
ಚನ್ನರಾಯಪಟ್ಟಣ: ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಲಿಂಗೈಕ್ಯ ಬಾಲಗಂಗಾಧರನಾಥ ಸ್ವಾಮೀಜಿಗಳ 79ನೇ ಜನ್ಮದಿನದ ಅಂಗವಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಬಿಜಿಎಸ್ ಸಹಕಾರ ಸಂಘದ ವತಿಯಿಂದ ಹಣ್ಣು ಮತ್ತು ಹಂಪಲಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಬಿಜಿಎಸ್ ಸೌವ್ವಾದ್ರ ಸಹಕಾರ ಸಂಘದ ಸಂಸ್ಥಾಪಕ ನಿರ್ದೇಶಕರಾದ ದಾಸರಹಳ್ಳಿರಂಗೇಗೌಡ ಮಾತನಾಡಿ ಪರಮಪೂಜ್ಯ ನಿರ್ಮಲನಾಥ ಸ್ವಾಮೀಜಿಗಳು ಹಾಗೂ ಶ್ರೀ ಶ್ರೀ ಶಂಭುನಾಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಈ ದಿನ ನಾವು ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆಯ 100 ಜನ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಣೆ ಮಾಡಲಾಗಿದೆ ಎಂದರು.
ಪರಮಪೂಜ್ಯ ಬಾಲಗಂಗಾಧರನಾಥ ಸ್ವಾಮೀಜಿಗಳ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡು ಈ ಸಮಾಜದಲ್ಲಿ ಸಹೋದರತೆಯಿಂದ ಬಾಳಬೇಕಾಗಿದೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಚನ್ನರಾಯಪಟ್ಟಣ ತಾಲೂಕು ಬಿಜಿಎಸ್ ಸಹಕಾರ ಸಂಘದ ಅಧ್ಯಕ್ಷರಾದ ಮಧುಸೂಧನ್, ಉಪಾಧ್ಯಕ್ಷರು ಸುರೇಶ್, ಸಂಸ್ಥಾಪಕ ನಿರ್ದೇಶಕರಾದ ದಾಸರಹಳ್ಳಿರಂಗೇಗೌಡ, ಕೆಜೆ ಸುರೇಶ್ , ಮಂಜೇಗೌಡ,ಸಾರ್ವಜನಿಕ ಆಸ್ಪತ್ರೆ ವೈದ್ಯಧಿಕಾರದ ಡಾಕ್ಟರ್ ಮಹೇಶ್, ಬಿಜಿಎಸ್ ಶಿಕ್ಷಣ ಸಮೂಹಗಳ ಸಂಸ್ಥೆಗಳ ಮುಖ್ಯಸ್ಥರುಗಳಾದ ಎಂ ಕೆ ಮಂಜುನಾಥ್, ಕುಮಾರ್, ಬಿಜಿಎಸ್ ಸಹಕಾರ ಸಂಘದ ನಿರ್ದೇಶಕರುಗಳಾದ ಮಂಜೇಗೌಡ, ನಂಜೇಗೌಡ, ವಸಂತ ,ಪ್ರಕಾಶ್, ಬೋರೇಗೌಡ ಮೋಹನ್ ಕುಮಾರ್, ಸಿಇಓ ಲತಾಮಣಿ, ಸೇರಿದಂತೆ ಇತರ ಹಾಜರಿದ್ದರು


