
ಬೇಲೂರು ಸುದ್ದಿ: ಶಿಕ್ಷಕಿ “ನಳಿನಾಕ್ಷಿ “ಯಿಂದ ಮಕ್ಕಳಿಗೆ ಜಾತಿ ನಿಂದನೆ ಮಾಡಿ ಮಾನಸಿಕವಾಗಿ ಹಿಂಸೆ ನೀಡುತ್ತಿರುವ ಅಮಾನವೀಯ ಘಟನೆ ಬೇಲೂರು ತಾಲ್ಲೂಕಿನ ಬಿಕ್ಕೋಡು ಹೋಬಳಿ ತಾರೀಮರ ಪ್ರೌಡಶಾಲೆಯಲ್ಲಿ ನಡೆದಿದೆ.
ಕಳೆದ ತಿಂಗಳ ಹಿಂದೆಯಷ್ಠೆ ಮಕ್ಕಳಿಗೆ ಮನಬಂದಂತೆ,ಅವಾಚ್ಯ ಶಬ್ದಗಳಿಂದ, ಜಾತಿ ನಿಂದನೆ ಮಾಡಿದ,ಹಿನ್ನೆಲೆ ಮಕ್ಕಳು ಶಾಲೆಯನ್ನೆ ತೊರೆದು,ತಮ್ಮ ಪೋಷಕರ ಬಳಿ ಅಳಲನ್ನು ತೋಡಿಕೊಂಡಿದ್ದರು.
ಘಟನಾ ಸ್ಥಳಕ್ಕೆ ಶಾಸಕ ಹುಲ್ಲಳ್ಳಿ ಸುರೇಶ್,ಸೇರಿದಂತೆ,ತಹಸಿಲ್ದಾರ್,ಬಿಇಓ ಸಹ ಶಾಲೆಗೆ ಬೇಟಿ ನೀಡಿ ಶಿಕ್ಷಕಿ ನಳಿನಾಕ್ಷಿ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.
ಆದರೆ ನಳಿನಾಕ್ಷಿ ವಿರುದ್ದ ಇಲ್ಲಿಯವರೆಗೆ ಯಾವುದೆ ಕ್ರಮ ಕೈಗೊಳ್ಳದೆ ಇರುವುದಕ್ಕೆ ತಮ್ಮ ಕಛೇರಿಗೆ ನ್ಯಾಯ ಕೇಳಲು ಹೋದ ಪೋಷಕರಿಗೆ ಬಿಇಓ ನಾರಾಯಣ್ ನಾಲಿಗೆ ಹರಿ ಬಿಟ್ಟು ಪೋಷಕರಿಗೆ ದಮ್ಕಿ ಹಾಕಿದ್ದಾರೆ ಎಂದು ಪೋಷಕರು ನಾರಾಯಣ್ ವಿರುದ್ದ ಕಿಡಿ ಕಾರಿದ್ದಾರೆ.
ಇದೇ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಶಶೀಧರ್ ಮೌರ್ಯ ಮಾತನಾಡಿ,ಕಳೆದ ಹಿಂದೆಯಷ್ಟೆ ಬಿಇಓ ನಾರಾಯಣ್ ರವರಿಗೆ ದೂರು ನೀಡಿ,ಒಂದು ತಿಂಗಳಾದರೂ ಯಾವುದೆ ಕ್ರಮ ಕೈಗೊಳ್ಳದ ಹಿನ್ನೆಲೆ ತಮ್ಮ ಕಛೇರಿಗೆ ಹೋಗಿ,ಶಿಕ್ಷಕಿ ನಳನಾಕ್ಷಿ ವಿರುದ್ದ,ಯಾವ ಕ್ರಮ ಕೈಗೊಂಡಿದ್ದಿರಾ ಎಂಬ ಪ್ರಶ್ನೆ ಕೇಳಿದ್ದಕ್ಕೆ,,ನಾನು ಡಿಡಿಪಿಐ ಗೆ ದೂರು ನೀಡಿದ್ದೇನೆ,ವರದಿ ಕಳಿಸಿದ್ದೇವೆ ಎಲ್ಲದಕ್ಕೂ ಉತ್ತರ ನೀಡುವ ಅಗತ್ಯವಿಲ್ಲ ಎಂದು, ಇಲ್ಲಸಲ್ಲದ ಸಬೂಬು ಹೇಳಿ ದುರಹಂಕಾರದಿಂದ ಧಮ್ಕಿ ಹಾಕಿ ಕಛೇರಿಯಿಂದ ಹೊರಹಾಕಿದ್ದಾರೆ.
ಮಕ್ಕಳಿಗೆ ಜಾತಿನಿಂದನೆ,ಅಶ್ಲೀಲ ಪದ ಬಳಕೆ ಮಾಡುವ ಶಿಕ್ಷಕಿಗೆ ಬಿಇಓ ಕುಮ್ಮಕ್ಕು ನೀಡುತ್ತಿದ್ದಾರೆ.ಬೇಲಿಯೇ ಎದ್ದು ಹೊಲ ಮೇಯ್ದ ಹಾಗೆ ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಣಾಧಿಕಾರಿಗಳೆ..ಗೂಂಡಾಗಿರಿ ವರ್ತನೆ ತೋರಿ ಭ್ರಷ್ಟ ಶಿಕ್ಷಕರ ಪರ ನಿಂತರೆ ಮುಂದಿನ ದಿನಗಳಲ್ಲಿ ಮಕ್ಕಳ ಭವಿಷ್ಯ ಅದೋಗತಿಯತ್ತ ಸಾಗುವುದರಲ್ಲಿ ಯಾವುದೆ ಸಂದೇಹವಿಲ್ಲ. ಇಂತಹ ಅಸಮರ್ಥ ಅಧಿಕಾರಿಗಳ ವಿರುದ್ದ ಶಾಸಕರು ನಿಗಾವಹಿಸಬೇಕು, ಇಂತಹ ಭ್ರಷ್ಟ ಕ್ಷೇತ್ರ ಶಿಕ್ಷಣಾಧಿಕಾರಿ ನಾರಾಯಣ್ ನನ್ನು ಬೇರೆಡೆಗೆ ವರ್ಗಾಹಿಸಬೇಕು. ,ನಳಿನಾಕ್ಷಿ ಯನ್ನು ಅಮಾನತ್ತು ಮಾಡಬೇಕು,ಜಾತಿನಿಂದನೆಮಾಡಿರುವ ಬಗ್ಗೆ ಕೇಸು ದಾಖಲಿಸಬೇಕು,ಇಲ್ಲವಾದರೆ ಮುಂದಿನ ದಿನಗಳಲ್ಲಿಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮಾತನಾಡಿ,ನಳಿನಾಕ್ಷಿ ಎಂಬ ಹಿಂದಿ ಶಿಕ್ಷಕಿ ನಮಗೆ ಮನಬಂದಂತೆ ಅವಾಚ್ಯ ಶಬ್ದದಿಂದ,ಜಾತಿನಿಂದನೆ ಮಾಡಿ,ದಿನನಿತ್ಯ ಕಿರುಕುಳ ನೀಡುತ್ತಿದ್ದಾರೆ.ನೀವು ಒಡ್ಡರು,ಹಕ್ಕಿಸಿಕ್ಕಾರ್ ತರಹ ಶಾಲೆಗೆ ಬರುತ್ತೀರಾ,ಹೆಣ್ಣು ಮಕ್ಕಳು ಐದು ನಿಮಿಷ ತಡವಾಗಿ ಬಂದರೆ ಯಾವನ್ ಜೊತೆ ಹೋಗಿದ್ದೆ ಎಂಬ ಅಶ್ಲೀಲ ಪದದಿಂದ ನಿಂದಿಸುತ್ತಾರೆ.
ಇಂತಹ ಶಿಕ್ಷಕರು ನಮಗೆ ಬೇಡ.ಇವರೇ ಮುಂದುವರಿಯುವುದಾದರೆ ನಾವು ಶಾಲೆಯನ್ನೆ ಬಿಡಲು ತಯಾರಿದ್ದೇವೆ ಕೂಡಲೆ ಬೇರೆ ಶಿಕ್ಷಕರನ್ನು ನಮ್ಮ ಶಾಲೆಗೆ ಹಾಕಿಸಿಕೊಡಿ ಎಂದು ಅಳಲು ತೋಡಿಕೊಂಡಿದ್ದಾರೆ.





