
ಸಕಲೇಶಪುರ : ತಾಲೂಕಿನ ಡಿಎಸ್ಎಸ್ ಸಂಯೋಜಕ ಶಾಖೆ ವತಿಯಿಂದ ದಿನಾಂಕ 1/1/2O24ನೇ ಸೋಮವಾರ ಪರಿಶಿಷ್ಟ ಜಾತಿ – ಪಂಗಡದ ಒಕ್ಕೂಟ ಮತ್ತು ಭೀಮಾ ಕೋರೆoಗಾವ್ ವಿಜಯೋತ್ಸವ ಸಮಿತಿ ಹಾಗೂ ಕಲ್ಚರಲ್ ಪಬ್ಲಿಕ್ ಟ್ರಸ್ಟ್ ಇವರ ವತಿಯಿಂದ ನಡೆಯುತ್ತಿರುವ 206ನೇ ಭೀಮಾ ಕೊರೇಗಾವ್ ವಿಜಯೋತ್ಸವ ಕಾರ್ಯಕ್ರಮಕ್ಕೆ ತಾಲೂಕಿನ ಎಲ್ಲಾ ದಲಿತ ಸಂಘಟನೆ ಮುಖಂಡರು ಸಮುದಾಯದ ಬಾಂಧವರು ಮಹಿಳೆಯರು ಅಲ್ಪಸಂಖ್ಯಾತರು ಪ್ರಗತಿಪರ ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಒಂದು ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಡಬೇಕೆಂದು ಡಿಎಸ್ಎಸ್ ಸಂಯೋಜಕ ತಾಲೂಕು ಅಧ್ಯಕ್ಷರಾದ ಧರ್ಮರಾಜ್ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಸದಸ್ಯರಾದ ನಾಗರಾಜ್ ಜಾನೆಕೆರೆ, ನಗರ ಘಟಕ ಉಪಾಧ್ಯಕ್ಷರಾದ ಮಹಿಧಿನ್ ಶರೀಫ್ ಆನೆ ಮಹಲ್, ತಾಲೂಕು ಉಪಾಧ್ಯಕ್ಷರಾದ ಡಿ ಬನ್ನಾರಿ ಕುಶಲನಗರ, ತಾಲೂಕು ಸದಸ್ಯರಾದ ಕುಮಾರ್ ಸುಳ್ಳಕ್ಕಿ, ಖಜಂತಿಗಳಾದ ಪ್ರಮೋದ್ ದೊಡ್ಡ ನಗರ ಇತರರು ಹಾಜರಿದ್ದರು.
