ಸಕಲೇಶಪುರ: ಕಸಬಾ ಹೋಬಳಿ ಬೆಳೆಗಾರರ ಸಂಘದ 2025–27ನೇ ಸಾಲಿನ ಕಾರ್ಯಕಾರಿ ಮಂಡಳಿಯ 14ನೇ ಮಾಸಿಕ ಸಭೆ ಮಂಗಳವಾರ ನಗರದ ರಾಘವೇಂದ್ರನಗರದ ಎಚ್‌ಡಿಪಿಎ ಸಭಾಂಗಣದಲ್ಲಿ ಅಧ್ಯಕ್ಷ ಕೆ.ವಿ. ಮೇಘರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಕೆಜಿಎಫ್ ಹಾಗೂ ಎಚ್‌ಡಿಪಿಎ ಮಾಸಿಕ ಸಭೆಗಳ ಚರ್ಚೆ ಮತ್ತು ತೀರ್ಮಾನಗಳ ಕುರಿತು ಮಾಹಿತಿ ನೀಡಲಾಯಿತು.

ಪಶ್ಚಿಮ ಘಟ್ಟಗಳನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸುವ ಕೇಂದ್ರ ಸರ್ಕಾರದ 7ನೇ ಕರಡು ಅಧಿಸೂಚನೆಯ ಸಾಧಕ–ಬಾಧಕಗಳ ಕುರಿತು ಕೆಜಿಎಫ್ ಪ್ರಧಾನ ಕಾರ್ಯದರ್ಶಿ ಟಿ.ಪಿ. ಸುರೇಂದ್ರ ಮಾಹಿತಿ ನೀಡಿದರು.ಎಚ್‌ಡಿಪಿಎ ಪಿಆರ್‌ಎಫ್‌ನ ಸೇವಾ ಸೌಲಭ್ಯಗಳ ಕುರಿತು ಅಧ್ಯಕ್ಷ ಸಿ.ಎಸ್. ಮಹೇಶ್ ಹಾಗೂ ಎಚ್‌ಡಿಪಿಎ ಟ್ರಸ್ಟ್‌ನ ಕಾರ್ಯಚಟುವಟಿಕೆಗಳ ಕುರಿತು ಅಧ್ಯಕ್ಷ ಕೆ.ಎನ್. ಸುಬ್ರಹ್ಮಣ್ಯ ಮಾಹಿತಿ ನೀಡಿದರು.

ಸಭಾಂಗಣ ಬಳಕೆಗೆ ಪ್ರತಿ ಸಭೆಗೆ ₹1,000 ನೀಡಲು ಸಂಘದ ವತಿಯಿಂದ ತೀರ್ಮಾನಿಸಲಾಯಿತು.ಜುಲೈ 24ರಂದು ಹಾಸನದಲ್ಲಿ ನಡೆದ ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗದ ಸಭೆಯಲ್ಲಿ ಬೆಳೆಗಾರರ ಪರವಾಗಿ ಮಂಡಿಸಿದ ಅಹವಾಲುಗಳ ಕುರಿತು ಪಿಆರ್‌ಎಫ್ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಕಂಡಿಗೆ ಮಾಹಿತಿ ನೀಡಿದರು.

ದೇಶಸೇವೆಯಲ್ಲಿ 26 ವರ್ಷ ಸೇವೆ ಸಲ್ಲಿಸಿದ ಮಾಜಿ ಸೈನಿಕ ಹರೀಶ್ ಕೆ.ಎಂ. ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಕಲೇಶಪುರ ಕಸಬಾ ಕಂದಾಯ ಕಚೇರಿಯನ್ನು ಮಿನಿ ವಿಧಾನಸೌಧಕ್ಕೆ ಸ್ಥಳಾಂತರಿಸುವ ಮನವಿಗೆ ಸ್ಪಂದನೆ ದೊರೆತ ಹಿನ್ನೆಲೆಯಲ್ಲಿ ಈ ಪ್ರಯತ್ನಕ್ಕೆ ಕಾರಣರಾದ ಲಕ್ಷ್ಮಣ್ ಹಾಗೂ ವಿಕ್ರಂ ಅವರನ್ನು ಗೌರವಿಸಲಾಯಿತು.

12ನೇ ಅಂತರರಾಷ್ಟ್ರೀಯ ಕಾಫಿ ದಿನಾಚರಣೆಯನ್ನು ಎಲ್ಲರೂ ಒಗ್ಗಟ್ಟಿನಿಂದ ಆಚರಿಸುವ ಕುರಿತು ಚರ್ಚಿಸಲಾಯಿತು. ವಿವಿಧ ಗ್ರಾಮ ಪಂಚಾಯಿತಿ ಬೆಳೆಗಾರ ಸಂಘಟನೆಗಳ ಕಾರ್ಯಚಟುವಟಿಕೆಗಳ ಮಾಹಿತಿ ಹಾಗೂ ಮಾಸಿಕ ಲೆಕ್ಕಪತ್ರ ಮಂಡಿಸಲಾಯಿತು.

ಗೌರವ ಕಾರ್ಯದರ್ಶಿ ಎನ್.ಡಿ. ರಾಕೇಶ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed