ಅಂಗಾಂಶ ಬಾಳೆ ಕೃಷಿ ಕುರಿತು ಅರಿವು :- ಹಾಸನ : ಕೃಷಿ ವಿಶ್ವವಿದ್ಯಾಲಯ , ಬೆಂಗಳೂರು ಅಡಿಯಲ್ಲಿ ಬರುವ ಕೃಷಿ ಮಹಾವಿದ್ಯಾಲಯ , ಕಾರೇಕೆರೆ, ಹಾಸನದ ವತಿಯಿಂದ ಆಯೋಜಿಸಲಾದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023 -24 ರ ಅಂಗವಾಗಿ ಅಂತಿಮ ವರ್ಷದ ಜೈವಿಕ ತಂತ್ರಜ್ಞಾನ ವಿದ್ಯಾರ್ಥಿಗಳಿಂದ ದೊಡ್ಡಯರಗನಾಳು ಗ್ರಾಮದಲ್ಲಿ ” ಅಂಗಾಂಶ ಬಾಳೆ ಕೃಷಿ ಕುರಿತು ಅರಿವು ” ಕಾರ್ಯಕ್ರಮವನ್ನು ಆಯೋಜಿಸಲಾಯಿತು .

ಅಂಗಾಂಶ ಬಾಳೆ ಕೃಷಿಯು ಆಧುನಿಕ ತಂತ್ರಜ್ಞಾನವಾಗಿದ್ದು ರೋಗ ರಹಿತ ಸಸಿಗಳನ್ನು ಒದಗಿಸಬಹುದಾಗಿದೆ , ಅಂಗಾಂಶ ಬಾಳೆ ಸಸಿಗಳು ವರ್ಷವಿಡಿ ಲಭ್ಯವಿದ್ದು ,ಬಾಳೆಯನ್ನು ವರ್ಷವಿಡಿ ಅಂಗಾಂಶ ಕೃಷಿಯ ಸಸ್ಯಗಳ ಕೊರತೆ ಇಲ್ಲದೆ ಬೆಳೆಯಬಹುದಾಗಿದೆ. ಹಾಗೂ ಇದರಿಂದ ಏಕರೂಪ ಇಳುವರಿಯನ್ನು ಪಡೆಯಬಹುದು .

ಅಂಗಾಂಶ ಬಾಳೆ ಕೃಷಿಯ ಪ್ರಮುಖ ಪ್ರಭೇದಗಳೆಂದರೆ – ಗ್ರ್ಯಾಂಡ್ ನೈನ್ ಬಾಳೆ , ನೇಂದ್ರನ್ ಬಾಳೆ ,ವಿಲಿಯಮ್ಸ್ ಬಾಳೆ ,ಕೆಂಪು ಬಾಳೆ ಮತ್ತು ಅಂಗಾಂಶ ಕೃಷಿ ಏಲಕ್ಕಿ ಬಾಳೆ ಹಾಗೂ ಗ್ರ್ಯಾಂಡ್ ನೈನ್ ಬಾಳೆಯ ಮುಖ್ಯ ಲಕ್ಷಣಗಳ ಕುರಿತು ವಿದ್ಯಾರ್ಥಿಗಳಾದ ಅಮೃತ್ ಕುಮಾರ್ ಹಾಗೂ ಚನ್ನಬಸಪ್ಪ ರವರು ಮಾಹಿತಿಯನ್ನು ನೀಡಿದರು .

ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಡಾ || ಪೂಜಾ ಎಸ್ ಕೆ ಸಹಾಯಕ ಪ್ರಾಧ್ಯಾಪಕರು ಜೈವಿಕ ತಂತ್ರಜ್ಞಾನ ವಿಭಾಗ ಇವರು ಆಗಮಿಸಿ ರೈತರ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ನೀಡಿ ಅಂಗಾಂಶ ಬಾಳೆ ಕೃಷಿ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮಕ್ಕೆ ಅನೇಕ ಸಂಖ್ಯೆಯಲ್ಲಿ ಗ್ರಾಮದ ರೈತರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿದರು .

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *