಡ ಹೆತ್ತವರು ಅತೀವ ದುಃಖತಪ್ತರಾಗಿದ್ದಾರೆ. ಪ್ರತಿಭಾನ್ವಿತ ವಿದ್ಯಾರ್ಥಿನಿ ಅಕಾಲಿಕ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಹೆಚ್.ಬಿ. ಮದನಗೌಡ, ಹಾಸನ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಾಳುಗೋಪಾಲ್, ಮಾಜಿ ಅಧ್ಯಕ್ಷ ರವಿನಾಕಲಗೂಡು, ಬಿ.ಆರ್. ಉದಯಕುಮಾರ್, ಉಪಾಧ್ಯಕ್ಷ ನಂಜುಂಡೇಗೌಡ, ಕಾರ್ಯದರ್ಶಿ ಬನವಾಸೆ ಮಂಜು, ಹಾಗೂ ಪದಾಧಿಕಾರಿಗಳು, ನೇಹಾ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಸೋಮೇಶ್ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *