ಅರಸೀಕೆರೆ : ಹಾಸನ ಲೋಕಸಭೆ ಚುನಾವಣೆ ಹಿನ್ನೆಲೆ ಎರಡು ದಿನಗಳ ಜಿಲ್ಲಾ ಪ್ರವಾಸ ಕೈಗೊಂಡಿರುವ ಜಾತ್ಯತೀತ ಜನತಾದಳದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮಾಜಿ ಪ್ರಧಾನಿಯಾದ ಹೆಚ್ ಡಿ ದೇವೇಗೌಡ ರವರು ಅರಸೀಕೆರೆಯಲ್ಲಿ ಪೂರ್ವಭಾವಿ ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಪ್ರಧಾನಿಗಳಾದ ದೇವೇಗೌಡ ರವರು ಲಿಂಗಾಯಿತ ಸಮುದಾಯಕ್ಕೆ ಏನು ಅನ್ಯಾಯ ಮಾಡಿದ್ದೇನೆ ಹೇಳಿ. ಅರಸೀಕೆರೆಗೆ ಕುಡಿಯುವ ನೀರಿಗೆ 24 ಬೋರ್‌ವೆಲ್ ಹಾಕಿಸಿದೆ, ಆದರೆ ಕುಡಿಯುಲು ನೀರು ಯೋಗ್ಯವಲ್ಲ ಅಂದರು. ಹೇಮಾವತಿ ನದಿಯಿಂದ ನೇರವಾಗಿ ನೀರು ತಂದೆ. ಯಾವುದೇ ಒಬ್ಬ ವ್ಯಕ್ತಿಯ ಹೆಸರು ಹೇಳಿ ಮತ ಕೇಳಲು ಬಂದಿಲ್ಲ.

ಅವರು ದೊಡ್ಡವರಿರಬಹುದು ಅವರ ಬಗ್ಗೆ ಮಾತನಾಡಲ್ಲ ಎಂದು ಶಿವಲಿಂಗೇಗೌಡರ ವಿರುದ್ಧ ಪರೋಕ್ಷವಾಗಿ ಗುಡುಗಿದರು.

ಕಳೆದ ಚುನಾವಣೆಯಲ್ಲಿ ಸಂತೋಷ್ ನಿಂತಾಗ ಸ್ವಲ್ಪಮಟ್ಟಿಗೆ ಮನಸ್ಸಿನಲ್ಲಿ ಸಂಶವಿತ್ತು, ಕಾರಣ ಬೇರೆ ಇತ್ತು. ನಾನು ಜ್ಯೋತಿಷ್ಯವನ್ನು ನಂಬುತ್ತೇನೆ.ಅಶೋಕ್ ಗ್ರಹಗಳ ಬಗ್ಗೆ ಕೇಳಿದೆ‌, ಸ್ವಲ್ಪ ಮಟ್ಟಿಗೆ ತೊಂದರೆ ಇತ್ತು. ಅದಕ್ಕಾಗಿ ಸಂತೋಷ್ ನಿಲ್ಲಿಸಿದೆ. ಇವತ್ತು ಸಭೆಯಲ್ಲಿ ವೇದಿಕೆ ಮೇಲೆ ಹೇಳ್ತಿನಿ.ಅರವತ್ತು ವರ್ಷ ರಾಜಕೀಯ ಜೀವನದಲ್ಲಿ ಕಾಂಗ್ರೆಸ್ ಜೊತೆ ನಾನು ಹೋರಾಟ ಮಾಡ್ದೆ, ನನ್ನನ್ನು ತುಳಿದರು.

ಮೋದಿ ಪಕ್ಕ ಕುಮಾರಸ್ವಾಮಿ, ರೇವಣ್ಣ ನಿಂತಿದ್ದರು.ಅವರನ್ನು ಬಿಟ್ಟು ನನ್ನನ್ನು ಕೈ ಹಿಡಿದು ಕೂರಿಸಿ ನೀವು ದೇಶಕ್ಕೆ ಸೇವೆ ಮಾಡಿದ್ದೀರಾ ಎಂದರು.

ನನ್ನ ಜೀವನದ ಕಡೆಯ ಘಟ್ಟದಲ್ಲಿ ಇದ್ದೇನೆ, ಎಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ. ನಾನು ಹೋಗುವ ಮುಂಚೆ ಅರಸೀಕೆರೆಯಲ್ಲಿ ಯಾರನ್ನು ನಿಲ್ಲಿಸಬೇಕು ಹೇಳಿ.ಅಶೋಕ್ ಮನಸ್ಸಿನಿಂದ ಹೇಳು ಎಂದರು.

ಸಂತೋಷ್ ಸಡಿಲ ಬಿಟ್ಟು ಹಳ್ಳಿ ಹಳ್ಳಿಗೆ ಹೋಗು. ನಾನು ಮುಸ್ಲಿಂರಿಗೆ ಅನ್ಯಾಯ ಮಾಡಿಲ್ಲ, ಹೆಣ್ಣುಮಕ್ಕಳಿಗೆ ಅನ್ಯಾಯ ಮಾಡಿಲ್ಲ. ಯಾರೇ ಏನು ಹೇಳಲಿ ಅಶೋಕ್ ದೇವೇಗೌಡ ನಿನಗೆ ಮೋಸ ಮಾಡ್ತಾನಾ ನೋ, ನೋನಾನು ಓಟಿಗೋಸ್ಕರ ಹೇಳುತ್ತಿಲ್ಲ ಎಂದು ಮಾತು ಕೊಟ್ಟರು.

ಹಾಗೂ ಇದೇ ಸಂದರ್ಭದಲ್ಲಿ ಹಾಸನ ಜಿಲ್ಲೆಯ ಲೋಕಸಭೆಯ ಸದಸ್ಯರಾದ ಪ್ರಜ್ವಲ್ ರೇವಣ್ಣ ರವರು ಮಾತನಾಡಿ ಕೇಂದ್ರ ಸರ್ಕಾರದಿಂದ ಬಂದ ಯೋಜನೆಗಳು ಹಾಗೂ ಮುಂಬರುವ ಯೋಜನೆಗಳ ಬಗ್ಗೆ ಮಾನ್ಯ ಪ್ರಧಾನಿಗಳಾದ ನರೇಂದ್ರ ಮೋದಿಜಿ ಅವರ ಭರವಸೆಗಳನ್ನು ಹೇಳುವ ಮೂಲಕ. ಮುಂದಿನ ದಿನಗಳಲ್ಲಿ ನಾನು ಮತ್ತು ಎಲ್ಲಾ ನಾಯಕರು ಕಾರ್ಯಕರ್ತರು ಸೇರಿ ಅರಸೀಕೆರೆಯಲ್ಲಿ ಜೆಡಿಎಸ್ ಪಕ್ಷವನ್ನು ಬಲಪಡಿಸುವಂತೆ ಹೇಳಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮುಖಂಡರಾದ ಎನ್ ಆರ್ ಸಂತೋಷ್, ಬಾಣವಾರ ಅಶೋಕ್, ಹಲವಾರು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *