ಚನ್ನರಾಯಪಟ್ಟಣ : ತಾಲ್ಲೂಕಿನ ತೇಜಿಗೆರೆ ಗ್ರಾಮದ ಗ್ರಾಮ ದೇವತೆ ತೇಜಿಗೆರಮ್ಮನವರ ದೇವಾಲಯಕ್ಕೆ,ಕಡೇ ಕಾರ್ತಿಕ ಮಾಸದ ಅಂಗವಾಗಿ ಗ್ರಾಮದಲ್ಲಿ ನಡೆಯುವ ಹಬ್ಬಕ್ಕೆ ಮಾಡಿದ್ದ ವಿದ್ಯುತ್ ದೀಪಾಲಂಕಾರದ ಲೈಟಿಂಗ್ಸ್ ನ್ನು ರಾತ್ರೋ ರಾತ್ರಿ ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ

ಇನ್ನೂ ದೊಡ್ಡಕುಂಚೆ ಕೊಪ್ಪಲಿನಲ್ಲೂ ಇದೇ ರೀತಿ ಮಾಡಿರುವ ಖದೀಮರು ಸುಮಾರು 1.5 ಲಕ್ಷ ಮೌಲ್ಯದ ಲೈಟಿಂಗ್ಸ್ ನ್ನು ಕಳವು ಮಾಡಿದ್ದಾರೆಇನ್ನೂ ಲೈಟಿಂಗ್ಸ್ ಮಾಲೀಕ ದೊಡ್ಡತರಹಳ್ಳಿ ರವಿ ಮಾತನಾಡಿ ಸುಮಾರು 1.5 ಲಕ್ಷದಷ್ಟು ಲೈಟಿಂಗ್ಸ್ ನ್ನು ಕಳವು ಮಾಡಿದ್ದು ಅದನ್ನೇ ನಂಬಿ ಬದುಕಿರುವ ನಮಗೆ ತುಂಬಾ ನಷ್ಟವಾಗಿದೆ

ವರ್ಷವೆಲ್ಲಾ ದುಡಿದಿದ್ದ ಬಂಡವಾಳ ಒಂದೇ ದಿನದಲ್ಲಿ ಕಳವು ಮಾಡಲಾಗಿದೆ ಆದ್ದರಿಂದ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಂಡು ಪರಿಹಾರ ದೊರಕಿಸಬೇಕು ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆಸ್ಥಳದಲ್ಲಿ ಗುಡಿ ಗೌಡರಾದ ಮಲ್ಲೇಶ್ ಗೌಡ,ಗ್ರಾಮಸ್ಥರಾದ ಕುಶ,ಗೋಪಾಲಣ್ಣ ಮತ್ತಿತರರು ಹಾಜರಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *