ಸಕಲೇಶಪುರ : ಸೋಮವಾರ ತಾಲೂಕಿನ ಯಸಳೂರು ಹೋಬಳಿಯ ದಬ್ಬಳ್ಳಿ ಗ್ರಾಮದ ನೀರ್ಕೊಲ್ಲಿ ಎಂಬ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ವಿಕ್ರಾಂತ್ ಎಂಬ ಕಾಡಾನೆ ಸೆರೆಗೆ ತೆರಳಿದ್ದ ಅರ್ಜುನ ಎಂಬ ಸಾಕಾನೆ ಕಾಡಾನೆ ದಾಳಿಗೆ ಬಲಿಯಾಗಿದ್ದು ಮಂಗಳವಾರ ಅರ್ಜುನನ ಅಂತ್ಯಕ್ರಿಯೆಗೆ ಸಿದ್ದತೆ ನಡೆಸುತ್ತಿದ್ದ ಸಂದರ್ಭದಲ್ಲಿ ಅರ್ಜುನನ ಸಾವಿಗೆ ಅರಣ್ಯ ಇಲಾಖೆಯು ಕಾರಣವಾಗಿದ್ದು ನಿವೃತ್ತಿ ಹೊಂದಿದ ಅರ್ಜುನನನ್ನು ಕಾಡಾನೆ ಸೆರೆಹಿಡಿಯುವ ಕಾರ್ಯಕ್ಕೆ ಬಳಕೆ ಮಾಡಿಕೊಂಡಿದ್ದು ಕಾನೂನಿಗೆ ವಿರುದ್ದವಾಗಿದ್ದು ಕೂಡಲೇ ಅರ್ಜುನನ ಸಾವಿಗೆ ಕಾರಣವಾದ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು ಹಾಗೂ ಇದನ್ನು ಸಿಒಡಿ ತನಿಖೆಗೆ ಒಪ್ಪಿಸಬೇಕು ಎಂದು ಪ್ರತಿಭಟನಾಕಾರರು ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು.

ಅರ್ಜುನನ ಮೃತದೇಹದ ಮುಂದೆ ಮಾಹುತ ವಿನೀತ್ ತನ್ನ ಮನೆಯ ಸದಸ್ಯರೊಬ್ಬರನ್ನು ಕಳೆದುಕೊಂಡಷ್ಟೇ ದುಖಿದರಾಗಿ ಬಿಕ್ಕಿ ಬಿಕ್ಕಿ ಅಳುವ ದೃಶ್ಯ ಎಂತವರನ್ನು ಮನ ಕಲಕುವಂತಿತ್ತು.

ಅರ್ಜುನನಿಗೆ ಮೈಸೂರು ದಸರಾ ಸಂದರ್ಭದಲ್ಲಿ ಪೂಜೆ ಸಲ್ಲಿಸುತ್ತಿದ್ದ ಪ್ರಾಹ್ಲಾದ್ ಜೋಷಿ ಅವರು ಮೃತದೇಹದ ಅಂತಿಮ ದರ್ಶನವನ್ನು ಪಡೆದು ಪೂಜೆ ಸಲ್ಲಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದರು.

ಮೈಸೂರು ಒಡೆಯರಾದ ಯದುವೀರ್ ಒಡೆಯರ್ ,ಹಾಗೂ ಜಯಚಾಮರಾಜ ಒಡೆಯರ್ ಅವರ ಮೊಮ್ಮಗಳಾದ ಶೃತಿ ಕೀರ್ತಿ ದೇವ್, ,ಕೊಡಗು ಕಿರುಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಕಲ್ಮಠದ ಮಹಾಂತ ಸ್ವಾಮೀಜಿ, ಹಾಗೂ ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿದ ಹಂತದ ಅಧಿಕಾರಿಗಳು ಅಂತಿಮ ದರ್ಶನವನ್ನು ಪಡೆದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *