
ಸಕಲೇಶಪುರ.ತಾಲ್ಲೂಕಿನ ಲಾರಿ ಮಾಲಿಕರ ಸಂಘ ಹಾಗೂ ಚಾಲಕರ ಸಂಘದ ವತಿಯಿಂದ ಪಟ್ಟಣದ ಅನೆಮಹಲ್ ನ ದುರ್ಗಾ ಇಂಟರ್ನ್ಯಾಷನಲ್ ಹೋಟೆಲ್ ಹತ್ತಿರ ರಾಷ್ಟ್ರೀಯ ಹೆದ್ದಾರಿ 75 ಯಲ್ಲಿ ಕೇಂದ್ರ ಸರ್ಕಾರದ ಕಮರ್ಷಿಯಲ್ ವೆಹಿಕಲ್ ಹಿಟ್ ಅಂಡ್ ರನ್ ಎಂಬ ಕಾಯಿದೆಯನ್ನು ಮಸೂದೆಯಾಗಿ ತರಲು ಇಚ್ಚಿಸಿದ್ದು, ಈ ಮಸೂದೆ ಕೇಂದ್ರ ಸರ್ಕಾರ ಅಂಗೀಕಾರಗೊಂಡಲ್ಲಿ ಕಮರ್ಷಿಯಲ್ ವೆಹಿಕಲ್ ಹಿಟ್ ಅಂಡ್ ರನ್ ಆದರೆ 7 ಲಕ್ಷ ಹಾಗೂ 10 ವರ್ಷ ಜೈಲುವಾಸ ಕಡ್ಡಾಯಗೊಳಿಸಲಾಗುವುದು, ಆದ್ದರಿಂದ ಇಂದು ಅನೆಮಹಲ್ ಸಮೀಪ ಹಲವು ಲಾರಿಗಳನ್ನು ತಡೆದು ಹಾಗೂ ಲಾರಿ ಡ್ರೈವರ್ ಗಳನ್ನು ಸೇರಿಕೊಂಡು ಪ್ರತಿಭಟನೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಲಾರಿ ಮಾಲಿಕರ ಸಂಘದ ಅಧ್ಯಕ್ಷ ರಘು ಜಾತಳ್ಳಿ , ಉಪಾಧ್ಯಕ್ಷ ಮುದಾಸಿರ್, ಕಾರ್ಯದರ್ಶಿ ಮಹಮ್ಮದ್ ನೂರುಲ್ಲಾ , ಸಹ ಕಾರ್ಯದರ್ಶಿ ತಸ್ಲೀಮ್ , ಖಜಾಂಚಿ ರಾಜಣ್ಣ, ಮೋಹನ್ ಬಾಳ್ಳೆಗದ್ದೆ, ಅವಿನಾಶ್ ಚಂಪಕನಗರ, ಪ್ರದೀಪ್ ಹಾಗೂ ನೂರಾರು ಮಾಲೀಕರು ಹಾಗೂ ಚಾಲಕರು ಇದ್ದರು.








