
ಹಾಸನ : ವೀರಶೈವ ಲಿಂಗಾಯತ ಯುವ ಸೇನೆ ಹಾಗೂ ಕೆಂಪೇಗೌಡ ಯುವ ಸೇನೆ ಹಾಸನ ಸಹಯೋಗದೊಂದಿಗೆ ದಿನಾಂಕ 24-01-24 ರ ಬುಧವಾರ ತ್ರಿವಿಧ ದಾಸೋಹಿ, ನಡೆದಾಡುವ ದೇವರು ಡಾ!! ಶಿವಕುಮಾರ ಮಹಾಸ್ವಾಮಿಗಳ, ಆದಿಚುಂಚನಗಿರಿ ಮಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾಗಿದ್ದ ತ್ರಿವಿಧ ದಾಸೋಹಿ, ಪರಮಪೂಜ್ಯ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳ ಹಾಗೂ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳು ಜ್ಞಾನಯೋಗಾಶ್ರಮ ಶ್ರೀಗಳ ಪುಣ್ಯಸ್ಮರಣೆ ಅಂಗವಾಗಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಮಧ್ಯಾಹ್ನ 12 ಗಂಟೆಗೆ ದಾಸೋಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಶಾಖಾ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಶಂಭುನಾಥ ಸ್ವಾಮಿಗಳು, ಹಾಸನ ನಗರದ ಜವೇನಹಳ್ಳಿ ಮಠದ ಶ್ರೀ ಶ್ರೀ ಸಂಗಮೇಶ್ವರ ಸ್ವಾಮಿಗಳು, ಹಾಗೂ ತಣ್ಣೀರುಳ್ಳ ಮಟ್ಟದ ಶ್ರೀ ವಿಜಯಕುಮಾರ ಸ್ವಾಮಿಗಳು ಮತ್ತು ಹಾಸನ ಲೋಕಸಭಾ ಕ್ಷೇತ್ರದ ಸಂಸದರಾದ ಪ್ರಜ್ವಲ್ ರೇವಣ್ಣ ರವರು ಹಾಗೂ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕರಾದ ಸ್ವರೂಪ್ ಪ್ರಕಾಶ್ ರವರು ಆಗಮಿಸಲಿದ್ದಾರೆ ಹಾಗೂ ಈ ಒಂದು ಕಾರ್ಯಕ್ರಮದಲ್ಲಿ ಜಿಲ್ಲೆಯ ಸಮಸ್ತ ಸಮಾಜದ ಮುಖಂಡರುಗಳಿಗೆ ಸನ್ಮಾನ ಹಾಗೂ ಕನ್ನಡಪರ ಹೋರಾಟಗಾರರಿಗೆ ಸನ್ಮಾನವನ್ನು ಹಮ್ಮಿಕೊಳ್ಳಲಾಗಿದೆ
ಸರ್ವರಿಗೂ ಆದರದ ಸ್ವಾಗತ.
