ಕಾಡಾನೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಮೃತಪಟ್ಟ ಅರ್ಜುನ ಮಣ್ಣಲ್ಲಿ ಮಣ್ಣಾಗಿದ್ದಾನೆ. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕು ದಬ್ಬಳ್ಳಿಕಟ್ಟೆ ಅರಣ್ಯದಲ್ಲಿ ಆನೆಯ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಅಂತ್ಯ ಸಂಸ್ಕಾರಕ್ಕೂ ಮುನ್ನ ಅರ್ಜುನನ ಎರಡೂ ದಂತವನ್ನು ಅರಣ್ಯ ಇಲಾಖೆ ಸಿಬ್ಬಂದಿ ತೆಗೆದುಕೊಂಡು ಹೋಗಿದ್ದಾರೆ. ವೈದ್ಯರ ನೆರವಿನೊಂದಿಗೆ ದಂತ ತೆರವು ಮಾಡಿ ಅರಣ್ಯ ಇಲಾಖೆ ಸಿಬ್ಬಂದಿ ತೆಗೆದುಕೊಂಡು ಹೋಗಿದ್ದಾರೆ.

ಅರ್ಜುನನ ದಂತಗಳನ್ನ ಮೈಸೂರಿನ ಅರಣ್ಯ ಭವನದಲ್ಲಿರುವ ಸ್ಯಾಂಡ್ ಕೋಟ್‌ನಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. ಆನೆಗಳು ಎಲ್ಲೆ ಹಸುನೀಗಿದರೂ ಅವುಗಳ ದಂತಗಳನ್ನ ಸಂರಕ್ಷಣೆ ಮಾಡಲಾಗುತ್ತದೆ. ದಂತ ಯಾವ ಆನೆಯದ್ದು ಎಷ್ಟು ವರ್ಷದ ಹಳೆಯದ್ದು ಅಂತ ಅದರ ಮೇಲೆ ಲೇಬಲ್ ಹಾಕಿ ಇಡಲಾಗುತ್ತದೆ

ಭಾರತದಲ್ಲಿ‌ ಆನೆ ದಂತಗಳನ್ನ ಮಾರಾಟ ಮಾಡುವುದು ನಿಷೇಧ. ದಂತಗಳನ್ನ ಅರಣ್ಯ ಇಲಾಖೆ ಕೂಡ ಮಾರುವುದಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾತ್ರ ಹರಾಜು ಹಾಕಲಾಗುತ್ತದೆ. ವಿದೇಶಿಗರು ಅದನ್ನ ಬಿಟ್ ಮಾಡುವ ಮೂಲಕ ಖರೀದಿ ಮಾಡುತ್ತಾರೆ. ದಂತಗಳನ್ನ ಸಾಮಾನ್ಯವಾಗಿ ವಿಗ್ರಹಗಳನ್ನ ತಯಾರಿಸಲು, ಮನೆಗಳ ಅಲಂಕಾರಕ್ಕೆ, ದೇವಸ್ಥಾನಗಳ ಅಲಂಕಾರಕ್ಕೆ ಬಳಸುತ್ತಾರೆ.

ದಂತ ವಿನ್ಯಾಸ, ಆಕಾರ, ಆಕೃತಿ, ಉದ್ದ, ಗಿಡ್ಡ ಎಂಬುದರ ಮೇಲೆ ಆನೆ ದಂತಗಳ ಬೆಲೆ ನಿರ್ಧಾರ ಆಗುತ್ತದೆ. ಕೆಜಿಗೆ ಒಂದು ಲಕ್ಷಕ್ಕೆ ಕಡಿಮೆ ಇಲ್ಲದಂತೆ ಹೆಚ್ಚೆಂದರೆ ಮೂರು ಲಕ್ಷದವರೆಗೂ ಬಿಡ್ ಮೂಲಕ ದಂತಗಳನ್ನು ಖರೀದಿ ಮಾಡಲಾಗುತ್ತದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *