ಹಾಸನ: ಕೆಲ ದಿವಸಗಳಷ್ಟೆ ಕಾಡಾಂದಿ ದಾಳಿಯಿಂದ ಓರ್ವರು ಸಾವನಪ್ಪಿದ ಕುಟುಂಬಕ್ಕೆ ೧೫ ಲಕ್ಷ ರೂಗಳ ಪರಿಹಾರ ಮತ್ತು ಆಕ್ರಮಣಕ್ಕೆ ಗಾಯಳಾದವರಿಗೆ ಮಾಸಿಕ ೪ ಸಾವಿರ ರೂಗಳನ್ನು ಅರಣ್ಯ ಇಲಾಖೆಯಿಂದ ಭರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಘೋಷಣೆ ಮಾಡಿದರು.

ಖಾಸಗೀ ಆಸ್ಪತ್ರೆಯಲ್ಲಿ ಕಾಡಾಂದಿ ದಾಳಿಯಿಂದ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರೂ ಮಹಿಳೆಯ ಗಾಯಳುಗಳ ಭೇಟಿ ಮಾಡಿ ದೈರ್ಯ ಹೇಳಿದರು.

ನಂತರ ಇದೆ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಸಚಿವರು, ಕಳೆದ ಸೋಮವಾರವಷ್ಟೆ ಹೊಳೆನರಸಿಪುರ ತಾಲೂಕಿನಲ್ಲಿ ಕಾಡಾಂದಿ ದಾಳಿಯಿಂದ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ೧೫ ಲಕ್ಷ ಪರಿಹಾರವನ್ನು ನೀಡಲಾಗುವುದು. ಜೊತೆಗೆ ದಾಳಿ ನಡೆದಾಗ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಚಿಕಿತ್ಸಾ ವೆಚ್ಚವನ್ನು ಭರಿಸುವುದಲ್ಲದೇ ಮಾಸಿಕವಾಗಿ ಸಾವಿರದಿಂದ ನಾಲ್ಕು ಸಾವಿರದವರೆಗೆ ಅರಣ್ಯ ಇಲಾಖೆಯಿಂದಲೇ ನೀಡಲಾಗುವುದು.

ಜಿಲ್ಲೆಯಲ್ಲಿ ಇಂತಹ ಅಪರೂಪದ ಘಟನೆಗಳು ನಡೆಯುತ್ತಿದ್ದು, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲಾಗುವುದು ಬೇಸಾಯ ಮಾಡಿ ಜೀವನ ನಡೆಸುವ ಸಂದರ್ಭದಲ್ಲಿ ಇಂತಹ ಅವಘಡಗಳು ಸಂಭವಿಸುತ್ತಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಆತಂಕವ್ಯಕ್ತಪಡಿಸಿದರು.

ಅರಣ್ಯ ಪ್ರದೇಶದ ವಿಸ್ತೀರ್ಣ ಕಡಿಮೆಯಾಗಿ ಅವುಗಳಿಗೆ ಮೇವು ಸಿಗದೆ ಜನವಸತಿ ಪ್ರದೇಶಗಳಲ್ಲಿ ಕಾಡುಪ್ರಾಣಿಗಳ ಉಪಟಳ ಹೆಚ್ಚೆಳಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಇದೆ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಅರಣ್ಯಾಧಿಕಾರಿ ಮೋಹನ್ ಕುಮಾರ್ ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *