
ಶ್ರೀ ಸಕಲೇಶ್ವರಸ್ವಾಮಿ ದಿವ್ಯ ರಥೋತ್ಸವದ ಅಂಗವಾಗಿ ನಡೆಯುವ ವಸ್ತುಪ್ರದರ್ಶನ ಸಭೆಯುನ್ನು ಶಾಸಕ ಸಿಮೆಂಟ್ ಮಂಜು ಅವರ ಉಪಸ್ಥಿತಿಯಲ್ಲಿ ಪುರಸಭೆಯಲ್ಲಿ ನಡೆಸಲಾಯಿತು.
ಇಂದು ಸಂಜೆ ಪುರಸಭೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಸಕಲೇಶ್ವರಸ್ವಾಮಿ ದಿವ್ಯ ರಥೋತ್ಸವದ ಅಂಗವಾಗಿ ಪುರಸಬೆ ವತಿಯಿಂದ ನಡೆಯುವ ವಸ್ತು ಪ್ರದರ್ಶನವನ್ನು ಸಾಮಾನ್ಯ ಜನರಿಗೆ ಹತ್ತಿರವಾಗುವ ನಿಟ್ಟಿನಲ್ಲಿ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಆಡಳಿತಾದಿಕಾರಿ ಕೆ.ಪುರಂದರ, ಪುರಸಭೆ ಮುಖ್ಯಾಧಿಕಾರಿ ರಮೇಶ್, ಹಾಗೂ ಪುರಸಭೆಯ ಸದಸ್ಯರು ಹಾಗೂ ಸಿಬ್ಬಂದಿಗಳು ಇದ್ದರು.
