ಹಾಸನ: ದೇಶ ಸೇವೆ ಮಾಡಿ ನಿವೃತ್ತಿ ಹೊಂದಿದ ನಂತರ ತವರಿಗೆ ವಾಪಸ್ ಮರಳಿದ ತಾಲೂಕಿನ ಸಾಲಗಾಮೆ ನಿವಾಸಿ ಕೆ. ನಾಗರಾಜ್ ಅವರನ್ನು ನಗರದ ಡೈರಿ ವೃತ್ತದ ಬಳಿ ಅಪಾರ ಸಂಖ್ಯೆಯಲ್ಲಿ ಜಿಲ್ಲೆಯ ಮಾಜಿ ಸೈನಿಕರು ಹಾಗೂ ಕುಟುಂಬಸ್ಥರು ಅದ್ದೂರಿಯಾಗಿ ಸಂಭ್ರಮದಿಂದ ಸ್ವಾಗತಿಸಿದರು.

ನಗರದ ಡೈರಿ ವೃತ್ತದಿಂದ ರೈಲ್ವೆ ನಿಲ್ದಾಣ, ಬಿ.ಎಂ ರಸ್ತೆ ಸಾಲಗಾಮೆ ರಸ್ತೆ ಮೂಲಕ ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು, ಈ ವೇಳೆ ಕುಟುಂಬಸ್ಥರು ಹಾಗೂ ಅಭಿಮಾನಿಗಳು ನಿವೃತ್ತ ಸೈನಿಕ ನಾಗರಾಜ್ ಅವರಿಗೆ ಹೂ ಗುಚ್ಛ ನೀಡಿ, ಮಾಲಾರ್ಪಣೆ ಮಾಡಿ ಬರಮಾಡಿಕೊಂಡರು

ಈ ಸಂಧರ್ಭದಲ್ಲಿ ನಿವೃತ್ತ ಯೋಧ ಕೆ. ನಾಗರಾಜ್ ಮಾತನಾಡಿ, ಸತತ ವರ್ಷಗಳಿಂದ ದೇಶ ಸೇವೆ ಮಾಡಿ ಮತ್ತೆ ಮರಳಿ ಸ್ವ ಗ್ರಾಮಕ್ಕೆ ಬಂದಿರುವುದು ಸಂತಸ ತಂದಿದೆ ಎಂದರು.

ಸೇವಾ ಸಂಧರ್ಭದಲ್ಲಿ ಅತ್ಯಂತ ಕಠಿಣ ಕಠಿಣ ಸಂದರ್ಭಗಳನ್ನು ಎದುರಿಸಿ ಕುಟುಂಬದ ಸದಸ್ಯರ ಪ್ರೀತಿಯಿಂದ ದೂರವಿದ್ದ ನನಗೆ ಇದೀಗ ಎಲ್ಲರೂ ಅದ್ದೂರಿ ಸ್ವಾಗತ ಕೋರಿ ಪ್ರೀತಿ ತೋರಿದ್ದು ನಾನು ಮಾಡಿದ ದೇಶ ಸೇವೆಗೆ ಅರ್ಥ ಕಲ್ಪಿಸಿದೆ ಎಂದರು.

ಪತ್ನಿ ಪವಿತ್ರ ಮಾತನಾಡಿ, ದೇಶ ಸೇವೆಗೆ ಮಾಡಲು ಹೋಗಿ ನಂತರ ಮತ್ತೆ ಬದುಕಿ ಬರುತ್ತಾರೆ ಎಂಬ ಯಾವುದೇ ನಿರೀಕ್ಷೆ ಇರುವುದಿಲ್ಲ ಅದರ ನಡುವೆಯು ಎಲ್ಲವನ್ನೂ ಜಯಿಸಿ ಮತ್ತೆ ಮನೆಗೆ ಬಂದಿದ್ದು ಕುಷಿ ತಂದಿದೆ ಎಂದರು.

ವಿವಾಹವಾಗಿ ಕೇವಲ ಎರಡೇ ವರ್ಷಕ್ಕೆ ದೇಶ ಸೇವೆಗೆ ಪತಿ ತೆರಳಿದ್ದು, ಮಕ್ಕಳು.ಕೂಡ ತಂದೆಯ ಪ್ರೀತಿಯಿಂದ ವಂಚಿತ ರಾಗಿದ್ದರು, ಆದರೆ ಇದೀಗ ಯಶಸ್ವಿ ಸೇವೆಯೊಂದಿಗೆ ಮರಳಿ ಮನೆಗೆ ಬಂದಿದ್ದು ಕುಟುಂಬದ ಎಲ್ಲ ಸದಸ್ಯರಿಗೂ ಸಂತಸ ತಂದಿದೆ ಎಂದರು.

ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬ ಸದಸ್ಯರು, ಹಾಗೂ ಮಾಜಿ ಸೈನಿಕರ ಸಂಘದ ಸದಸ್ಯರು ಭಾಗವಹಿಸಿ ಸ್ವಾಗತ ಕೋರಿದ್ದು ತುಂಬಾ ಸಂತಸದ ವಿಚಾರವಾಗಿದೆ, ಎಲ್ಲರಿಗೂ ಈ ಮೂಲಕ ಧನ್ಯವಾದ ತಿಳಿಸುವುದಾಗಿ ಹೇಳಿದರು.

ಈ ಸಂಧರ್ಭದಲ್ಲಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷ ಗಿವಿಂದೆ ಗೌಡ, ಕಾರ್ಯದರ್ಶಿ ಸಾಗರ್, ಖಜಾಂಚಿ ಬಾಲಕೃಷ್ಣ, ಸಹ ಕಾರ್ಯದರ್ಶಿ ಚಂದ್ರೇಗೌಡ, ನಿರ್ದೇಶಕ ಮಂಜೇಗೌಡ, ಕುಟುಂಬ ಸದಸ್ಯರಾದ ಶೂಜಿತ್, ಹೇಮಾ, ಸಾಗರ್ ಇತರರು ಇದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *