ಬೇಲೂರು :೧೨ ನೇ ಶತಮಾನದ ಬಸವಣ್ಣನವರ ಸಮಕಾಲೀನ ಶರಣರಲ್ಲಿ ಮಡಿವಾಳ ಮಾಚಿದೇವರು ಒಬ್ಬರಾಗಿದ್ದಾರೆ ಎಂದು ಮಡಿವಾಳ ಜನಾಂಗದ ತಾಲೂಕು ಅಧ್ಯಕ್ಷ ಎಸ್ ನಾಗೇಶ್ ಹೇಳಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದ ಮಡಿವಾಳ ಮಾಚಯ್ಯ ಜಯಂತಿ ಅಂಗವಾಗಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಕಾಯಕನಿಷ್ಠೆ ದಾಸೋಹದಂತ ಮೌಲ್ಯಯುತವಾದ ಕಾಣಿಕೆ ನೀಡುವ ಮೂಲಕ ಹಕವಾರು ಶರಣರು ಅವರು ಹಾಕಿಕೊಟ್ಟ ಮಾರ್ಗ ಸಂದೇಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಅಲ್ಲದೆ ಮಡಿಹಾಳ ಮಾಚಿದೇವರು ಬದುಕಿನ ಸಾತ್ವಿಕತೆ ನೀಡಿ ಸತ್ಯ ಶುದ್ದ ಕಾಯಕ ಕೊಟ್ಟಂತವರಾಗಿದ್ದು ಸಮಾಜದಲ್ಲಿ ಜಾತಿ ಮುಖ್ಯವಲ್ಲ ಜೀವನ ಮುಖ್ಯ ಎಂದು ತೋರಿಸಿಕೊಟ್ಟಂತ ಮಹಾನ್ ಶರಣರು .

ಈಗಾಗಲೇ ಸರ್ಕಾರ ನಮಗೆ ಒಂದು ನಿವೇಷನ ನೀಡಿದ್ದು ನಮ್ಮ ಸಮುದಾಯಕ್ಕೆ ೧ ಕೋಟಿ ಹಣವನ್ನು ಸಹ ನೀಡಿದ್ದು ಇದನ್ನು ಕೂಡಲೇ ಒಂದು ಸಮುದಾಯ ಭವನ ಕಟ್ಟಲು ಪ್ರಾರಂಭಿಸಬೇಕಾಗಿದ್ದು ಕೆಲವು ಕಾನೂನಿನ ಸಣ್ಣ ಪುಟ್ಟ ತೊಡಕುಗಳಿದ್ದು ಅಧಿಕಾರಿಗಳು ಕೂಡಲೆ ನಮಗೆ ಬಗೆಹರಿಸಿಕೊಟ್ಟರೆ ಮುಂದಿನ ಜಯಂತಿಯನ್ನು ನಮ್ಮ ಸಮುದಾಯಭವನದಲ್ಲೇ ಆಚರಿಸುತ್ತೇವೆ ಅದಕ್ಕೆ ಎಲ್ಲರ ಸಹಕಾರ ಅತಿಮುಖ್ಯ ಎಂದರು.

ನಂತರ ಮಾತನಾಡಿದ ಮಡಿವಾಳ ಜನಾಂಗದ ಜಿಲ್ಲಾ ನಿರ್ದೇಶಕ ಚಂದ್ರಶೇಖರ್ ಮಾತನಾಡಿ ಬಸವಣ್ಣನವರು 12ನೇ ಶತಮಾನದಲ್ಲಿ ಅನುಭವ ಮಂಟಪ ಕಟ್ಟಿ, ಸಮಾಜದ ಅಂಕುಡೊಂಕುಗಳನ್ನು ತಿದ್ದಿದ್ದರು. ಅಸ್ಪೃಶ್ಯತೆ ಆಚರಣೆಯನ್ನು ವಿರೋಧಿಸಿ, ಸ್ತ್ರೀಯರಿಗೂ ಸಮಾನತೆ ನೀಡಿದ್ದರು.

ಸಮಾಜದ ಕಟ್ಟಡ ಕಡೆಯ ಮನುಷ್ಯನ ಕಣ್ಣೀರು ಒರೆಸಲು ಶ್ರಮಿಸಿದ್ದರು. ಬಸವಣ್ಣನವರ ಜತೆಯಲ್ಲಿ ವಚನಗಳ ಮೂಲಕ ಸಮಾಜದ ಬದಲಾವಣೆಗೆ ಯತ್ನಿಸಿದ್ದ ಶರಣರಲ್ಲಿ ಮಾಚಿದೇವರು ಪ್ರಮುಖರು’ಅಲ್ಲದೆ ಸರ್ಕಾರಗಳುಸಹ ನಮ್ಮ ಸಮಾಜಕ್ಕೆ ಹೆಚ್ಚಿನ ಸಹಕಾರ ನೀಡಬೇಕು.ಅಲ್ಲದೆ ಸಮ ಸಮಾಜ ನಿರ್ಮಾಣಕ್ಕೆ ಬಸವಣ್ಣನವರು ತೋರಿದ ಹಾದಿಯಲ್ಲಿ ಮಡಿವಾಳ ಮಾಚಿದೇವರು ನಡೆದು, ಎಲ್ಲ ಶರಣರ ವಚನ ಸಾಹಿತ್ಯವನ್ನು ಸಂರಕ್ಷಣೆ ಮಾಡಿದರು’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರೇಡ್ ೨ ತಹಶಿಲ್ದಾರ್ ಅಶೋಕ್,ತಾಪಂ ಸಹಾಯಕ ನಿರ್ದೇಶಕ ದಯಾನಂದ್,ಶಿರಸ್ಥೇದಾರ ರಂಗಸ್ವಾಮಿ,ಪ್ರಕಾಶ್,ಜನಾಂಗದ ತಾರೇಶ್, ಹೇಂಮತ್,ಇತರರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *