ಬೇಲೂರು-ನಾರ್ವೆ : ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಈ ಹಿಂದೆ ದಿನಾಂಕ 30-07-2023 ಹಾಗು 16-08-2023ಕ್ಕೆ ಈ ವಿಷಯದ ಬಗ್ಗೆ, ತಮ್ಮಲ್ಲಿ ವಿನಯಪೂರ್ವಕವಾಗಿ ಕೇಳಿಕೊಂಡು ಬಸ್ಸಿನ ವ್ಯವಸ್ಥೆ ಸರಿಪಡಿಸಿಕೊಡಲು ಕೇಳಿಕೊಂಡಿದವು.

ಈ ಸಮಸ್ಯೆಯ ಬಗ್ಗೆ, ಅಧಿಕಾರಿಗಳು ತಲೆಕೆಡಿಸಿಕೊಂಡಿರುವುದಿಲ್ಲ. ಪ್ರತಿದಿನ ಸುಂಡೆಕೆರೆಯಲ್ಲಿ ವಿದ್ಯಾರ್ಥಿಗಳ ಮನೆಯವರು ಕಾರು, ಆಟೊ ಬಾಡಿಗೆಗೆ ಮಾಡಿಕೊಂಡು ಬಂದು ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದಾರೆನಾರ್ವೆ ಸುಂಡೆಕೆರೆ ಬಿರಡಹಳ್ಳಿ, ಸುಲಗಳಲೆಯಲ್ಲಿ 10 ರಿಂದ 15 ಆನೆಗಳು ಪ್ರತಿದಿನ ದಾಂದಲೆ ಮಾಡುತ್ತಿದ್ದು ಯಾರಿಗೆ ಯಾವಗ ಏನು ಸಮಸ್ಯೆ ಆಗುತ್ತದೆಯೆಂದು ಜೀವಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ಊರನ್ನು ತಲುಪುತಿದ್ದಾರೆ.6ಗಂಟೆಯ ಮೇಲೆ ಈ ರಸ್ತೆಯಲ್ಲಿ ಪ್ರಯಾಣಿಸಿದರೆ ಏನು ಅನಾಹುತವಾಗುತ್ತದೆಯೋ ಎಂದು ಯೋಚಿಸಬೇಕಾಗುತ್ತದೆ. ಹಲವಾರು ಬಾರಿ ಇಷ್ಟೆಲ್ಲಾ ವಿವರಿಸಿದರು.

ವಿದ್ಯಾರ್ಥಿಗಳಿಗೊಸ್ಕರ ಬಸ್ಸಿನ ಸಮಯ ಬದಲಾಯಿಸಲು ಸಾಧ್ಯವಾಗಿಲ್ಲ ಎಂಬುದ ಬೇಸರದ ಸಂಗತಿ.ಈ ಸಮಸ್ಯೆಯ ನಡುವೆಯೇ ಪ್ರತಿದಿನ ಸಕಲೆಶಪುರದಿಂದ ನಾರ್ವೆಗೆ ಬರುವ ಬೆಳಗಿನ ಬಸ್ಸು 7.40ಕ್ಕೆ ಬಂದು 7.45ಕ್ಕೆ ನಾರ್ವೆಯಿಂದ ಸಕಲೆಶಪುರಕ್ಕೆ ಹೊರಟು 8.30ರೊಳಗಾಗಿ ಸಕಲೆಶಪುರ ಬಸ್ಸು ನಿಲ್ದಾಣ ತಲುಪುತ್ತಿತ್ತು ಇದರಿಂದ ಹಾಸನ ಹೊಗುವ ವಿದ್ಯಾರ್ಥಿಗಳಿಗೆ ಕಾಲೇಜು ಪ್ರಾರಂಬದ ಸಮಯಕ್ಕೆ ಸರಿಯಾಗಿ ಹಾಜರಾಗಬಹುದಿತ್ತು.

ಆದರೆ ಇತ್ತೀಚಿನ 4 ದಿನಗಳಿಂದ ನಾರ್ವೆಯಿಂದ ಬರುವ ಬಸ್ಸು ಹಲಸುಲಿಗೆ ಗ್ರಾಮದೊಳಗೆ ಹೋಗಿಬರುತ್ತಿರುವುದರಿಂದ ಕಾಲೇಜು ಪ್ರಾರಂಭದ ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ.

ಆದ್ದರಿಂದ ಈ ಮೇಲ್ಕಂಡ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ದಿನಾಂಕ 07-12-2023ರೊಳಗಾಗಿ ಈ ಏರಡು ಬಸ್ಸಿನ ಸಮಯವನ್ನು ಸರಿಪಡಿಸಿಕೊಡದಿದ್ದರೆ ದಿನಾಂಕ 08-12-2023 ರಂದು ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ರಸ್ತೆತಡ ನಡೆಸಲು ತೀರ್ಮಾನಿಸಿರುತ್ತೇವೆ.

ಇಂತಿ : ನಾರ್ವೆ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಹಾಗು ವಿದ್ಯಾರ್ಥಿಗಳು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *