
ಸಕಲೇಶಪುರ : ಅಯೋಧ್ಯೆಯಲ್ಲಿ ಶ್ರೀರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ನಿಮಿತ್ತ , ಇಂದು ರಾಘವೇಂದ್ರ ನಗರ (ಬಾಳೆಗದ್ದೆ)ಯ ಶ್ರೀ ಗುಹೆ ಕಲ್ಲಮ್ಮ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ, ರಾಮ ತಾರಕ ಹೋಮ ಹಾಗೂ ಶ್ರೀ ರಾಮನ ಜಪ ಮಾಡಲಾಯಿತು. ನಂತರ ದೇವಸ್ಥಾನದ ಆವರಣದಲ್ಲಿ ಸಭಾ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.
ಕಾರ್ಯಕ್ರಮಕ್ಕೆ ಶಾಸಕರಾದ ಸಿಮೆಂಟ್ ಮಂಜು ಆಗಮಿಸಿ ನೆರೆದಿದ್ದ ಭಕ್ತಾದಿಗಳಿಗೆ ಶ್ರೀರಾಮ ಮಂದಿರವನ್ನು ಕಟ್ಟಲು 500 ವರ್ಷದ ಕನಸು ನನಸಾಗಿದೆ. ಶ್ರೀ ರಾಮನ ಜೀವನ ಎಲ್ಲರಿಗೂ ಆದರ್ಶವಾಗಲಿ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಹಾರಿಕ ಮಂಜುನಾಥ್ ರಾಮ ಭಕ್ತರಿಗೆ ಇನ್ನಷ್ಟು ರಾಮ ಭಕ್ತಿ ಉಕ್ಕುವಂತೆ ತಮ್ಮ ಬೆಂಕಿ ಉಂಡೆಯಂತಹ ಭಾಷಣವನ್ನು ಮಾಡಿ ನೆರೆದಿದ್ದವರನ್ನು ಭಕ್ತ ಪರವಶರನ್ನಾಗಿ ಮಾಡಿದರು. ನಂತರ ಭಕ್ತರಿಗೆ ಪ್ರಸಾದ ವಿನಿಯೋಗವನ್ನು ಏರ್ಪಡಿಸಲಾಗಿತ್ತು.








