
ಬೇಲೂರು : ಪಟ್ಟಣದ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ ಎಂದು ಬೇಲೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಹೆಚ್ ಕೆ ಸುರೇಶವರು ಹೇಳಿದರು.
ಇಂದು ಬೆಳಿಗ್ಗೆ ಬೇಲೂರು ಪುರಸಭೆಯ ಅಧ್ಯಕ್ಷರು ವಾರ್ಡ ಸದಸ್ಯರು ಹಾಗೂ ಪುರಸಭೆಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಇಂಜಿನಿಯರ್ ಹಾಗೂ ಇತರೆ ಅಧಿಕಾರಿಗಳ ಜೊತೆಗೆ ವಾರ್ಡ ನಂಬರ್ 11,14 ಮತ್ತು 15 ನೇ ವಾರ್ಡ ತೆರಳಿ ಪ್ರಾರಂಭದ ಹಂತದಲ್ಲಿರುವ ಕಾಮಗಾರಿಗಳ ಗುಣ ಮಟ್ಟ ಪ್ರಗತಿ ಯನ್ನು ಪರಿಶೀಲಿಸಿದರು.
ಹಾಗೂ ನಗರೋತ್ಥಾನ ಯೋಜನೆ ಅನುಮೋದನೆಯಾಗಿದ್ದು ಯೋಜನೆಯಡಿ ಕೈಗೊಳ್ಳುವ ಕಮಾಗಾರಿಗಳ ಬಗ್ಗೆ ವಾರ್ಡನ ಸಾವರ್ಜನಿಕರೊಂದಿಗೆ ಮಾತನಾಡಿ ಯಾವ ಕೆಲಸಗಳು ಅವಶ್ಯಕತೆ ಇದೆ ಎಲ್ಲಿ ಕೆಲಸಗಳು ಕೈಗೊಳ್ಳಬೇಕು ಎಂದು ಆಯಾ ವರ್ಡಗೆ ತೆರಳಿ ನೇರವಾಗಿ ಸಾರ್ವಜನಿಕರೊಂದಿಗೆ ಚರ್ಚಿಸಿದರು ಕಾಮಗಾರಿಗಳ ಗುಣಮಟ್ಟದ ಬಗ್ಗೆ ಸಾರ್ವಜನಿಕರು ಪರಿಶೀಲಿಸಬೇಕು ಒಂದು ಕಾಮಗಾರಿಗಳ ಗುಣಮಟ್ಟ ಸರಿಇಲ್ಲವೆಂದು ಕಂಡು ಬಂದರೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಬೇಕೆಂದು ಸೂಚಿಸಿದರು .
ಚರಂಡಿ, ರಸ್ತೆ ಕಾಮಗಾರಿಗಳು ಸಾರ್ವಜನಿಕರಿಗೆ ಅವಶ್ಯಕ ವಾಗಿದ್ದು ಮುಂದಿನ ದಿನಗಳಲ್ಲಿ ಪ್ರತಿಯೊಂದು ವಾರ್ಡನ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಒತ್ತು ನೀಡಲಾಗುವುದುದೆಂದು ತಿಳಿಸಿದರು.
ವಾರ್ಡಗಳ ಸ್ವಚ್ಛತೆಗೆ ಹೆಚ್ವು ಆದ್ಯತೆ ನೀಡಲಾಗುವುದು ಬೇಲೂರು ಸ್ವಚ್ಚ ಹಾಗೂ ಸುಂದರ ನಗರವನ್ನಾಗಿಸಲು ಸಾರ್ವಜನಿಕರ ಅಹಕಾರ ಮುಖ್ಯ ಎಂದು ತಿಳಿಸಿದರು.
14 ನೇ ವಾರ್ಡ ಚರಂಡಿ ಗುಣಮಟ್ಟದ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿ ಕೂಡಲೆ ಸರಿ ಪಡಿಸಿ ಎಂದು ಇಂಜಿನಿಯರ್ ಜಗದೀಶ್ ರವರಿಗೆ ಸೂಚಿಸಿದರು.
ಪುರಸಭೆಯ ಅಧ್ಯಕ್ಷರಾದ ತಿರ್ಥಕುಮಾರಿ ವೆಂಕಟೇಶ ಮಾತನಾಡಿ ಎಲ್ಲಾ ವಾರ್ಡಗಳ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಲಾಗಿದ್ದು ಅದರಂತೆ ಕ್ರಮವಹಿಸಲಾಗುತ್ತಿದೆ ಅಲ್ಲದೆ ಪ್ರತಿನಿತ್ಯ ನಮ್ಮ ಪೌರಕಾರ್ಮಿಕರು ಸ್ವಚ್ಛತೆಗೆ ಮೊದಲ ಆದ್ಯತೆಯನ್ನು ನೀಡಿದ್ದಾರೆ ಸಾರ್ವಜನಿಕರು ಸಹ ನಮಗೆ ಕೈ ಜೋಡಿಸಬೇಕು ಈಗಾಗಲೇ ನಾವು ಮೊದಲ ಹಂತದಲ್ಲಿ ಪ್ರತಿವಾಡುಗಳನ್ನು ವೀಕ್ಷಣೆ ಮಾಡಿ ಎಲ್ಲಾ ಹಾಡುಗಳು ಪುರಸಭೆಗೆ ಬಂದಂತಹ ಅನುದಾನವನ್ನು ಸಮನಾಗಿ ಹಂಚೋ ಮೂಲಕ ಅಭಿವೃದ್ಧಿಯನ್ನು ಮಾಡಲಾಗುತ್ತದೆ ಶಾಸಕರು ಸಹ ಹೆಚ್ಚಿನ ಅನುದಾನವನ್ನು ತಂದು ಪಟ್ಟಣವನ್ನು ಅಭಿವೃದ್ಧಿಪಡಿಸಬೇಕು ಎಂದು ಮನವಿ ಮಾಡಿದರು
ಈ ಸಂದರ್ಭದಲ್ಲಿ ಪುರಸಭೆಯ ಉಪಾಧ್ಯಕ್ಷರಾದ ದಿವ್ಯ ಗಿರೀಶ್, ಸದಸ್ಯರಾದ ಬಿ.ಆರ್ ಪ್ರಭಾಕರ , ಗಿರೀಶ, ಸತೀಶ, ಮತ್ತು ಅಶೋಕ ಹಾಗೂ ಬಿ.ಜೆ.ಪಿ ಮುಖಂಡರಾದ ವಿನಯ , ರಂಗನಾಥ ಹೇಮಂತಕುಮಾರ , ಮನು,ಶ್ರೇಯೆಸ್ ಮುರಳಿ , ಶೇಕರ ಪ್ರಸನ್ನ ಮಂಜುನಾಥ ಇತರರು ಹಾಜರಿದ್ದರು ..
