
ಬೇಲೂರು : ತಾಲ್ಲೂಕಿನಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ಮುಂದುವರೆದಿದ್ದು, ಮೂರನೇ ದಿನದ ಕಾರ್ಯಾಚರಣೆ ಬೇಲೂರು ಅರಣ್ಯಾಧಿಕಾರಿ ದಿಲೀಪ್ ಕುಮಾರ್ ನೇತೃತ್ವದಲ್ಲಿ ಇಂದು ಮತ್ತೊಂದು ಪುಂಡಾನೆಯನ್ನು ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ.
ಹೌದು,,,, ಬೇಲೂರು ತಾಲ್ಲೂಕಿನಾಧ್ಯಾಂತ ಮನೆಯ ಬಳಿ ಬಂದು ಬೈಕ್, ಆಟೋ ಜಖಂಗೊಳಿಸಿ ರೈತರ ಬೆಳೆ ಹಾಳು ಮಾಡಿ ಉಪಟಳ ನೀಡುತ್ತಿದ್ದ ಪುಂಡಾನೆಯನ್ನು ಬೇಲೂರು ತಾಲ್ಲೂಕಿನ ಕಣದೂರು ಗ್ರಾಮದಲ್ಲಿ ಸೆರೆ ಹಿಡಿಯಲಾಗಿದೆ. ಕಾಫಿ ತೋಟದಲ್ಲಿ ಎರಡು ಕಾಡಾನೆಗಳನ್ನು ಪತ್ತೆ ಹಚ್ಚಿದ್ದ ಅರಣ್ಯ ಅಧಿಕಾರಿಗಳು ಅವುಗಳನ್ನು ಬೆರ್ಪಡಿಸಲು ಹರಸಾಹಸಪಟ್ಟರು.ಸುಮಾರು ಸಮಯದ ಬಳಿಕ 18 ವರ್ಷದ ಪುಂಡಾನೆಗೆ ಅರವಳಿಕೆ ಚುಚ್ಚು ಮದ್ದು ನೀಡಲಾಯಿತು.
ಪ್ರಜ್ಞೆ ತಪ್ಪಿದ ಬಳಿಕ ಅದನ್ನು ಕುಮ್ಕಿ ಆನೆಗಳ ನೆರವಿನಿಂದ ರಸ್ತೆಗೆ ಕರೆತಂದು ಲಾರಿಗೆ ಹತ್ತಿಸಿ ಕುಶಾಲನಗರ ದುಬಾರೆ ಕ್ಯಾಂಪ್ ಗೆ ಬಿಡಲಾಯಿತು.
ಕಾರ್ಯಚರಣೆಯಲ್ಲಿ ಪಿಸಿಸಿಎಪ್ ಸುಭಾಷ್ ಮಾಲ್ಕಡೆ, ಡಿ.ಸಿ.ಎಪ್ ಸೌರಬ್ ಕುಮಾರ್, ಎ.ಸಿ.ಎಪ್ ಪುಳಕಿತ್ ಮೀನ, ಮಹದೇವ್ ಸೇರಿದಂತೆ ಮತ್ತಿತರರು ಹಾಜರಿದ್ದರು.



