ಮಣ್ಣಿನ ಆರೋಗ್ಯಕ್ಕಾಗಿ ಎರೆಹುಳು ಗೊಬ್ಬರ

ಚಗಚಗೆರೆ : ಕೃಷಿ ವಿಶ್ವವಿದ್ಯಾಲಯ ಬೆಂಗಳೂರು, ಕೃಷಿ ಮಹಾವಿದ್ಯಾಲಯ ಕಾರೇಕರೆ ಹಾಸನದ, ಅಂತಿಮ ವರ್ಷದ ಕೃಷಿ ಹಾಗೂ ಜೈವಿಕ ತಂತ್ರಜ್ಞಾನ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯನುಭವ ಶಿಬಿರದ ಅಂಗವಾಗಿ ಅರಸೀಕೆರೆ ತಾಲ್ಲೂಕಿನ ಚಗಚಗೆರೆ ಗ್ರಾಮದಲ್ಲಿ ಎರೆ ಹುಳು ಗೊಬ್ಬರ ಪದ್ಧತಿ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಎರೆಹುಳುಗಳನ್ನು ರೈತನ ಮಿತ್ರ, ರೈತ ಬಂಧು ಎಂದು ಕರೆಯಲಾಗುತ್ತದೆ. ರೈತನಂತೆ ಭೂಮಿಯಲ್ಲಿ ನಿರಂತರವಾಗಿ ಕೆಲಸ ಮಾಡುವ ಹುಳುಗಳು ನೈಸರ್ಗಿವಾಗಿ ಪೋಷಕಾಂಶ ಯುಕ್ತ ಗೊಬ್ಬರವನ್ನು ರೈತರಿಗೆ ಒದಗಿಸುತ್ತವೆ. ಭೂಮಿಗೆ ಬಿತ್ತನೆ ಸಮಯದಲ್ಲಿ ಕೊಟ್ಟಿಗೆ ಗೊಬ್ಬರ ಹಾಕುವುದರಿಂದ ಅದು ಸಂಪೂರ್ಣವಾಗಿ ಕೊಳೆಯದೆ ಇದ್ದರೆ ಅದು ಬೀಜಗಳಿಗೆ ಮೊಳಕೆ ಹೊಡೆಯಲು ಸಮಸ್ಯೆಯನ್ನು ಉಂಟುಮಾಡುತ್ತದೆ ಅದ್ದರಿಂದ ಎರೆಹುಳು ಗೊಬ್ಬರವನ್ನು ಬಳಸುವುದರಿಂದ ಬೀಜಗಳ ಮೊಳಕೆ ಹೊಡೆಯುವುದುನ್ನು ಹೆಚ್ಚಿಸುತ್ತದೆ ಹಾಗೆ ಹೆಚ್ಚಿನ ಇಳುವರಿಯನ್ನು ಪಡೆಯಬಹುದಾಗಿದೆ.

ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಡಾ. ಪ್ರಮೋದ್ ಜಿ, ಬೇಸಾಯ ಶಾಸ್ತ್ರ ವಿಭಾಗ ಇವರು ಎರೆಹುಳು ಗೊಬ್ಬರ ತಯಾರಿಸುವ ವಿಧಾನವನ್ನು ರೈತರಿಗೆ ತಿಳಿಸಿಕೊಟ್ಟರು ಹಾಗೂ ಎರೆಹುಳು ಗೊಬ್ಬರವನ್ನು ತಯಾರಿಸಲು ಬಳಸುವ ಎರೆಹುಳುಗಳು ತಳಿಗಳ ಬಗ್ಗೆ ಮಾಹಿತಿಯನ್ನು ನೀಡಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *