
ಚಗಚಗೆರೆ : ಕಾರೇಕೆರೆ ಕೃಷಿ -ಮಹಾವಿದ್ಯಾಲಯದ ಅಂತಿಮ ವರ್ಷದ ಬಿ.ಎಸ್ಸಿ. (ಹಾನ್ಸ್) ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಅರಸೀಕೆರೆ ತಾಲ್ಲೂಕಿನ ಗಂಡಸಿ ಹೋಬಳಿಯ ಚಗಚಗೆರೆ ಗ್ರಾಮದಲ್ಲಿ ಯುವ ರೆಡ್ ಕ್ರಾಸ್ ಘಟಕ, ಆರೋಗ್ಯ ಇಲಾಖೆ, ಅರಸೀಕೆರೆ ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆ, ಲಯನ್ಸ್ ಕ್ಲಬ್ ಹಾಸನ ಮತ್ತು -ರಾಜೀವ್ ಆಯುರ್ವೇದ ವೈದ್ಯಕೀಯ -ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರಗಳ ಸಹಯೋ ಗದಲ್ಲಿ ಗ್ರಾಮಸ್ಥರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.
ಶಿಬಿರ ಉದ್ಘಾಟಿಸಿ ಮಾತನಾಡಿದ ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಎಸ್. -ಎನ್. ವಾಸುದೇವನ್, ಆರೋಗ್ಯವೇ ಮಹಾಭಾಗ್ಯ ಎಂಬ ಮಾತಿನಂತೆ ಆರೋಗ್ಯ ಚೆನ್ನಾಗಿದ್ದರೆ, ನಾವು ಯಾವುದೇ ರೀತಿಯ ಕೆಲಸಗಳನ್ನು ನಿರ್ವಹಿಸಬಹುದು. ರೈತರು ಶಿಬಿರದ ಪ್ರಯೋಜನ ಪಡೆಯಬೇಕು ಎಂದರು.
ಗ್ರಾಮದ ಜನರಿಗೆ ಉಚಿತವಾಗಿ ರಕ್ತದೊತ್ತಡ ಹಾಗೂ ಮಧುಮೇಹ ಪರೀಕ್ಷೆಯನ್ನು ಸ್ಥಳದಲ್ಲಿಯೇ ಮಾಡಿ ವರದಿ ಮತ್ತು ಅಗತ್ಯ ಔಷಧಿಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ರಾಜೀವ್ ಆಯುರ್ವೇದ ಆಸ್ಪತ್ರೆ , ಹಾಸನದ ಡಾ. ವೇಣು, ಸ್ವಸ್ತ ವೃತ್ತ ವಿಭಾಗ, ಡಾ. ಸಂದೀಪ್, ಪಂಚಕರ್ಮ ವಿಭಾಗ, ಡಾ. ಆದರ್ಶ್, ಮಕ್ಕಳ ತಜ್ಞರು ಹಾಗೂ ಡಾ. ಸ್ಪೂರ್ತಿ, ಆಯುರ್ವೇದ ತಜ್ಞರು ಮತ್ತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಾ. ಎಸ್. ಎನ್ . ವಾಸುದೇವನ್ ಡೀನ್(ಕೃಷಿ), ಕೃಷಿ ಮಹಾವಿದ್ಯಾಲಯ, ಹಾಸನ ಹಾಗೂ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಸಂಯೋಜಕರಾದ ಡಾ. ಶಂಕರ ಎಂ. ಹೆಚ್., ಹಾಗೂ ಸಹಾಯಕ ಪ್ರಾಧ್ಯಾಪಕರುಗಳಾದ ಡಾ.ಶಶಿಕಿರಣ್ ಎ ಎಸ್, ಶ್ರೀ ಶಿವಬಸಪ್ಪ ಕಂದಕೂರ, ಡಾ. ವಾಘ್ಮೋರೆ ವಿಜಯ ಕುಮಾರ್ ವೀರಪ್ಪರವರು ಹಾಗೂ ಚಗಚಗೆರೆ ಹಲವಾರು ಗ್ರಾಮಸ್ಥರು ಉಪಸ್ಥಿತರಿದ್ದರು.

