
ಸಕಲೇಶಪುರ ತಾಲೂಕು ಹಾನುಬಾಳು ಹೋಬಳಿಯ ಮಾವಿನಹಳ್ಳಿ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಗ್ರಾಮದಲ್ಲಿ ಮೇಯಲು ಬಿಡುತ್ತಿದ್ದ ಸುಮಾರು 5 ರಿಂದ 6 ದನಗಳನ್ನು ಚಿರತೆ ಹಿಡಿದು ತಿನ್ನುತ್ತಿದ್ದು
ಇಂದೂ ಕೂಡ ಮೇಯಲು ಹೋಗಿದ್ದ ದನವನ್ನು ಚಿರತೆ ಹಿಡಿದು ತಿಂದಿದ್ದು ಇಂದು ಗ್ರಾಮಕ್ಕೆ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಶಿಲ್ಪ ಅವರು ಗ್ರಾಮಕ್ಕೆ ತೆರಳಿ ವಿಚಾರಿಸಲು ಹೋದಾಗ ಮಾವಿನಹಳ್ಳಿ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು
ಕೂಡಲೇ ಚಿರತೆಯನ್ನು ಪತ್ತೆಹಚ್ಚಿ ಹಿಡಿಯದಿದ್ದರೆ ಅರಣ್ಯ ಇಲಾಖೆಯ ಮುಂದೆ ಮಾವಿನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಮಾವಿನಹಳ್ಳಿ ಗ್ರಾಮಸ್ಥರಾದ ರವೀಂದ್ರ ಒತ್ತಾಯಿಸಿದ್ದಾರೆ.




