ಸಕಲೇಶಪುರ : ತಾಲೂಕು ಕ್ಯಾಮನಹಳ್ಳಿಯಲ್ಲಿ ಒಂದು ಅರ್ಥಪೂರ್ಣ ಕಾರ್ಯಕ್ರಮವನ್ನು ಶ್ರೀ ಜ್ಞಾನಜ್ಯೋತಿ ಪ್ರೌಢಶಾಲೆ (ಶ್ರೀಕಲ್ಮುರುಡೇಶ್ವರ ಗುರುಕುಲ ಶ್ರಮ ವಿದ್ಯಾ ಪೀಠ ಕರಡಿ ಗವಿಮಠ ಸಿಂದಗಿ ಚಿಕ್ಕಮಂಗಳೂರು ಜಿಲ್ಲೆ ಇವರು ನಡೆಸಿಕೊಂಡು ಬರುತ್ತಿರುವ ಈ ಶಾಲೆ) ವತಿಯಿಂದ ಗುರುವಂದನ ಕಾರ್ಯಕ್ರಮ ಆಚರಿಸಲಾಯಿತು

ಈ ಸಂಸ್ಥೆಯು ಬೆಳೆದು ಬಂದ ಹಾದಿ ಮತ್ತು ಸಂಸ್ಥೆಯನ್ನು ಬೆಳೆಸಲು ಶ್ರಮಿಸಿದಂತಹ ಎಲ್ಲಾ ಹಿರಿಯ ವ್ಯಕ್ತಿಗಳನ್ನು ಶಾಲೆಯನ್ನು ನಡೆಸಿಕೊಂಡು ಬಂದ ಹಳೆಯ ಶಿಕ್ಷಕ ವೃಂದದವರು ಮತ್ತು ತನು ಮನ ಧನದಿಂದ ಸಹಾಯ ಮಾಡಿದ ಎಲ್ಲ ಸಮಾಜ ಸೇವಕರು ಮತ್ತು ಗ್ರಾಮಸ್ಥರನ್ನು ಗೌರವಿಸಲಾಯಿತು.

ಹಳೆಯ ವಿದ್ಯಾರ್ಥಿ ಗಳ ಮತ್ತು ಹಳೆ ಶಿಕ್ಷಕ ವೃಂದದವರ ಸಮ್ಮಿಲನ ಕಾರ್ಯಕ್ರಮವು ಸಹ ಆಯಿತು ಎಲ್ಲರನ್ನು ಸ್ಮರಿಸುವ ಈ ಕಾರ್ಯಕ್ರಮ ತುಂಬಾ ಅಚ್ಚುಕಟ್ಟಾಗಿ ಮತ್ತು ಹೃದಯ ತುಂಬಿ ಬಂದ ಹಾಗೆ ಇತ್ತು.

ವಿಶೇಷವಾಗಿ 1998-99 ನೇ ರಲ್ಲಿ ಎಸ್ ಎಸ್ ಎಲ್ ಸಿ ಯನ್ನು ಮುಗಿಸಿ ಹೋಗಿದ್ದ ಹಳೆ ವಿದ್ಯಾರ್ಥಿಗಳು ವಾಟ್ಸಾಪ್ನಲ್ಲಿ ಗೋಲ್ಡನ್ ಗ್ರೂಪ್ ಮಾಡುವ ಮೂಲಕ 98 – 99 ನೇ ಸಾಲಿನಲ್ಲಿ ಅವರಿಗೆ ಶಿಕ್ಷಣವನ್ನು ನೀಡಿದಂತಹ ಗೌರವಾನ್ವಿತ ಶಿಕ್ಷಕರುಗಳಿಗೆ ವಿದ್ಯಾರ್ಥಿನಿಯರ ಸಂಘದಿಂದ ಗುರುವಂದನ ಕಾರ್ಯಕ್ರಮವನ್ನು ವಿಶೇಷವಾಗಿ ಆಚರಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *