ಅರಸೀಕೆರೆ ತಾಲ್ಲೂಕು ಗಂಡಸಿ ಹೋಬಳಿ ಹಿರಿಸಮುದ್ರ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು, ಕೃಷಿ ಮಹಾವಿದ್ಯಾಲಯ ಕಾರೇಕೆರೆ ಹಾಸನದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಜೈವಿಕ ಪೀಡೆನಾಶಕಗಳ ಪ್ರಾಮುಖ್ಯತೆಯನ್ನು ತಿಳಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಜೈವಿಕ ಪೀಡೆನಾಶಕಗಳು ಕೆಲವು ವಿಧದ ಪೀಡೆನಾಶಕಗಳಾಗಿದ್ದು, ಅವುಗಳು ನೈಸರ್ಗಿಕ ವಸ್ತುಗಳಿಂದ, ಸಸ್ಯಗಳು, ಪ್ರಾಣಿಗಳು, ಬ್ಯಾಕ್ಟೀರಿಯಾ ಮತ್ತು ಕೆಲವು ಒಳಗೊಂಡಿದ್ದು ಮಣ್ಣಿನ ಫಲತ್ತತೆಯನ್ನು ಕಾಪಾಡುತ್ತದೆ ಎಂದು ತಿಳಿಸಿದರು.

ನಂತರ ಜೈವಿಕ ಪೀಡೆನಾಶಕಗಳ ವಿಧಗಳು ಮತ್ತು ಅವುಗಳನ್ನು ಯಾವ ರೀತಿಯಲ್ಲಿ ಸಿಂಪರಣೆ ಮಾಡಬೇಕು ಎಂದು ತಿಳಿಸಿದರು.

ಅದಾದ ನಂತರ ಈಗಾಗಲೇ ಜೈವಿಕ ಪೀಡೆನಾಶಕಗಳನ್ನು ಉಪಯೋಗಿಸಿದ ರೈತರಿಂದ ಅದರ ಫಲಿತಾಂಶವನ್ನು ತೋರಿಸಿದರು.

ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಚೆನ್ನಕೇಶವ ಸಿ , ಸಹಾಯಕ ಪ್ರಾಧ್ಯಾಪಕರು ,ಸಸ್ಯರೋಗಶಸ್ತ್ರ ವಿಭಾಗ ಕೃಷಿ ಮಹಾವಿದ್ಯಾಲಯ ಕಾರೇಕೆರೆ ಹಾಸನ ಇವರು ಆಗಮಿಸಿ ಜೈವಿಕ ಪೀಡೆನಾಶಕಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *