ಆಲೂರು : ತಾಲೂಕಿನ ಹರಿಹಳ್ಳಿಯಲ್ಲಿ ಶ್ರೀ ಹರಿಹರೇಶ್ವರರಿಗೆ(ಮಲ್ಲೇಶ್ವರ) ಕಾರ್ತಿಕೋತ್ಸವ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ದೇವರಿಗೆ ರುದ್ರಾಭಿಷೇಕ, ಪೂಜೆ, ಮಹಾಮಂಗಳಾರತಿ ನೆರವೇರಿತು.

ಕೆಲವು ವರ್ಷಗಳ ಹಿಂದೆ ಈ ದೇವಾಲಯ ಅಭಿವೃದ್ಧಿಪಡಿಸುವ ಉದ್ದೇಶದಿಂದ ಅಷ್ಟಮಂಗಲ ಪ್ರಶ್ನೆಯಿಟ್ಟಾಗ ಹಲವು ಶಾಂತಿಕಾರ್ಯಗಳು ಇಲ್ಲಿ ನಡೆಯಬೇಕೆಂದು ಹೇಳಿದ್ದರು.

ಆ ಪ್ರಯುಕ್ತ ಅನೇಕ ಕ್ರಮಬದ್ದ ಪೂಜೆ, ಪುನಸ್ಕಾರ, ಹೋಮಾದಿಗಳು ಈ ಹಿಂದೆಯೂ ನಡೆದಿದ್ದವು; ಮುಂದುವರೆದ ಭಾಗವಾಗಿ ಇಂದು ನಾಗಾರಾಧನೆ, ಆಶ್ಲೇಷ ಪೂಜೆ (ಬಲಿ), ನಾಗಹೋಮ, ವಟು ಪೂಜೆ, ದುರ್ಗಾದೀಪಾರಾಧನೆ,ಕನ್ನಿಕಾ ಪೂಜೆ, ಸುವಾಸಿನಿ ಪೂಜೆ ಮೊದಲಾದ ಕಾರ್ಯಕ್ರಮಗಳು ನಡೆದಿರುತ್ತವೆ.

ಈ ಪ್ರಯುಕ್ತ ತೀರ್ಥ ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮಗಳು ಶ್ರೀಮತಿ ನಂದಿನಿ ಮೂರ್ತಿ ಮತ್ತು ಶ್ರೀ ಮಂಜುನಾಥಮೂರ್ತಿ ಹಾಗೂ ಶ್ರೀಮತಿ ಸುಮಾ ಮೂರ್ತಿ ಮತ್ತು ಶ್ರೀ ಕೃಷ್ಣಮೂರ್ತಿ ಮುಖಂಡತ್ವದಲ್ಲಿ ನಡೆದವು.

ಸ್ಥಳೀಯರಾದ ಸರ್ವಶ್ರೀ ಸುಬ್ರಹ್ಮಣ್ಯ, ಶಿವೇಗೌಡ, ಕೃಷ್ಣೇಗೌಡ, ಸುಬ್ರಹ್ಮಣ್ಯ, ತಮ್ಮಣ್ಣಗೌಡ, ಮಂಜುನಾಥ, ಸಣ್ಣೇಗೌಡ, ಅರ್ಚಕರಾದ ರಾಮಸ್ವಾಮಿ, ಹಾಲಪ್ಪ, ರಘು, ಮುತ್ತೇಗೌಡ, ಸುಬ್ಬೇಗೌಡ, ಮೋಹನ, ಸಿದ್ದಯ್ಯ, ಲೋಕಯ್ಯ, ಶ್ರೀಮತಿಯರಾದ ಸವಿತಾ, ಶೋಭಾ, ಶೃತಿ, ರತ್ನಾ, ಮೀನಾಕ್ಷಿ, ಮಂಜುಳಾ ಮುಂತಾದವರು ಉಪಸ್ಥಿತರಿದ್ದರು. ಹಾಸನ ಹಾಗೂ ಚಿಕ್ಕಮಗಳೂರಿನ ಋತ್ವಿಜರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ವರದಿ: ಸತ್ಯ ಹರಿಹಳ್ಳಿ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *