ಅರಸೀಕೆರೆ : ತಾಲೂಕು, ಗಂಡಸಿ ಹೋಬಳಿ ಹಿರಿಸಮುದ್ರ ಗ್ರಾಮದಲ್ಲಿ ಅಂತಿಮ ವರ್ಷದ ಕೃಷಿ ಮತ್ತು ಆಹಾರ ತಂತ್ರಜ್ಞಾನ ವಿದ್ಯಾರ್ಥಿಗಳು, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಕೃಷಿ ಮಹಾವಿದ್ಯಾಲಯ, ಕಾರೆಕೆರೆ ಹಾಸನದ ವತಿಯಿಂದ ಆಯೋಜಿಸಿದ್ದ ಪ್ಯಾಕೇಜಿಂಗ್ ಮತ್ತು ಮಿಸ್ -ಬ್ರಾಂಡಿಂಗ್ ಎಂಬ ಕಾರ್ಯಕ್ರಮವು ಬಹಳ ಯಶಸ್ವಿಯಾಗಿ ಮತ್ತು ಸಂವಹಧಾತ್ಮಕವಾಗಿ ಮೂಡಿಬಂತು.

ಈ ಕಾರ್ಯಕ್ರಮದಲ್ಲಿ ಪ್ರಮುಖ ವಿಷಯಗಳಾದ ಪ್ಯಾಕೇಜಿಂಗ್, ಲೇಬಲ್ ಮಾಡುವುದು, ಮತ್ತು ಮಿಸ್ -ಬ್ರಾಂಡಿಂಗ್ ಬಗ್ಗೆ ರೈತರಿಗೆ ತಿಳಿಸಲಾಯಿತು.

ಮೊದಲನೆಯದಾಗಿ ಪ್ಯಾಕೇಜಿಂಗ್ ಪ್ರಕ್ರಿಯೆಯ ಬಗ್ಗೆ ಹೇಳಿ, ಅದು ನಿರ್ವಹಿಸುವ ಕಾರ್ಯಗಳಾದ ಧಾರಕ, ರಕ್ಷಣೆ, ಅನುಕೂಲತೆ, ಸಂವಹನದ ಬಗ್ಗೆ ವಿವರಿಸಿ, ಪ್ಯಾಕೇಜಿಂಗ್ ಮಾಡಲು ಬಳಸುವ ವಿವಿಧ ವಸ್ತುಗಳಾದ ಕಾಗದ, ಗಾಜು, ಲೋಹದ ಹಾಗೂ ಪ್ಲಾಸ್ಟಿಕ್ ಪ್ಯಾಕೇಜಿಂಗ್ಗಳ ಅನುಕೂಲತೆ, ಅನಾನುಕೂಲತೆಗಳನ್ನು ಕೂಡ ತಿಳಿಸಲಾಯಿತು.

ಇದಲ್ಲದೆ ಲೇಬಲ್ ಮಾಡುವ ವಿಧಾನ, ಅದರಲ್ಲಿ ಇರಬೇಕಾದ ವಿಷಯಗಳು, ಗ್ರಾಹಕರು ಗಮನಿಸಬೇಕಾದ ವಿವರಗಳ ಬಗ್ಗೆ ತಿಳಿಸಿಕೊಟ್ಟರು.

ಕೊನೆಯದಾಗಿ ಮಿಸ್- ಬ್ರಾಂಡಿಂಗ್ ( ತಪ್ಪು ದಾರಿಗೆಳೆಯುವ ಮಾಹಿತಿಯನ್ನು ಒದಗಿಸುವ ಅಭ್ಯಾಸ) ವಿಷಯದ ಬಗ್ಗೆ ತಿಳಿಸಿ, ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಶ್ರೀ. ಶಿವಬಸಪ್ಪ ಕಂದಕೂರ, ಸಹಾಯಕ ಪ್ರಾಧ್ಯಾಪಕರು ಕೊಯ್ಲೋತರ ತಂತ್ರಜ್ಞಾನ, ಇವರು ಈ ಕಾರ್ಯಕ್ರಮದ ಸರಿಸುಮಾರು ೪೭ ಜನರೊಂದಿಗೆ ಸಂವಹನೆ ನಡೆಸಿ,ಅವರ ಸಂದೇಹಗಳಿಗೆ ಉತ್ತರಿಸಿ, ಯಶಸ್ವಿಯಾಗಿ ಈ ಕಾರ್ಯಕ್ರಮವನ್ನು ಮುಗಿಸಲಾಯಿತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *