
ಹಾಸನ: ನಗರದ ಬಿ.ಎಂ. ರಸ್ತೆ, ಜಿಲ್ಲಾ ಬಂದಿಕಾನೆ ಸಮೀಪ ಇರುವ ಟೈರು ವ್ಯಾಪಾರದ, ಪಂಚರ್ ಹಾಕು ಹಾಗೂ ಇತರೆ ಅಂಗಡಿ ಮಾಲೀಕರು ನಿಗಧಿತ ಸಥಳ ಬಿಟ್ಟು ಪುಟ್ಬಾತ್ ಮೇಲೆ ಇಡಲಾಗಿದ್ದ ವಸ್ತುಗಳನ್ನು ನಗರಸಭೆ ಅಧಿಕಾರಿಗಳು ತಮ್ಮ ಸಿಬ್ಬಂದಿಯೊಂದಿಗೆ ಬಂದು ಎಲ್ಲಾವನ್ನು ತಮ್ಮ ವಾಹನದಲ್ಲಿ ತುಂಬಿಕೊಂಡು ಹೋಗಿದ್ದು, ಈ ಬಗ್ಗೆ ಅಂಗಡಿ ಮಾಲೀಕರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಪುಟ್ಬಾತ್ ಚರಂಡಿ ಮೇಲೆ ಇಡಲಾಗಿರುವ ವಸ್ತುಗಳನ್ನು ನಗರಸಭೆಯವರು ತೆರವು ಮಾಡಿ ಎಲ್ಲಾವನ್ನು ತಮ್ಮ ವಾಹನದಲ್ಲಿ ಕೊಂಡೊಯ್ದಿದ್ದಾರೆ. ಚರಂಡಿ ಮೇಲೆ ಏನು ಇಡಬಾರದು ಎಂದು ನಗರಸಭೆಯವರು ಮೊದಲೆ ಹೇಳಿದ್ದರು ಕುಡ ಕೆಲವರು ತೆರವು ಮಾಡದ ಕಾರಣ ಈಕ್ರಮ ಕೈಗೊಂಡಿದ್ದಾರೆ. ನಮ್ಮ ವಸ್ತುಗಳನ್ನು ವಾಪಸ್ ಕೊಡುವಂತೆ ಮನವಿ ಮಾಡಿದರು.
ಮೊದಲೆ ತೆರವು ಮಾಡುವ ಬಗ್ಗೆ ಕೆಲವರಿಗೆ ಗೊತ್ತೆ ಇಲ್ಲ ಎಂದರು. ನಮ್ಮ ವ್ಯಾಪಾರಕ್ಕೆ ಸಮಸ್ಯೆ ಮಾಡಬೇಡಿ ಎಂದು ಇದೆ ವೇಳೆ ಮನವಿ ಮಾಡಿದರು.
ಇದಲ್ಲದೇ ಅಜಾದ್ ರಸ್ತೆಗೆ ಸಂಪರ್ಕ ಕಲ್ಪಿಸುವ ಡಿವೈಡರ್ ಓಪನ್ ಮಾಡಿಕೊಡುವಂತೆ ಕೋರಿದರು.
ಇದೆ ವೇಳೆ ಅಮೀರ್ ಜಾನ್, ಅಬ್ದೂಲ್ ಕಪೀಲ್, ಶಿವನಂಜಪ್ಪ ಇತರರು ಉಪಸ್ಥಿತರಿದ್ದರು.
