
ಆಲೂರು : ತಾಲೂಕಿನ ಪಾಳ್ಯ ಹೋಬಳಿ ಕಟ್ಟೆಗದ್ದೆ ಗ್ರಾಮದಲ್ಲಿ ಬಿಜೆಪಿ ಗೆಲ್ಲಿಸಿ ದೇಶ ಉಳಿಸಿ ದೇಶದ ಅಭಿವೃದ್ಧಿಗಾಗಿ ಮತ್ತೊಮ್ಮೆ ಮೋದಿ ಅಭಿಯಾನದ ಕಾರ್ಯಕ್ರಮದಲ್ಲಿ ಶಾಸಕ ಸಿಮೆಂಟ್ ಮಂಜು ದಿನಸುಚ್ಚಿ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಬಿಜೆಪಿಯ ಯುವ ಮುಖಂಡ ಸಮಾಜ ಸೇವಕ ಕಟ್ಟೆಗದ್ದೆ ನಾಗರಾಜ್ ಈ ದೇಶದ ಸರ್ವೋತ್ತೋಮುಖ ಅಭಿವೃದ್ಧಿಗಾಗಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಮಂತ್ರಿಯಾಗಬೇಕು ಆದ್ದರಿಂದ ತಾಲೂಕಿನಲ್ಲಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಗಟ್ಟಿಗೊಳಿಸಿ ಹಿನ್ನೆಲೆಯಲ್ಲಿ ಬಿಜೆಪಿ ಗೆಲ್ಲಿಸಿ, ದೇಶ ಉಳಿಸಿ ದೇಶದ ಅಭಿವೃದ್ಧಿಗಾಗಿ ಮತ್ತೊಮ್ಮೆ ಮೋದಿ ಅಭಿಯಾ ಕಾರ್ಯಕ್ರಮವನ್ನು ಕೈಗೊಂಡಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರ ಭಾವಚಿತ್ರವಿರುವ ದಿನಸುಚ್ಚಿ ಕ್ಯಾಲೆಂಡರ್ ಅನ್ನು ಮಾಡಿಸಿ ಪ್ರತಿ ಬೂತ್ ಮತ್ತು ಮನೆ ಮನೆಗಳಿಗೂ ತಲುಪಿಸುವ ಮೂಲಕ ನರೇಂದ್ರ ಮೋದಿಜಿ ಅವರ ಕೈ ಬಲಪಡಿಸುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಭರಣ್, ಸಿಂಗಟಗೆರೆ ಕಟ್ಟೆಗದ್ದೆ ಗ್ರಾಮಸ್ಥರು ಉಪಸ್ಥಿತರಿದ್ದರು.


