
ಸಕಲೇಶಪುರ : ಸಕಲೇಶ್ವರಸ್ವಾಮಿ ರಥೋತ್ಸವದ ಅಂಗವಾಗಿ ಸಕಲೇಶಪುರದಲ್ಲಿ ನಡೆಯುವ ಜಾತ್ರೆಯನ್ನು ಪುರಸಭೆಯವರು ಸುಭಾಷ್ ಕ್ರಿಡಾಂಗಣದಲ್ಲಿ ನಡೆಸಲು ಉದ್ದೇಶಿಸಿದ್ದು ಇದನ್ನು ಕೂಡಲೇ ಕೈಬಿಡಬೇಕು ಇಲ್ಲವಾದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಮಾಜಿ ಕ್ರಿಕೇಟ್ ಅಟಗಾರ ಅರುಣ್ ರಕ್ಷಿದಿ ಹೇಳಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಫೆಬ್ರವರಿ 01 ರಂದು ಪುರಸಭಾ ಸಾಮಾನ್ಯ ಸಭೆಯಲ್ಲಿ ಸಕಲೇಶ್ವಸ್ವಾಮಿ ರಥೋತ್ಸವದ ಅಂಗವಾಗಿ ನಡೆಯುವ ಜಾತ್ರೆ ಮತ್ತು ವಸ್ತುಪ್ರದರ್ಶನವನ್ನು ಪಟ್ಟಣದ ಸುಭಾಷ್ ಮೈದಾನದಲ್ಲಿ ನಡೆಸುವುದಕ್ಕೆ ನಿರ್ಣಯ ಕೈಗೊಂಡಿರುವುದನ್ನು ಸಕಲೇಶಪುರದ ಪ್ರಜ್ಞಾವಂತ ನಾಗರಿಕರು ಹಾಗೂ ಕ್ರೀಡಾಪಟುಗಳು ವಿರೋಧಿಸುತ್ತೇವೆ.
ಕಳೆದ ಹಲವಾರು ತಿಂಗಳುಗಳಿಂದ ಕ್ರಿಡಾಂಗಣದ ಪಕ್ಕದಲ್ಲಿ ಕಸದ ರಾಶಿಯನ್ನು ಪುರಸಭೆಯವರು ಹಾಕಿದ್ದು ಇದರಿಂದ ಕ್ರೀಡಾ ಪಟುಗಳಿಗೆ ಹಾಗೂ ಇಲ್ಲಿಗೆ ಬರುವ ವಾಯುವಿಹಾರಿಗಳಿಗೆ ಮತ್ತು ಸಣ್ಣ ಕೈಗಾರಿಕೆ ನಡೆಸುವ ಗ್ಯಾರೇಜ್ ವರ್ತಕರಿಗೆ ಕಸದ ದುರ್ವಾಸನೆ ಬೀರುತ್ತಿದ್ದು ಇದನ್ನು ತೆಗೆದು ಅಲ್ಲಿಯೇ ಜಾತ್ರೆಯನ್ನು ನಡೆಸಲಿ ಯಾವುದೇ ಕಾರಣಕ್ಕೂ ಕ್ರೀಡಾಂಗಣದಲ್ಲಿ ಜಾತ್ರೆಯನ್ನು ನಡೆಸಲು ಬಿಡುವುದಿಲ್ಲ ಜಾತ್ರೆಯನ್ನು ಹರಾಜು ಮಾಡುವವರು ಮುಂದೆ ಹಾಗುವಂತ ತೊಂದರೆಗಳಿಗೆ ನಾವು ಜವಾಬ್ದಾರರಲ್ಲ ಎಂದು ಇದೆ ಸಂದರ್ಭದಲ್ಲಿ ಎಚ್ಚರಿಸಿದ್ದಾರೆ.
ಯುವ ಕ್ರೀಡಾ ಪಟು ಹೇಮಂತ್ ಮಾತನಾಡಿ ಸಕಲೇಶಪುರ ಸುಭಾಷ್ ಮೈದಾನ ತಾಲೂಕಿನ ಕ್ರೀಡಾ ಪಟುಗಳಿಗೆ ಆಟವಾಡಲು ಏಕೈಕ ಕ್ರೀಡಾಂಗಣವಾಗಿದೆ, ಈ ಮೈದಾನದಲ್ಲಿ ಪ್ರಾಥಮಿಕ , ಪ್ರೌಢಶಾಲಾ ಹಾಗೂ ಕಾಲೇಜು ಭಾಗದ ಹೋಬಳಿ ಹಾಗೂ ತಾಲೂಕು ಮಟ್ಟದ ಕ್ರೀಡೆ ನಡೆಸಲು ಇರುವ ಏಕೈಕ ಕ್ರೀಡಾಂಗಣವಾಗಿದೆ.
ಇದೇ ಕ್ರೀಡಾಂಗಣದಲ್ಲಿ ಕಳೆದ 50 ವರ್ಷಗಳಿಂದಲೂ ಎಂ ಸಿ ಸಿ, ಎಚ್ ಸಿ ಸಿ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಗೆ ನೋಂದಾಯಿಸಿಕೊಂಡು ಕ್ರಿಕೆಟ್ ಅಭ್ಯಾಸ ಹಾಗೂ ಪಂದ್ಯಾವಳಿಗಳನ್ನು ಆಡುತ್ತಿದ್ದಾರೆ ಎವರ್ ಗ್ರೀನ್ ಫುಟ್ಬಾಲ್ ಕ್ಲಬ್ ಸಂಸ್ಥೆಯು ಹಲವಾರು ವರ್ಷದಿಂದ ಇಲ್ಲಿ ಕ್ರೀಡೆಯನ್ನು ಆಡುತ್ತಾ ಬಂದಿದೆ.
ದಿನಕ್ಕೆ ನೂರಾರು ಜನಗಳು ವಾಯು ವಿಹಾರಕ್ಕೆ ಇರುವ ಏಕೈಕ ಕೇಂದ್ರವಾಗಿದೆ, ಪಟ್ಟಣದ ಕ್ರೀಡಾಂಗಣ ಇಂತಹ ಏಕೈಕ ಕ್ರೀಡಾಂಗಣವನ್ನು ಉಳಿಸಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಯೋಜನೆ ಮಾಡಬೇಕಾದ ಜವಾಬ್ದಾರಿ ಪುರಸಭೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಇರಬೇಕಾಗಿತ್ತು, ಜನತೆಯ ಹಾಗೂ ಕ್ರೀಡಾಪಟುಗಳ ದುರ್ದೈವ, ಕ್ರೀಡಾಂಗಣವನ್ನು ಉಳಿಸುವ ಮಾತನಾಡಬೇಕಾದ ಅವರೇ ಅದನ್ನು ಹಾಳು ಮಾಡಲು ಹೊರಟಿದ್ದಾರೆ. ಎಂದರು.
ನಾಗರೀಕ ಸಂರಕ್ಷಣಾ ಸಮಿತಿಯ ಅದ್ಯಕ್ಷ ರವಿಕುಮಾರ್ ಮಾತನಾಡಿ ಸಕಲೇಶಪುರದ ಸುಭಾಷ್ ಮೈದಾನದ ಕ್ರೀಡಾಂಗಣ ಯುವ ಸಬಲೀಕರಣ ಕ್ರೀಡಾ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದ್ದು ನಾವು ಶಾಸಕರಿಗೆ ಹಾಗೂ ಪುರಸಭೆ ಅಧಿಕಾರಿಗಳಿಗೆ ಮನವಿ ಮಾಡುವುದೇನೆಂದರೆ ಯಾವುದೇ ಕಾರಣಕ್ಕೂ ಸುಭಾಷ್ ಕ್ರಿಡಾಂಗಣದಲ್ಲಿ ಜಾತ್ರೆ ನಡೆಸಬಾರದು ಪುರಸಭೆಯವರು ಕ್ರೀಡಾಂಗಣದಲ್ಲಿ ಜಾತ್ರೆ ನಡೆಸಲು ಉದ್ದೇಶಿಸಿರುವುದನ್ನು ಸಕಲೇಶಪುರದ ನಾಗರೀಕರು ಹಾಗೂ ಕ್ರೀಡಾ ಪಟುಗಳ ವಿರೋಧವಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಕ್ರೀಡಾ ಪಟು ಶ್ರೀಕಾಂತ್, ಹೇಮಂತ್, ದಿನೇಶ್ ಮಾತನಾಡಿದರು.
