ಆಲೂರು: ಪ್ರತಿಯೊಬ್ಬರು ತಮ್ಮ ಕಾರ್ಯ ವ್ಯಾಪ್ತಿ ಕ್ಷೇತ್ರದಲ್ಲಿ ಶ್ರಮ ಮತ್ತು ನಿಸ್ವಾರ್ಥ ಸೇವೆ ಯಿಂದ ಕೆಲಸ ಮಾಡಿದರೆ ಅದೇ ನಿಜವಾದ ಸಾಧನೆ. ಸಾಧನೆಯನ್ನ ಯಾರು ಕೂಡ ಹಣ ಕೊಟ್ಟು ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂದು ರಾಜ್ಯ ಕಾರ್ಯನಿರ್ತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಹೆಚ್ ಬಿ ಮದನ್ ಗೌಡ ಅಭಿಪ್ರಾಯಪಟ್ಟರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿಂದು ತಾಲೂಕು ಕಾರ್ಯನಿರ್ತಾ ಪತ್ರಕರ್ತರ ಸಂಘ ಆಯೋಜಿಸಿದಂತಹ ಕ್ಯಾಲೆಂಡರ್ ಬಿಡುಗಡೆ ಮತ್ತು ತಾಲೂಕಿನ ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಯಾವೊಬ್ಬ ವ್ಯಕ್ತಿಯು ಕೂಡ ತಾನು ಮಾಡುವ ಕೆಲಸದ ಬಗ್ಗೆ ಹೆಮ್ಮೆ ಪಡಬೇಕು.

ಯಾವ ಕೆಲಸವೂ ಕೂಡ ಮೇಲಲ್ಲ ಕೀಳಲ್ಲ ಎಲ್ಲದಕ್ಕೂ ತನ್ನದೇ ಆದಂತಹ ಗೌರವ ಇರುತ್ತದೆ. ಅಂತಹ ಕೆಲಸದಲ್ಲಿ ವಿಶಿಷ್ಟ ಸಾಧನೆ ಮಾಡಿದಂತಹ ಸಾಧಕರನ್ನು ಇಂದು ತಾಲೂಕು ಸಂಘ ಗುರುತಿಸಿ ಸನ್ಮಾನಿಸುತ್ತಿರುವುದು ನಿಜಕ್ಕೂ ಸಂತೋಷ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವಂತಹ ಸಾಧಕರನ್ನ ಇಂದು ಸನ್ಮಾನಿಸಲಾಗುತ್ತಿದೆ. ಸಾಧನೆ ಮಾಡಲು ಹೋದವರಿಗೆ ಜನ ಹುಚ್ಚರೆನ್ನುತ್ತಾರೆ ಅದೇ ದುಡ್ಡು ಮಾಡುವವರಿಗೆ ಬೆನ್ನು ತಟ್ಟುತ್ತಾರೆ. ಇಂತಹ ಸಂದರ್ಭದಲ್ಲಿ ಗುರುತಿಸಿ ಅವರಿಗೆ ಪ್ರೋತ್ಸಾಹಿಸುವಂತಹ ಎಚ್ಚೆತ್ತು ನಡೆಯಬೇಕು ಇಂತಹ ಕಾರ್ಯವನ್ನು ಮಾಡಿರುವಂತಹ ನಮ್ಮ ತಾಲೂಕು ಸಂಘಕ್ಕೆ ತುಂಬು ಹೃದಯದ ಅಭಿನಂದನೆಗಳು ಎಂದು ಹೇಳಿದರು.

ಮಾಜಿ ಸಚಿವ ಹೆಚ್.ಕೆ .ಕುಮಾರಸ್ವಾಮಿ ಮಾತನಾಡಿ, ಆಲೂರು ತಾಲೂಕು ಅತ್ಯಂತ ಸಣ್ಣ ತಾಲೂಕಾಗಿದೆ. ಆದರೆ ಅದು ಹಿಂದುಳಿದ ತಾಲೂಕಾಗಿಲ್ಲ. ಈಗಾಗಲೇ ಎಲ್ಲಾ ಕ್ಷೇತ್ರಗಳಲ್ಲಿ ಕೂಡ ತನ್ನದೇ ಆದಂತಹ ಛಾಪು ಮೂಡಿಸುತ್ತಿದೆ ಈಗಾಗಲೇ ಪತ್ರಕರ್ತರ ಸಂಘ ಕೇವಲ ಸಮಾಜದ ಸರಿ ತಪ್ಪುಗಳನ್ನು ತಿದ್ದಿ ಸಮಾಜದಲ್ಲಿ ಇರುವಂತಹ ಸಾಧಕರನ್ನು ಗುರುತಿಸಿ ಅವರನ್ನು ಗೌರವಿಸುವ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಪತ್ರಿಕೆಗಳಿಂದ ಹೆಚ್ಚು ಸಾಧನೆ ಮಾಡಲು ಸಾಧ್ಯವಾಗುತ್ತಿದೆ ಅಂತಹ ಪತ್ರಕರ್ತರಿಂ ದಲೇ ಸನ್ಮಾನಿಸುತ್ತಿರುವುದು ನಿಜಕ್ಕೂ ಸಂತೋಷ ತಂದಿದೆ. ಲಾಭ ಮತ್ತು ಸ್ವಾರ್ಥದ ಅಪೇಕ್ಷೆ ಇಲ್ಲದೆ ಕೆಲಸ ಮಾಡುವವರು ನಿಜವಾದ ಸಾಧಕರು ಎಂದು ಗುಣಗಾನ ಮಾಡಿದರು.

ರಾಜ್ಯ ಪತ್ರಕರ್ತರ ಸಂಘದ ವಿಶೇಷ ಆಹ್ವಾನಿತ ಸದಸ್ಯ ರವಿನಕಲಗೂಡು ಮಾತನಾಡಿ, ಪ್ರತಿಯೊಂದು ಕ್ಷೇತ್ರದಲ್ಲಿಯೂ ಕೂಡ ಸನ್ಮಾನ ಕಾರ್ಯಕ್ರಮಗಳು ನಡೆಯುತ್ತವೆ ಆದರೆ ಪತ್ರಕರ್ತರ ಸಂಘ ತನ್ನ ತಾಲೂಕಿನ ಸಾಧಕರನ್ನ ಸನ್ಮಾನಿಸುತಿದೆ ಸನ್ಮಾನಿತರಿಗೆಲ್ಲ ಇದೊಂದು ಬಹುದೊಡ್ಡ ಗೌರವ ಎಂದು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯಾಂಗ ನ್ಯಾಯಾಂಗ ಶಾಸಕಾಂಗದ ರೀತಿ ಪತ್ರಿಕಾ ರಂಗವೂ ಕೂಡ ತನ್ನದೇ ಆದಂತಹ ಕೆಲಸ ಕಾರ್ಯಗಳ ಮೂಲಕ ಘನತೆ ಗೌರವಗಳನ್ನು ಉಳಿಸಿಕೊಂಡು ಬಂದಿದೆ, ಸಮಾಜದ ಎಲ್ಲಾ ಅಂಕುಡೊಂಕುಗಳನ್ನು ತಿದ್ದುವಂತಹ ಪತ್ರಕರ್ತರು ಎಂದು ಭಾವಿಸದೆ ಸಮಾಜದೊಳಗಿರುವಂತಹ ಸಾಧಕರನ್ನ ಗುರುತಿಸಿ ಅವರನ್ನು ಮುಖ್ಯ ವಾಹಿನಿಗೆ ತರುವಂತ ಕೆಲಸವನ್ನು ಕೂಡ ನಮ್ಮ ಪತ್ರಕರ್ತರ ಸಂಘ ಮಾಡುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷ ಬಾಳ್ಳುಗೋಪಾಲ್, ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ಎಸ್ .ಮಂಜೇಗೌಡ, ರಾಷ್ಟ್ರೀಯ ಮಂಡಳಿ ಸದಸ್ಯರಾದ ಕೆ.ಆರ್.ಮಂಜುನಾಥ್, ಜಿ.ಪ್ರಕಾಶ್, ತಾಲೂಕು ದಂಡಾಧಿಕಾರಿ ನಂದಕುಮಾರ್ ಹಾಗೂ ಹಿರಿಯ ಪತ್ರಕರ್ತ ಉದಯ್ ರವಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪೃಥ್ವಿ ಜಯರಾಮ್ ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ಹರೀಶ್, ತಾಲೂಕು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ನಟರಾಜ ನಾಕಲಗೂಡು, ರಾಘವೇಂದ್ರ, ಸೇರಿದಂತೆ ತಾಲೂಕಿನ ಹಲವು ಗಣ್ಯರು ಹಾಗೂ ತಾಲೂಕು ಪತ್ರಕರ್ತರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಹಾಜರಿದ್ದರು10 ಮಂದಿ ಸಾಧಕರಿಗೆ ಸನ್ಮಾನವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವಂತಹ 10 ಮಂದಿ ಸಾಧಕರನ್ನ ಸನ್ಮಾನಿಸಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಸೇನೆಯಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿದಂತಹ ಸೋಮಶೇಖರ್, ಮಾಧ್ಯಮದಲ್ಲಿ ಕ್ಷೇತ್ರದಿಂದ ಮೋಹನ್ ಕಣತೂರು, ಪದವಿ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದ ಗಾನವಿ, ಕೆ,ಎಂ.ಲಾವಣ್ಯ, ಎಂಬಿಬಿಎಸ್ ವ್ಯಾಸಂಗದಲ್ಲಿ ಉನ್ನತ ರಾಂuಕ್ ಪಡೆದ ಪುಣ್ಯ, ಕೃಷಿಯಲ್ಲಿ ಸಾಧನೆ ಮಾಡಿದ ಮಹಿಳೆ ಮಂಜುಳಾ ಜಿ.ಎಸ್, ಕ್ರೀಡೆಯಲ್ಲಿ ಭವ್ಯ ಮತ್ತು ಮೇಘನಾ ಅವರನ್ನ ಸನ್ಮಾನಿಸಿ ಗೌರವಿಸಲಾಯಿತು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *