
ಸಕಲೇಶಪುರ : ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಬಾಗೆ ಹತ್ತಿರ ಇಂದು ಬೆಳಗ್ಗೆ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ KSRTC ಬಸ್ ನ ಸ್ಟೇರಿಂಗ್ ರಾಡ್ ಕಟ್ಟ್ ಆಗಿ JSS ಶಾಲೆ ಆವರಣಕ್ಕೆ ನುಗ್ಗಿ ಅಪಘಾತ ಸಂಭವಿಸಿದೆ.
ಈ ಸಂದರ್ಭದಲ್ಲಿ KSRTC ಬಸ್ ನಿಂದ ಅಲ್ಲಿಯೇ ಇದ್ದ ಮನೆಗೆ ಹಾನಿಯಾಗಿದೆ ಹಾಗೂ ಒರ್ವ ವ್ಯಕ್ತಿ ಮೃತಪಟ್ಟರೆ , ಹಲವಾರು ಮಂದಿಗೆ ಗಾಯ ಆಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.




