
ಸಕಲೇಶಪುರ :ಮೈಸೂರು ಅರಮನೆಯ ಪಟ್ಟದ ಆನೆ ಅರ್ಜುನನ ಸಮಾದಿಗೆ ಇಂದು ಮೈಸೂರು ಅರಮನೆಯ ರಾಜರಾದ ಯದುವೀರ್ ಒಡೆಯರ್ ಹಾಗೂ ಮಹಾರಾಣಿ ತ್ರಿಶಿಕಾ ಕುಮಾರಿ ಒಡೆಯರ್ ಅವರು ಪೂಜೆ ಸಲ್ಲಿಸಿ ಶ್ರದ್ದಾಂಜಲಿ ಸಲ್ಲಿಸಿದರು.
ಮಂಗಳವಾರ ತಾಲೂಕಿನ ಯಸಳೂರು ಹೋಬಳಿಯ ದಬ್ಬಳ್ಳಿಕಟ್ಟೆಯ ನೀರ್ಕೊಲ್ಲಿ ಎಂಬಲ್ಲಿ ಕಾಡಾನೆಯೊಂದಿಗೆ ಸೆಣಸಾಡಿ ವೀರ ಮರಣ ಹೊಂದಿದ ಕ್ಯಾಪ್ಟನ್ ಅರ್ಜುನನ ಸಮಾದಿ ಸ್ಥಳಕ್ಕೆ ಇಂದು ಆಗಮಿಸಿ ಅರ್ಜುನನ ಸಮಾದಿಗೆ ಪೂಜೆ ಸಲ್ಲಿಸಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿದರು.




