
ಸಕಲೇಶಪುರ : ದಿನಾಂಕ:26/01/2024 ರಂದು ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಸನ್ಮಾನ ಮಾಡಲು ಸನ್ಮಾನಿತರನ್ನು ಆಯ್ಕೆ ಮಾಡುವ ಸಂಬಂಧ ದಿನಾಂಕ:16/01/2024 ರಂದು ಸಕಲೇಶಪುರ ತಾಲ್ಲೂಕು ಪಂಚಾಯಿತಿಯಲ್ಲಿ ನಡೆದ ಸಭೆಯಲ್ಲಿ 1. ಸಾಹಿತ್ಯ ಕ್ಷೇತ್ರ 2. ಸಮಾಜ ಸೇವೆ, 3.ಕ್ರೀಡಾ ಕ್ಷೇತ್ರ, 4.ಪತ್ರಿಕೋದ್ಯಮ, 5.ಕೃಷಿ, 6.ಶಿಕ್ಷಣ, 7. ಪೌರ ಕಾರ್ಮಿಕ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಸನ್ಮಾನ ಮಾಡಲು ಸಾಧನೆಗೈದ ಸೇವಾ ವಿವರದೊಂದಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಸಕಲೇಶಪುರ ರವರ ಅಧ್ಯಕ್ಷತೆಯಲ್ಲಿ ಮೇಲ್ಕಂಡ 7 ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದವರನ್ನು ಆಯ್ಕೆ ಮಾಡುವ ಸಂಬಂಧ ಅಭ್ಯರ್ಥಿಗಳು ಸಂಬಂಧಿಸಿದ 7 ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ್ದಲ್ಲಿ ದಿನಾಂಕ: 23/01/2024 ರ ಮಧ್ಯಾಹ್ನ 1.00 ಗಂಟೆಯ ಒಳಗೆ ಈ ಕೆಳಕಂಡ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
*ಹೆಸರು
*ತಂದೆ/ಗಂಡನ ಹೆಸರು
*ವಿಳಾಸ*
ದೂರವಾಣಿ ಸಂಖ್ಯೆ *ಸಾಧನೆ ಕ್ಷೇತ್ರ
*ಸಾಧನೆಗೈದ ಸೇವಾ ವಿವರ*
ಈ ಹಿಂದೆ ಪಡೆದ ಸನ್ಮಾನ/ ಪ್ರಶಸ್ತಿ ವಿವರ
*ಹೆಚ್ಚುವರಿ ಮಾಹಿತಿ
*ವಿವಿಧ ಸಾಧನೆ/ ಸೇವೆಯ ಛಾಯಚಿತ್ರ ಲಗ್ಗತ್ತಿಸುವುದು.
ಅರ್ಜಿ ಸಲ್ಲಿಸಬೇಕಾದ ಕಛೇರಿ ವಿವರ (ಈ ಕೆಳಗಿನ ಯಾವುದಾದರು ಒಂದು ಕಛೇರಿಗೆ)
1. ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ ಸಕಲೇಶಪುರ- 9480867135
2. ಆರಕ್ಷಕ ವೃತ್ತ ನಿರೀಕ್ಷಕರು, ನಗರ ಠಾಣೆ, ಸಕಲೇಶಪುರ
3. ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಕಲೇಶಪುರ- 9663800676
4. ಅಧ್ಯಕ್ಷರು, ಕಾರ್ಯನಿರತ ಪತ್ರಕರ್ತರ ಸಂಘ, ಸಕಲೇಶಪುರ- 7975687081
5. ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್, ಸಕಲೇಶಪುರ- 8762098131ಅರ್ಜಿದಾರರ ಸಹಿ.

