
ಬೇಲೂರು : ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ೭೯ ನೇ ಪುಣ್ಯವರ್ಧಂತೋತ್ಸವ ಅಂಗವಾಗಿ ಬಿಜಿಎಸ್ ಕಾಲೇಜು ವಿದ್ಯಾರ್ಥಿಗಳಿಂದ ವಿಶೇಷ ಪೂಜೆ ಸಲ್ಲಿಸಿದರು.
ಪಟ್ಟಣದ ಶ್ರೀಶ್ರೀ ಬಾಲಗಂಗಾಧರ ನಾಥ ಸ್ವಾಮಿಗಳ ಸೇತುವೆ ಬಳಿ ಇರುವ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಸಿಹಿಹಂಚಲಾಯಿತು.
ಇದೇ ವೇಳೆ ಮಾತನಾಡಿದ ಪ್ರಾಂಶುಪಾಲ ದಿವ್ಯಕುಮಾರ್ ನಮ್ಮ ಪರಮಪೂಜ್ಯ ಬಾಲಗಂಗಾಧರನಾಥ ಮಹಾಸ್ವಾಮಿಗಳ ೭೯ ನೇ ಜಯಂತೋತ್ಸವ ಸಂದರ್ಭದಲ್ಲಿ ಶ್ರೀಮಠದಲ್ಲಿ ವಿಶೇಷ ಪೂಜೆಯನ್ನು ಪರಮಪೂಜ್ಯರಿಂದ ನೆರವೇರುತ್ತಿದ್ದು ನಮ್ಮ ವಿದ್ಯಾರ್ಥಿಗಳು ಸಹ ನಮ್ಮ ಆರಾಧ್ಯ ದೈವ ಅಕ್ಷರದ ಜ್ಞಾನ ದೇವಿಗೆ ನೀಡಿದಂತ ಪರಮಪೂಜ್ಯರ ಜಯಂತೋತ್ಸವನ್ನು ನಮ್ಮ ವಿದ್ಯಾರ್ಥಿಗಳು ಅತ್ಯಂತ ಭಕ್ತಿ ಭಾವದಿಂದ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರು ಹಾಗೂ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.



