
ಬೇಲೂರು : ಪಟ್ಟಣದ 11ನೇ ವಾರ್ಡಿನಲ್ಲಿ ವಾಸವಾಗಿರುವ ಕೋಟೆ ನಿವಾಸಿಗಳಿಗೆ ಮನೆ ಕಟ್ಟಲು ಹಾಗೂ ನಮ್ಮ ಹಳೆಮನೆಗಳ ದುರಸ್ತಿ ಮಾಡಲು ಸಹ ಕೆಲ ಅಧಿಕಾರಿಗಳು ಸುಮ್ಮನೆ ತೊಂದರೆ ಕೊಡುತ್ತಿದ್ದಾರೆ ನಮಗೆ ಮನೆ ಕಟ್ಟಲು ದೋಸ್ತಿ ಮಾಡಲು ಬಿಡದಿದ್ದರೆ ಅವರ ಕಚೇರಿ ಮುಂದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ನಿವಾಸಿಗಳು ಕಣ್ಣೀರು ಹಾಕಿದರು
ಅನನ್ಯ ವಾರ್ಡಿನ ಕೋಟೆ ಕೊಟ್ಟಿಗೆರೆ ಬೀದಿಯ ಭದ್ರೆಗೌಡ ಎಂಬುವರ ವಾಸಿಸುತ್ತಿದ್ದ ಮನೆಯು ಕಳೆದ ಮಳೆಗಾಲದಲ್ಲಿ ಬಿದ್ದು ಹೋದ ಕಾರಣ, ಒಂದು ಮನೆಯನ್ನು ಅದೇ ಜಾಗದಲ್ಲಿ ಕಟ್ಟಲು ಅನುಮತಿ ಗಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು,
ಈಗಾಗಲೇ ಪುರಸಭೆಯಿಂದಲೂ ಸಹ ಅನುಮತಿಯನ್ನು ಪಡೆದಾಗಿದೆ ಅಲ್ಲದೆ ದೇವಾಲಯದವರು ಅನುಮತಿ ನೀಡುತ್ತಿಲ್ಲ, ಈಗಾಗಲೇ ನಾವುಗಳು ಕುಡು ಬಡವರಾಗಿದ್ದರು ಸಹ ನಮಗೆ ವಾಸ ಮಾಡಲು ಮನೆ ಇಲ್ಲ ಈಗಾಗಲೇ ನಮ್ಮ ಹಳೆಯ ಮನೆಯಲ್ಲಿ ದುರಸ್ತಿ ಮಾಡುತ್ತಿದ್ದರು ಸಹ ಸುಮ್ಮನೆ ನಮಗೆ ದೇವಾಲಯದವ್ರು ಬಂದು ತೊಂದರೆ ಕೊಡುತ್ತಿದ್ದಾರೆ ಎಂದು ಭದ್ರೆಗೌಡ ಹಾಗೂ ದಂಪತಿಗಳು ತಮ್ಮ ಅಳಲನ್ನು ತೋಡಿಕೊಂಡರು
ನಾವು ಸುಮಾರು ವರ್ಷಗಳಿಂದ ಈ ಮನೆಯಲ್ಲಿ ವಾಸವಾಗಿದ್ದು ಕಳೆದ ಮಳೆಗಾಲದಲ್ಲಿ ನಮ್ಮ ಮನೆಯು ಬಿದ್ದುಹೋಗಿತ್ತು. ನಂತರದಲ್ಲಿ ಹೊಸ ಮನೆಯನ್ನು ನಿರ್ಮಾಣ ಮಾಡಲು ನಮಗೆ ಅನುಮತಿ ನೀಡಿ ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದರು, ಪುರತತ್ವ ಇಲಾಖೆಯವರು ನಮಗೆ ಅನುಮತಿಯನ್ನು ನೀಡುತ್ತಿಲ್ಲ, ನಮಗೆ ವಾಸಿಸಲು ಮನೆ ಇಲ್ಲ ನಾವು ಎಲ್ಲಿಗೆ ಹೋಗಬೇಕು, ಇತ್ತ ಬದುಕಲು ಬಿಡುತ್ತಿಲ್ಲ ಅತ್ತ ಸಾಯಲು ಬಿಡುತ್ತಿಲ್ಲ ನಮಗೆ ಸ್ವಲ್ಪ ವಿಷಯವನ್ನಾದರೂ ನೀಡಿ ಎಂದು ಬೇಸರದಿಂದ ಕಣ್ಣೀರ ಹಾಕಿದ ಅವರು ನಮಗೆ ಇದೇ ರೀತಿ ತೊಂದರೆ ಕೊಟ್ಟರೆ ನಮಗೆ ಯಾರು ತೊಂದರೆ ಕೊಡುತ್ತಿದ್ದಾರೆ ಅವರ ಹೆಸರು ಬರೆದು ಅವರ ಕಚೇರಿ ಮುಂಭಾಗದಲ್ಲಿ ವಿಷ ಸೇವಿಸುತ್ತೇವೆ ಎಂದು ಕುಟುಂಬ ಸಮೇತರಾಗಿ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಬಿಜೆಪಿ ಮುಖಂಡ ಅಲ್ಲಿನ ನಿವಾಸಿಯದ ಹೇಮಣ್ಣ ನಾವುಗಳು ಇಲ್ಲಿ ಬಹಳ ವರ್ಷಗಳಿಂದ ವಾಸವಾಗಿದ್ದೇವೆ ಒಂದು ಸಣ್ಣ ಮನೆಯನ್ನು ಕಟ್ಟಲು ಅನುಮತಿ ನೀಡದ ಸರ್ಕಾರಕ್ಕೆ ದಿಕ್ಕಾರ ಎಂದರಲ್ಲದೆ, ಉಳ್ಳವರಿಗೆ ಮನೆ ಅಥವಾ ಕಟ್ಟಡ ಕಟ್ಟಿಕೊಳ್ಳಲು ಅನುಮತಿ ಹೇಗೋ ದೊರೆಯುತ್ತದೆ ಆದರೆ ನಮ್ಮಂತ ಬಡವರಿಗೆ ಅನುಮತಿ ದೊರೆಯುವುದು ಕಷ್ಟಕರವಾಗಿದೆ, ಸುಮಾರು ನಾಲ್ಕೈದು ಮನೆಗಳಿಗೂ ಸಹ ಅನುಮತಿ ನೀಡಿಲ್ಲ ಕೆಲವರು ಈಗಾಗಲೇ ಸುಳ್ಳು ಮಾಹಿತಿಗಳನ್ನು ನೀಡಿ ಮನೆ ಮೇಲೆ ಮನೆಯನ್ನು ಕಟ್ಟಿದರು ಸಹ ಕಣ್ಣಿಗೆ ಕಾಣದಂತೆ ದೇವಾಲಯದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಆದರೆ ಬಡವರಿಗೆ ಒಂದು ನ್ಯಾಯ ಸಿರಿವಂತರಿಗೆ ಒಂದು ನ್ಯಾಯ ಅಲ್ಲದೆ ಸರ್ಕಾರದಿಂದ ಎಲ್ಲ ಅನುಮತಿಯನ್ನು ಪಡೆದಿದ್ದರು ಕೆಲ ಮನೆಗಳಿಗೆ ಸುಮ್ಮನೆ ಹಣಕ್ಕಾಗಿ ಬಂದು ಇಲಿಯ ಸಿಬ್ಬಂದಿಗಳು ತೊಂದರೆ ಕೊಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು
ಈ ಬಗ್ಗೆ ನಮ್ಮ ಶಾಸಕರಿಗೂ ಸಹ ಗಮನಕ್ಕೆ ತರಲಾಗುವುದು ನಮಗೆಅನುಮತಿ ನೀಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ವಾರ್ಡಿನ ನಿವಾಸಿಗಳಾದ ಕಮಲಮ್ಮ,ಪ್ರಕಾಶ್, ಸವಿತಾ, ಲಕ್ಷ್ಮಿ, ಮೀನಾಕ್ಷಿ, ದುರ್ಗಮ್ಮ, ರಾಜಣ್ಣ, ಲೀಲಾವತಿ ಚಂದನ್ ಇನ್ನೂ ಮುಂತಾದವರು ಹಾಜರಿದ್ದರು.
