
ಚನ್ನರಾಯಪಟ್ಟಣ : ಇಂದು ನಗರದ ಅಕ್ಷರ ಸ್ಕೂಲ್ ಆಫ್ ಎಕ್ಸೆಲೆನ್ಸ್ ನ ಲ್ಲಿ ನಡೆದ ವಾರ್ಷಿಕ ಕ್ರೀಡಾ ಕೂಟದಲ್ಲಿ ಭಾಗಿಯಾಗಿ ಮಾತನಾಡಿದ ಅಕ್ಷರ ಸ್ಕೂಲ್ ಆಫ್ ಎಕ್ಸೆಲೆನ್ಸ್ ನ ಕಾರ್ಯದರ್ಶಿ ಅನಿಲ್ ಮರಗೂರ್ ಅವರು ಕ್ರೀಡೆ ನಮ್ಮ ಬದುಕಿನ ಅವಿಭಾಜ್ಯ ಅಂಗ ಆದರೆ ನಾವು ಅದನ್ನ ಕಡೆಗಣಿಸುತ್ತಿದ್ದೇವೆ ದುರಂತವೆಂದರೆ ಎಷ್ಟೋ ಜನರಿಗೆ ಕ್ರೀಡಾ ಸಚಿವರೇ ಗೊತ್ತಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಆದರೆ ನಾವು ಅದರ ಬಗ್ಗೆ ಅರಿತು ಜೀವನದಲ್ಲಿ ಕ್ರೀಡೆ ಅಳವಡಿಕೆ ಮಾಡಿಕ್ಕೊಳ್ಳುವುದಷ್ಟೆ ಅಲ್ಲದೆ ಮಕ್ಕಳಿಗೂ ಸಹ ಪ್ರೇರೇಪಿಸಬೇಕು ಎಂದರು
ಇನ್ನೂ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಪುರಸಭಾ ಅಧ್ಯಕ್ಷ ಶಶಿಧರ್ ಮಾತನಾಡಿ ಪೋಷಕರು ಕಡ್ಡಾಯವಾಗಿ ಮಕ್ಕಳಿಗೆ ಜಂಕ್ ಫುಡ್ ತಿನ್ನಿಸುವುದನ್ನು ತಪ್ಪಿಸಬೇಕು ಜಂಕ್ ಫುಡ್ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಮಾರಕ ಇನ್ನಾದರೂ ಪೋಷಕರು ಮಕ್ಕಳಿಗೆ ಕ್ರೀಡೆ ಪ್ರೇರೇಪಿಸಿ ಅವರನ್ನು ಸದೃಢಗೊಳಿಸಬೇಕಿದೆ ಎಂದರು
ಕಾರ್ಯಕ್ರಮದಲ್ಲಿ ಅಕ್ಷರ ಎಜುಕೇಷನ್ ಟ್ರಸ್ಟ್ ಖಜಾಂಚಿ ಚೇತನ್ ಬಾಬು,ಟ್ರಸ್ಟಿ ತಿರುಮಲ ಪ್ರಸಾದ್,ಪ್ರಾಶುಂಪಾಲರಾದ ರೂಪ ಅಶೋಕ್ ಹಾಜರಿದ್ದರು




