ಹಾಸನ: ಮಕ್ಕಳ ಸರ್ವಾಂಗಿಣ ಬೆಳವಣಿಗೆ ಮತ್ತು ಜೀವನ ಮೌಲ್ಯಗಳು ಬೆಳೆಸಿ ವ್ಯಕ್ತಿತ್ವ ವಿಕಸನ ಗೊಳಿಸುವುದಕ್ಕಾಗಿ ಭಾರತ ಸ್ಕೌಟ್ಸ್ ಮತ್ತು ಶ್ರಮಿಸುತ್ತಿದೆ ಎಂದು ಸ್ಕೌಟ್ಸ್ ಅಂಡ್ ಗೈಡ್ಸ್ ನ ಜಿಲ್ಲಾ ಉಪಾಧ್ಯಕ್ಷರಾದ ಗಿರಿಜಾಂಬಿಕಾ ಅಭಿಪ್ರಾಯಪಟ್ಟರು.

ತಾಲೂಕು ಸ್ಥಳೀಯ ಸಂಸ್ಥೆವತಿಯಿಂದ ಜಿಲ್ಲಾ ಸ್ಕೌಟ್ ಭವನದಲ್ಲಿ ಹಮ್ಮಿಕೊಂಡಿದ್ದ ತಾಲೂಕ ಮಟ್ಟದ ದ್ವಿತೀಯ ಸೋಪಾನ ಪರೀಕ್ಷಾ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಮಕ್ಕಳ ಶೈಕ್ಷಣಿಕ ಬೆಳವಣಿಗೆ ಹಾಗೂ ಸಾಮಾಜಿಕ ಮೌಲ್ಯಗಳ ಬೆಳವಣಿಗೆಗೆ ಅನುಕೂಲವಾಗುವಂತೆ ಹಮ್ಮಿಕೊಳ್ಳುವ ಈ ಸ್ಕೌಟ್ಸ್ ಅಂಡ್ ಗೈಡ್ಸ್ ಚಟುವಟಿಕೆಗಳಲ್ಲಿ ನೀವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಹಾಗೂ ಜಿಲ್ಲಾ ರಾಜ್ಯ ರಾಷ್ಟ್ರಮಟ್ಟದಲ್ಲಿನ ಪರೀಕ್ಷಾಗಳಲ್ಲಿ ಭಾಗವಹಿಸಿ ಉತ್ತಮ ಫಲಿತಾಂಶ ಪಡೆಯಿರಿ ಎಂದರು.

ಇದರಿಂದ ನಿಮಗೆ ಉನ್ನತ ವ್ಯಾಸಂಗ ಹಾಗೂ ಉದ್ಯೋಗಕ್ಕೂ ವಿಶೇಷ ಮೀಸಲಾತಿ ದೊರೆತು ನಿಮಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಮಕ್ಕಳಿಗೆ ತಿಳುವಳಿಕೆ ನೀಡಿದರು.

ಶಿಬಿರದ ನಾಯಕರದ ಎಂ.ಬಿ. ಮಹಾಲಿಂಗೇಗೌಡ ಹಾಗೂ ಕಾಂಚನ ಮಾಲ ರವರು ಶಿಬಿರದ ಮಾಹಿತಿ ನೀಡಿದರು ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಿದರು ಇದೇ ಸಂದರ್ಭದಲ್ಲಿ ಸರ್ಕಾರಿ ಪ್ರೌಢಶಾಲೆ ದೊಡ್ಡಗೇಣಿಕಗೆರೆಯಲ್ಲಿ ನೂತನವಾಗಿ ಪ್ರಾರಂಭಿಸಿರುವ ಸ್ಕೌಟ್ಸ್ ಘಟಕಕ್ಕೆ ತಾಲ್ಲೂಕು ಕಾರ್ಯದರ್ಶಿ ಬಿ.ಎಸ್. ವನಜಾಕ್ಷಿ ಅವರು ಸಮವಸ್ತ್ರ ವಿತರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಖಜಾಂಚಿ ರಮೇಶ್, ಪ್ರಿಯಾಂಕ, ಆಲೂರು ತಾಲೂಕ ಕಾರ್ಯದರ್ಶಿ ಕೊಟ್ರೇಶ್ ಉಪ್ಪಾರ್, ಸ್ಕೌಟ್ ಮಾಸ್ಟರ್ ಗಳಾದ ಎಸ್.ಆರ್. ಲಕ್ಷ್ಮೀಶ್, ಗೈಡ್ ಕ್ಯಾಪ್ಟನ್ ಗಳಾದ ಕೆ.ಸಿ. ಗೀತಾ, ಹರ್ಷಿಯಬಾನು, ರೂಪ ಮುಂತಾದವರು ಭಾಗವಹಿಸಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *