
ಸಕಲೇಶಪುರ: ಟೀಮ್ ಹುಲಿಯಮ್ಮ ವತಿಯಿಂದ ವಾಲಿಬಾಲ್ ಲೀಗ್ ಪಂದ್ಯಾವಳಿ:
ಡಾ:ಪುನೀತ್ ರಾಜಕುಮಾರ್ ಕಪ್:
ತಾಲೂಕಿನ ಬೆಳಗೋಡು ಹೋಬಳಿ ದರ್ಬಾರ್ ಪೇಟೆ ಗ್ರಾಮದಲ್ಲಿ ಎರಡನೇ ವರ್ಷದ ಟೀಮ್ ಹುಲಿಯಮ್ಮ ವತಿಯಿಂದ ಡಾಕ್ಟರ್ ದಿವಂಗತ ಪುನೀತ್ ರಾಜಕುಮಾರ್ ನೆನಪಿಗಾಗಿ ಹೊನಲು ಬೆಳಕಿನ ವಾಲಿಬಾಲ್ ಪುನೀತ್ ರಾಜಕುಮಾರ್ ಕಪ್ ಏರ್ಪಡಿಸಲಾಗಿತ್ತು.
ಈ ಪಂದ್ಯಾವಳಿಯ ಉದ್ಘಾಟನೆಯನ್ನು ಡಾಕ್ಟರ್ ಪುನೀತ್ ರಾಜಕುಮಾರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಬಿಜೆಪಿ ಯುವ ಮುಖಂಡ ಸಮಾಜ ಸೇವಕ ಕಟ್ಟೇಗದ್ದೆ ನಾಗರಾಜ್ ಉದ್ಘಾಟನೆ ಮಾಡಿದರು.
ನಂತರ ಮಾತನಾಡಿದ ಅವರು ಕ್ರೀಡೆ ನಮ್ಮ ಜೀವನಕ್ಕೆ ಬೇಕಾಗಿರುವ ಒಂದು ಅವಿಭಾಜ್ಯ ಅಂಗ, ಕ್ರೀಡೆ ಎಂಬುದು ಒಂದು ಚಟುವಟಿಕೆ, ಎಲ್ಲರೂ ದೈಹಿಕವಾಗಿ ಆರೋಗ್ಯಕರವಾಗಿ ಸಾಮಾಜಿಕವಾಗಿ ಸದೃಢವಾಗಿ ಜೀವನ ನಡೆಸಲು ಮುಖ್ಯ ಮುಖ್ಯವಾಗಿ ಜೀವನದಲ್ಲಿ ಕ್ರೀಡೆಯನ್ನು ರೂಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ಯುವ ಮುಖಂಡ ಸಮಾಜ ಸೇವಕ ಕಟ್ಟೇಗದ್ದೆ ನಾಗರಾಜ್, ಕಾಫಿ ಬೆಳೆಗಾರರು ಭಾಗೆ ಮೋಹನ್, ಹಲಸುಲಗೆ ಗ್ರಾಮ. ಪಂ.ಅಧ್ಯಕ್ಷ ಸುರೇಶ್ ಆಳ್ವ, ಸದಸ್ಯ ಸತೀಶ್, ಗ್ರಾಮದ ಮುಖಂಡರುಗಳಾದ ಗೋಪಿನಾಥ್, ಪೀಜಿನಾ, ಬ್ಬಿ ಎಲ್ಲ ಮುಖಂಡರುಗಳು ಉಪಸ್ಥಿತರಿದ್ದರು.
