
ಸಕಲೇಶಪುರ : ಪಟ್ಟಣದ ಮಿನಿ ವಿಧಾನಸೌಧ ಮುಂಭಾಗ ಮಾಜಿ ಸೈನಿಕರ ಸಂಘದ ವತಿಯಿಂದ, ಸೈನಿಕರಿಗೆ ಮಾಜಿ ಸೈನಿಕರಿಗೆ ಹಾಗೂ ವೀರ ನಾರಿಯರಿಗೆ ಭೂಮಿ ಹಕ್ಕಿಗಾಗಿ ಅನಿರ್ದಿಷ್ಟ ಅವಧಿ ಸತ್ಯಾಗ್ರಹ ಹಮ್ಮಿಕೊಳ್ಳಲಾಯಿತು.
5499 ಎಕರೆ ಜಮೀನು 1972 ರಲ್ಲಿ ಮಾಜಿ ಸೈನಿಕರಿಗಾಗಿ ಮೀಸಲಿರಿಸಿದ್ದ ಆದೇಶವನ್ನು ಕಡೆಗಣಿಸಲಾಗಿತ್ತು, 2011ರಲ್ಲಿ ವಿಧಾನಸೌಧ ದಿಂದ ಆದೇಶದ ನಕಲು ಪ್ರತಿ ಒಡೆದು ನ್ಯಾಯಾಲಯಕ್ಕೆ ದಾವೆ ಹಾಕಲಾಯಿತು, ಅಲ್ಲಿಂದ ಇಲ್ಲಿಯವರೆಗೂ ನ್ಯಾಯಾಲಯದ ಮೂಲಕ ಹೊರಟ ನಡೆದು 1189 ಎಕ್ಕರೆ ಮಾಜಿ ಸೈನಿಕರಿಗೆ ಮೀಸಲಿರಿಸಲಾಯಿತು,
ಕೋರ್ಟಿಗೆ 2021 ರಲ್ಲಿ ಪ್ರಮಾಣ ಪತ್ರ ನೀಡಿರುತ್ತಾರೆ. ಆದರೆ ಮಿಲಿಟರಿ ಅವರಿಗೆ ಕಾದಿರಿಸುವ ಜಾಗದಲ್ಲಿ ಮಂಜೂರು ಮಾಡದೆ ಅರಣ್ಯ ಇಲಾಖೆಗೆ ಖಾದಿರಿಸುವ ಪ್ರದೇಶದಲ್ಲಿ 37 ಸೈನಿಕರಿಗೆ ಮಂಜೂರು ಮಾಡಿದಲ್ಲದೆ ಇಬ್ಬರು ಮಾಜಿ ಸೈನಿಕರಿಗೆ ಸೇರಿ ಒಟ್ಟು 39 ಜನರಿಗೆ ಮಂಜೂರು ಮಾಡಿದ್ದಾರೆ.
ಆ ಜಾಗ ಅರಣ್ಯ ಇಲಾಖೆಗೆ ಸೇರಿರುವುದರಿಂದ ಅರಣ್ಯ ಇಲಾಖೆಯವರು ಸೈನಿಕರಿಗೆ ಪ್ರವೇಶ ನೀಡುತ್ತಿಲ್ಲ. ಇದರಿಂದಾಗಿ ಕಳೆದ ವರ್ಷ 2023 ರ ನವಂಬರ್ ತಿಂಗಳಲ್ಲಿ ಮಾಜಿ ಸೈನಿಕರ ಸಂಘದ ವತಿಯಿಂದ ಮುಷ್ಕರ ಹಮ್ಮಿಕೊಂಡಾಗ ಹಿಂದೆ ಇದ್ದ ಉಪ ವಿಬಾಗಾಧಿಕಾರಿಗಳು, ಅಧಿಕಾರಿಗಳು,ಶಾಸಕರು, ತಹಸಿಲ್ದಾರ್ ರವರು, 30 ದಿನಗಳ ಒಳಗೆ ಬಗೆಹರಿಸಿ ಕೊಡುವುದಾಗಿ ಭರವಸೆ ನೀಡಿದ ಕಾರಣ ಅನಿರ್ದಿಷ್ಟವದಿ ಮುಸ್ಕರ ಹಿಂಪಡಿಯಾಲಾಗಿತ್ತು,
ಆದರೆ ಈವರೆಗೂ ಯಾರಿಗೂ ಮಂಜೂರು ಆಗದ ಜಾಗವನ್ನು ಅರಣ್ಯ ಅಧಿಕಾರಿಗಳು ಪ್ರವೇಶ ಮಾಡಲು ಬಿಡದ ಕಾರಣ ಅನಿರ್ದಿಷ್ಟ ವಧಿ ಮುಷ್ಕರ ಹಮ್ಮಿಕೊಳ್ಳಲಾಗಿದ್ದ ಸ್ಥಳಕ್ಕೆ ಉಪವಿಭಾಗಾದಿಕಾರಿ ಗಳಾದ ಶೃತಿ ರವರು ಭೇಟಿ ನೀಡಿ ಸಂಬಂಧಪಟ್ಟ ದಾಖಲಾತಿಗಳನ್ನು ಪರಿಶೀಲನೆ ಮಾಡಲು ಕೆಲವು ದಿನಗಳ ಕಾಲಾವಕಾಶ ತೆಗೆದುಕೊಳ್ಳುವುದಾಗಿ ಹೇಳಿ ಮುಷ್ಕರವನ್ನು ಹಿಂಪಡೆಯಲು ಕೇಳಿಕೊಂಡರು.
ಆದರೆ ಮಾಜಿ ಸೈನಿಕ ಸಂಘದ ಪದಾಧಿಕಾರಿಗಳು, ಅಧ್ಯಕ್ಷರು, ಇದಕ್ಕೆ ಒಪ್ಪದೇ ಅನಿರ್ದಿಷ್ಟ ಅವಧಿ ಮುಷ್ಕರವನ್ನು ತಂಡ ರಾತ್ರಿ ಅಲ್ಲಿಯೇ ಮಲಗುವ ಮುಂದುವರಿಸಿದ್ದಾರೆ.



