
*ಜೇನುಕೃಷಿ – ಗ್ರಾಮೀಣ ರೈತರಿಗೆ ಸಹಉದ್ಯೋಗ ತರಬೇತಿ ಶಿಬಿರ*
ಹಾಸನದ ಕಾರೇಕೆರೆಯ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ. ಎಸ್. ಸಿ (ಆನರ್ಸ್)ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023-24 ರ ಅಂಗವಾಗಿ ಅರಸೀಕೆರೆ ತಾಲ್ಲೂಕು ಗಂಡಸಿ ಹೋಬಳಿಯ ಕುಡುಕುಂದಿ ಗ್ರಾಮದಲ್ಲಿ *ಜೇನುಕೃಷಿ ಗ್ರಾಮೀಣ ರೈತರಿಗೆ ಸಹಉದ್ಯೋಗ ತರಬೇತಿ ಶಿಬಿರ* ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಜೇನುಕೃಷಿ ಪ್ರಮುಖ ಗ್ರಾಮೀಣ ಸಹಉದ್ಯೋಗವಾಗಿದ್ದು ರೈತರಿಗೆ ಹೆಚ್ಚಿನ ಆದಾಯ ತರುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಈ ಕುರಿತು ತರಬೇತಿ ನೀಡಲು ಚರಣಸಿಂಗ್ ಚೌಧಾರಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರಲ್ ಮಾರ್ಕೆಟಿಂಗ್ ರವರ ಸಹಭಾಗಿತ್ವದಲ್ಲಿ ಮೂರು ದಿನಗಳ ಕಾಲ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಕುಡುಕುಂದಿ, ಚಗಚಗೆರೆ,ಮಂಜೇನಹಳ್ಳಿ ಗ್ರಾಮಗಳ 30 ಆಸಕ್ತ ರೈತರು ಭಾಗವಹಿಸಿದರು.
ಕಾರ್ಯಕ್ರಮವು ಮೊದಲನೆಯ ದಿನ ಡಾ|| ಎಸ್.ಎನ್ ವಾಸುದೇವನ್ ಡೀನ್( ಕೃಷಿ) ಅವರ ಅಧ್ಯಕ್ಷತೆಯಲ್ಲಿ ಉದ್ಘಾಟನೆಗೊಂಡಿತು.
ಈ ಕಾರ್ಯಕ್ರಮದಲ್ಲಿ ಡಾ|| ಶಶಿಕಿರಣ ಎ. ಎಸ್, ಡಾ|| ಅರವಿಂದಕುಮಾರ ಎಮ್. ಕೆ, ಡಾ|| ಬಿ. ಎಸ್ ಬಸವರಾಜು,ಡಾ|| ಕೆ. ಎನ್ ಮುನಿಸ್ವಾಮಿಗೌಡ, ಡಾ|| ಸುನೀತಾ ಟಿ .ಆರ್,ಡಾ|| ರಾಘವೇಂದ್ರ ಶಿವಲಿಂಗಯ್ಯ, ಡಾ|| ಹರ್ಷಿತ ಎ. ಪಿ ಸಹ ಪ್ರಾಧ್ಯಾಪಕರು ಕೃಷಿ ಕಾಲೇಜು ಹಾಸನ ಹಾಗೂ ಡಾ|| ವಿಜಯಕುಮಾರ್ ಎ . ಟಿ ವಿಜ್ಞಾನಿಗಳು ಹಾಗೂ ಮುಖ್ಯಸ್ಥರು AICRP, honeybees and pollinators ಮತ್ತು ಸಂತೋಷ್ ಕ್ಷೇತ್ರ ಸಹಾಯಕರು ಪಾಲ್ಗೊಂಡಿದ್ದರು.
ಭಾಗವಹಿಸಿದ ರೈತರಿಗೆ ಜೇನುಕೃಷಿಯ ತರಬೇತಿ ನೀಡಿ ಜೇನುಪೆಟ್ಟಿಗೆಗಳನ್ನು ಉಚಿತವಾಗಿ ನೀಡಲಾಯಿತು ಮತ್ತು ಎಲ್ಲರಿಗೂ ಪ್ರಮಾಣ ಪತ್ರವನ್ನು ವಿತರಿಸಲಾಯಿತು.




