
ಹಾಸನ: ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಅಡಿಯಲ್ಲಿ ಬರುವ ಕೃಷಿ ಮಹಾವಿದ್ಯಾಲಯ, ಕಾರೇಕೆರೆ, ಹಾಸನದ ವತಿಯಿಂದ ಆಯೋಜಿಸಲಾದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023-24ರ ಅಂಗವಾಗಿ ಅಂತಿಮ ವರ್ಷದ ಆಹಾರ ತಂತ್ರಜ್ಞಾನ ವಿದ್ಯಾರ್ಥಿಗಳಿಂದ ದೊಡ್ದಯರಗನಾಳು ಗ್ರಾಮದಲ್ಲಿ ‘ನುಗ್ಗೆ : ಪೌಷ್ಟಿಕತೆಯ ಶಕ್ತಿ ಕೇಂದ್ರʼ ಕುರಿತಾದ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಅಭಿಲಾಷರವರು ಆಗಮಿಸಿದ್ದರು.’ನುಗ್ಗೆ : ಪೌಷ್ಟಿಕತೆಯ ಶಕ್ತಿ ಕೇಂದ್ರʼ-ನುಗ್ಗೆಕಾಯಿ, ನುಗ್ಗೆ ಸೊಪ್ಪು,ನುಗ್ಗೆ ಕಾಯಿ ಬೀಜಗಳು ಪ್ರಯೋಜನಗಳ ಬಗ್ಗೆ ವಿದ್ಯಾರ್ಥಿಯಾದ ವಿಶಾಲ .ಆರ್ .ಕೆ ಅವರು ತಿಳಿಸಿದರು.
ನುಗ್ಗೆ ಮೌಲ್ಯವರ್ಧತ ಉತ್ಪನ್ನಗಳಾದ: ನುಗ್ಗೆ ಎಲೆ ಚಟ್ನಿ, ನುಗ್ಗೆ ಹೂ ಸಿರಿ, ನುಗ್ಗೆಕಾಯಿ ಉಪ್ಪಿ ತಯಾರಿಕೆಯ ಬಗ್ಗೆ ವಿದ್ಯಾರ್ಥಿಯಾದ ಚರಣ್ ಕುಮಾರ್ ಅವರು ತಿಳಿಸಿದರು.ನುಗ್ಗೆಕಾಯಿ, ನುಗ್ಗೆ ಸೊಪ್ಪು,ನುಗ್ಗೆ ಕಾಯಿ ಬೀಜಗಳು ಪ್ರಯೋಜನಗಳು:ರೋಗ ನಿರೋಧಕ ಶಕ್ತಿ ಬಲಪಡಿಸುವುದು.ಕ್ಯಾಲ್ಸಿಯಂ, ಫಾಸ್ಫರಸ್ ಹೇರಳವಾಗಿರುವುದರಿಂದ ಮೂಳೆ ಬಲ ಹೆಚ್ಚಿಸುತ್ತದೆ,ಜೀರ್ಣಕ್ರಿಯೆ ಸುಧಾರಣೆ,ರಕ್ತದ ಸಕ್ಕರೆ ನಿಯಂತ್ರಣ,ರಕ್ತ ಶುದ್ಧೀಕರಣ,ನುಗ್ಗೆ ಸೊಪ್ಪು ವಿಟಮಿನ್ ಎ, ಬಿ, ಸಿ, ಇ ಮತ್ತು ಕೆ ಗಳಿಂದ ಸಮೃದ್ಧವಾಗಿದೆ ,ಕೀಲು ನೋವು ನಿವಾರಣೆ,ನುಗ್ಗೆ ಸೊಪ್ಪು ಐರನ್‌ನ ಉತ್ತಮ ಮೂಲವಾಗಿದೆ, ಹೊಟ್ಟೆ ಕೊಬ್ಬನ್ನು ಕರಗಿಸುತ್ತದೆ.ನಂತರ ಸಂಪನ್ಮೂಲ ವ್ಯಕ್ತಿಗಳು ನುಗ್ಗೆಯಲ್ಲಿರುವ ಪೌಷ್ಟಿಕಾಂಶಗಳ ಮಹತ್ವದ ಬಗ್ಗೆ ಗ್ರಾಮಸ್ಥರಿಗೆ ತಿಳಿಸಿಕೊಟ್ಟರು.
ಅಲ್ಲದೆ ವೈದ್ಯಕೀಯ ಮತ್ತು ಆಯುರ್ವೇದದಲ್ಲಿ ಅತಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ತಿಳಿಸಿಕೊಟ್ಟರು ,ಹಾಗೆಯೇ ನುಗ್ಗೆ ಗಿಡ ಕಲ್ಪವೃಕ್ಷದಂತೆ ಹಲವಾರು ರೀತಿಯ ಉಪಯೋಗಗಳನ್ನು ಹೊಂದಿದೆ ಎಂಬುದನ್ನು ತಿಳಿಸಿಕೊಟ್ಟರು.
