
ಆಲೂಗಡ್ಡೆ ಹಾಗೂ ಶುಂಠಿಯಲ್ಲಿ ಕಂಡು ಬರುವ ರೋಗಗಳು ಹಾಗೂ ಅವುಗಳ ನಿರ್ವಹಣೆ*
ಹಾಸನದ ಕಾರೇಕೆರೆಯ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ. ಎಸ್. ಸಿ (ಆನರ್ಸ್)ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023-24 ರ ಅಂಗವಾಗಿ ಅರಸೀಕೆರೆ ತಾಲ್ಲೂಕು ಗಂಡಸಿ ಹೋಬಳಿಯ ಕುಡುಕುಂದಿ ಗ್ರಾಮದಲ್ಲಿ *ಆಲೂಗಡ್ಡೆ ಹಾಗೂ ಶುಂಠಿಯಲ್ಲಿ ಕಂಡು ಬರುವ ರೋಗಗಳು ಹಾಗೂ ಅವುಗಳ ನಿರ್ವಹಣೆ* ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಆಲೂಗಡ್ಡೆ ಹಾಗೂ ಶುಂಠಿಯಲ್ಲಿ ಕಂಡು ಬರುವ ರೋಗಗಳು ಹಾಗೂ ಅವುಗಳ ನಿರ್ವಹಣೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು. ಕುಡುಕುಂದಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ತೆಂಗು ಬೆಳೆಯ ಹೊರತಾಗಿ ನಂತರ ಆಲೂಗಡ್ಡೆ ಮತ್ತು ಶುಂಠಿ ಬೆಳೆಗಳು ಪ್ರಮುಖವಾಗಿದ್ದು ಈ ಬೆಳೆಗಳು ತಮ್ಮ ಜೀವಿತಾವಧಿಯಲ್ಲಿ ಅನೇಕ ರೋಗ ಹಾಗೂ ಕೀಟ ಬಾಧೆಗಳಿಗೆ ತುತ್ತಾಗುತ್ತಿವೆ.
ಆಲೂಗಡ್ಡೆಯಲ್ಲಿ ಮೊದಲ ಹಂತದ ಅಂಗಮಾರಿ ರೋಗ ಕೊನೆಯ ಹಂತದ ಅಂಗಮಾರಿ ರೋಗ, ದುಂಡಾಣು ಕೊಳೆ ರೋಗ, ಮೊಸೈಕ್ ನಂಜು ರೋಗ, ಎಲೆ ಸುರುಳಿ ರೋಗ, ಕಪ್ಪು ಹೃದಯದ ಅಸ್ವಸ್ತತೆ ಹೀಗೆ ಮುಂತಾದ ಪ್ರಮುಖ ರೋಗಗಳು ಹಾಗೂ ಅವುಗಳ ನಿರ್ವಹಣೆ ಕ್ರಮ ಮತ್ತು ಶುಂಠಿ ಬೆಳೆಯಲ್ಲಿ ಕಂಡು ಬರುವ ಪ್ರಮುಖ ರೋಗಗಳಾದ ಎಲೆ ಚುಕ್ಕೆ ರೋಗ, ಗಡ್ಡೆ ಕೊಳೆ ರೋಗ, ದುಂಡಾಣು ಸೊರಗು ರೋಗ ಹಾಗೂ ಇನ್ನಿತರ ರೋಗಗಳು ಮತ್ತು ಅವುಗಳ ನಿರ್ವಹಣೆ ಕ್ರಮಗಳನ್ನು ಈ ಕಾರ್ಯಕ್ರಮದಲ್ಲಿ ತಿಳಿಸಲಾಯಿತು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಡಾ|| ಮಂಜುನಾಥ್ ಎಚ್ ಸಹಾಯಕ ಪ್ರಾಧ್ಯಾಪಕರು ಸಸ್ಯ ಶಾಸ್ತ್ರ ವಿಭಾಗ ರವರು ಕಾರ್ಯಕ್ರಮದ ಕುರಿತು ಸಂಪೂರ್ಣ ಮಾಹಿತಿ ನೀಡಿದರು.
ಗ್ರಾಮದ ರೈತರಾದ ನರೇಶ್,ಅಶೋಕ್,ನಾಗರಾಜ್,ಪ್ರದೀಪ್, ಟಿ.ದೇವರಾಜು,ಎಂ.ದೇವರಾಜು ಮುಂತಾದವರು ಪಾಲ್ಗೊಂಡಿದ್ದರು.
