ಸಕಲೇಶಪುರದ ಹಬ್ಬ ಸಕಲೇಶ್ವರಸ್ವಾಮಿ ಜಾತ್ರೆ ಹತ್ತಿರ ಬರುತ್ತಿದೆ ಅದರಂತೆ ಸಕಲೇಶಪುರವನ್ನು ಸಹ ಸಿಂಗರಿಸಬೇಕು ಅದರಲ್ಲಿ ಮುಖ್ಯವಾಗಿ ಸಕಲೇಶಪುರದ ಮುಖ್ಯದ್ವಾರ ಎಂದೆ ಖ್ಯಾತಿಯಾಗಿರುವ ಸಕಲೇಶಪುರದ ಹೃದಯ ಭಾಗದಲ್ಲಿರುವ ಹೇಮಾವತಿ ಸೇತುವೆ ಎರಡು ಕಡೆ ಕಳೆದ ವರ್ಷ ಮಧುವಣ ಗಿತ್ತಿಯಂತೆ ಸಿಂಗಾರ ಮಾಡಿದಂತಹ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಸರ್ವ ಸದಸ್ಯರಿಗೂ ಅವರಿಗೆ ಹೃದಯಪೂರ್ವಕವಾಗಿ ಧನ್ಯವಾದಗಳು ತಿಳಿಸುತ್ತೇನೆ.

ಆದರೆ ಈ ಬಾರಿ ಅವರಲ್ಲಿ ನಾನು ಕಳಕಳಿಯಿಂದ ಕೇಳಿಕೊಳ್ಳುವುದೇನೆಂದರೆ ಪ್ರತಿವರ್ಷವೂ ನೀವೇ ಮಾಡುವುದಾದರೆ ನಿಮಗೂ ಸಹ ಕಷ್ಟಕರ ಪರಿಸ್ಥಿತಿ ಎದುರಾಗುತ್ತದೆ ಎಂಬುವುದು ನಮಗೂ ತಿಳಿದಿದೆ ಅದನ್ನು ಮನಗಂಡು ನಾನು ಈ ಬಾರಿ ಬೇರೆ ಸಂಘಟನೆ ಅವರ ಜೊತೆ ಕೈಜೋಡಿಸಿ ಇದೇ ಮುಖ್ಯದ್ವಾರ ಸೇತುವೆಗೆ ಸುಣ್ಣ ಬಣ್ಣವನ್ನು ಹೊಡೆಯುವ ನಿರ್ಧಾರವನ್ನು ಮಾಡಿರುತ್ತೇನೆ.

ಅದರಲ್ಲೂ ನೀಲಿ ಬಣ್ಣವನ್ನೇ ಹೊಡೆಯಬೇಕು ಎಂದು ನಿರ್ಧರಿಸಿದ್ದೇನೆ.

…ಇಂತಿ ಸತೀಶ್ ಬೋಲ್ಟ್ ಬಾಗೆ ಗ್ರಾಮ ಪಂಚಾಯಿತಿ ಸದಸ್ಯರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *