ಚನ್ನರಾಯಪಟ್ಟಣ: ಅಯೋಧ್ಯೆಯಲ್ಲಿ ಶ್ರೀರಾಮ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮ ಹಿನ್ನೆಲೆ ಪಟ್ಟಣದ ಗಾಂಧಿ ಸರ್ಕಲ್ ನಲ್ಲಿರುವ ರಾಯರ ರಂಗಮಂದಿರದಲ್ಲಿ ರಾತ್ರಿ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀರಾಮ ಉತ್ಸವ ದೀಪೋತ್ಸವದಲ್ಲಿ 1111 ದೀಪಗಳನ್ನು ವಿತರಿಸಲಾಯಿತು,

ಬೆಳಕಿನ ಜ್ಯೋತಿಯನ್ನು ಒಬ್ಬರಿಂದ ಒಬ್ಬರಿಗೆ ಹಚ್ಚುವ ಮೂಲಕ ಭಾರತೀಯ ಸಂಸ್ಕೃತಿ, ಸಂಸ್ಕಾರ, ಬಾಂಧವ್ಯ ಮೆರೆದ ನಗರದ ಮಹಿಳೆಯರು ಉತ್ತರ ದಿಕ್ಕಿಗೆ ನಿಂತು ದೀಪ ಬೆಳಗುವ ಮೂಲಕ ಶ್ರೀ ರಾಮ್, ಜಯ್ ರಾಮ್ ಜಯ್ ಜಯ್ ರಾಮ್ ಎಂದು ಘೋಷಣೆಗಳನ್ನು ಕೂಗುವ ಮೂಲಕ ಗಾಂಧಿ ವೃತ್ತ ಮಾರ್ಗವಾಗಿ ದೀಪೋತ್ಸವ ಮೆರವಣಿಗೆ ಮಾಡಿ ನಂತರ ಶ್ರೀ ರಾಮ್ ದೇವರಿಗೆ ಮಹಾಮಂಗಳಾರತಿ ನಡೆಸಿ ಭಾಗವಹಿಸಿದ ಸರ್ವ ಭಕ್ತಾದಿಗಳಿಗೂ ಕಡಲೆಕಾಳು ಹಾಗೂ ಪುಳಿಯೋಗರೆ ಪ್ರಸಾದವನ್ನು ವಿತರಣೆ ಮಾಡಲಾಯಿತು.

ಶ್ರೀ ರಾಮ ದೇವರ ದೀಪೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಮಹಿಳೆಯರು ಭಾಗವಹಿಸಿ ಸಂಭ್ರಮಕ್ಕೆ ಸಾಕ್ಷಿಯಾದರು.

ಈ ಕಾರ್ಯಕ್ರಮದಲ್ಲಿ ಭರತನಾಟ್ಯ ಕಲಾವಿದೆ ಹಾಗೂ ರಾಯರಂಗಮಂದಿರದ ನಿರ್ದೇಶಕಿ ಸ್ವಾತಿ ಪಿ ಭಾರದ್ವಾಜ್, ರಾಯರ ರಂಗಮಂದಿರದ ಅಧ್ಯಕ್ಷರಾದ ಶ್ರೀಮತಿ ಅನಿತಾ, ಎಂ ಕೆ ಪ್ರಕಾಶ್, ಅರ್ಚಕರಾದ ಸೋಮಶೇಖರ್,ರಾಯರ ರಂಗಮಂದಿರದ ಸದಸ್ಯರಾದ ಜಗದೀಶ್,ಲೋಕೇಶ್ ದಾಸ್, ಸಂಗೀತ ಗುರುಗಳಾದ ವಿದ್ವಾನ್ ರಾಮಚಂದ್ರ,ವಿಶ್ವ ಹಿಂದೂ ಪರಿಷತ್ತಿನ ಪದಾಧಿಕಾರಿಗಳಾದ ಧರಣಿ ನಾಗೇಶ್,ಕೆರೆಬೀದಿ ಜಗದೀಶ್, ಶಾಮ್ ಸುಂದರ್ ಸೇರಿದಂತೆ ಇತರರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *