
ಬೇಲೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕ್ಷೇಮಾಭಿವೃದ್ಧಿ ಸಂಘದಿಂದ ಹಮ್ಮಿಕೊಂಡ ಸಂವಿಧಾನ ಶಿಲ್ಪ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನದ ಅಂಗವಾಗಿ ವಿಚಾರ ಸಂಕೀರ್ಣ ಕಾರ್ಯಕ್ರಮ ಸಂವಿಧಾನ ಪೀಠಿಕೆ ಬೋದಿಸಲಾಯಿತು.
ವಿಶ್ವ ಪ್ರಸಿದ್ಧ ಬೇಲೂರು ಪಟ್ಟಣದ ಹೃದಯ ಭಾಗದ ಡಾ.ಬಿ.ಆರ್.ಅಂಬೇಡ್ಕರ್ ಭವನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಚಿಕ್ಕಮಗಳೂರು ವಿಭಾಗದ ವತಿಯಿಂದ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ರವರ ೧೩೨ ನೇ ಜನ್ಮ ದಿನಾಚರಣೆ ಹಾಗೂ ಸಂವಿಧಾನ ಕುರಿತು ವಿಚಾರ ಸಂಕೀರ್ಣ ಸಮಾರಂಭದ ಉದ್ಘಾಟನೆಯನ್ನು ಚಾಮರಾಜನಗರ ನಳಂದ ವಿಶ್ವವಿದ್ಯಾಲಯದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಭೋದಿ ದತ್ತ ಭಂತೇಜಿ ರವರು ಸೇರಿದಂತೆ ವೇದಿಕೆಯಲ್ಲಿನ ಗಣ್ಯರು ಮಾನ್ಯರು ಸಾಕ್ಷಿಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಬಿಎಸ್ ಪಿ ಉಪಾಧ್ಯಕ್ಷ ಮತ್ತು ವಕೀಲ ಗಂಗಾಧರ ಬಹುಜನ ಮಾತನಾಡಿ, ಅಖಂಡ ಭಾರತದಂತಹ ದೊಡ್ಡ ದೇಶಕ್ಕೆ ಅವಿರತ ಓದಿನ ಮೂಲಕ ಸಂವಿಧಾನ ನೀಡಿದ ಮಾಹನ್ ಪುರುಷ ಡಾ.ಅಂಬೇಡ್ಕರ್ ವಿಶ್ವ ಚೇತನ ಎಂದೇ ಖ್ಯಾತಿ ಪಡೆದಿದ್ದಾರೆ.
ಅವರು ನೀಡಿದ ಸಂವಿಧಾನ ಅಡಿಯಲ್ಲಿ ಎಲ್ಲಾ ಸೌಲಭ್ಯ ಪಡೆದ ಕೆಲ ಮನುವಾದಿಗಳು ಸಂವಿಧಾನದ ಬಗ್ಗೆ ಅಗೌರವ ತೊರುತ್ತಿರುವುದು ನಿಜಕ್ಕೂ ಶೋಚನೀಯ. ದೇಶಕ್ಕೆ ಸ್ವಾತಂತ್ರ್ಯ ತಲೆಮಾರಿನ ಹತ್ತಿರವಿರುವ ಸಂದರ್ಭದಲ್ಲಿ ದೇಶದಲ್ಲಿ ಇನ್ನೂ ಬಡತನ, ನಿರುದ್ಯೋಗ, ಹಸಿವು ಹೆಚ್ಚಾಗಿದೆ. ಇವುಗಳಲ್ಲಿ ಹೋಗಲಾಡಿಸುವ ದೇಶದಲ್ಲಿ ಯಾಥವತ್ತಾಗಿ ಸಂವಿಧಾನ ಜಾರಿಯಾದರೆ ಮಾತ್ರ ದೇಶದ ಸದೃಢತೆ ಕಾರಣವಾಗುತ್ತದೆ ಎಂದರು.
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ.ಆರ್.ವೆಂಕಟೇಶ್ ಮಾತನಾಡಿ, ದೇಶದ ಪ್ರಧಾನಿಗಳು ಸಂವಿಧಾನ ಸದೃಡತೆ ಮುಂದಾಗದೆ ರಾಮನಿಗೆ ಪ್ರಾಣ ಪ್ರತಿಷ್ಠಾನಿಗೆ ಉಪವಾಸವಿದ್ದು ಮುಂದಾಗಿದ್ದಾರೆ ಎಂದರೆ ಯಾವ ಸಮಾಜ ಕಟ್ಟಬಹುದು ಮತ್ತು ಸಂವಿಧಾನ ಯಾಥವತ್ತು ಜಾರಿ ಹೇಗೆ ಆಗುತ್ತದೆ ಎಂದು ಅಲೋಚನೆ ಮಾಡಬೇಕಿದೆ. ಸರ್ಕಾರಕ್ಕೆ ಸೇರಿದ ದೇಗುಲಗಳಲ್ಲಿಯೇ ಇನ್ನೂ ಮಡಿವಂತಿ ಜೀವಂತವಾಗಿದೆ ಈ ಕಾರಣದಿಂದ ತಾವುಗಳು ಸಂವಿಧಾನ ಆಶಯಗಳು ಈಡೆರಬೇಕಿದೆ. ಈ ನಿಟ್ಟಿನಲ್ಲಿ ಸಂವಿಧಾನ ಸಂಪೂರ್ಣ ಅರಿವನ್ನು ಮೊದಲು ಯುವ ಸಮುದಾಯದಕ್ಕೆ ತಿಳಿಸುವ ಕೆಲಸ ನಡೆಸಬೇಕಿದೆ ಎಂದರು.
ಬೆಂಗಳೂರು ಅಕ್ಕ ಐಎಎಸ್ ಅಕಾಡೆಮಿ ಮುಖ್ಯಸ್ಥರು ಮತ್ತು ಅಂಬೇಡ್ಕರ್ ವಾದಿಗಳಾದ ಡಾ.ಶಿವಕುಮಾರ್ ಮಾತನಾಡಿ. ಜನವರಿ ೨೬ ರ ಗಣರಾಜ್ಯೋತ್ಸವ ಎನ್ನುತ್ತಿದ್ದಾರೆ ಹೊರತು ಅದರ ಅರ್ಥವೇ ತಿಳಿದಿಲ್ಲ. ಗಣರಾಜ್ಯ ಪರಿಕಲ್ಪನೆ ಗೊತ್ತಿಲ್ಲದೆ ಆಚರಣೆ ಕಾರ್ಯಕ್ರಮ ನಡೆಸುತ್ತಿದ್ದಾರೆ.ಗಣರಾಜ್ಯೋತ್ಸವ ಎಂದರೆ ನಮ್ಮ ದೇಶ ಸಂವಿಧಾನ ಮೂಲಕ ಪ್ರಜಾಪ್ರಭುತ್ವವಾದ ದಿನ. ಈ ಕಾರಣದಿಂದ ಇನ್ನೂ ಮುಂದೆ ಗಣರಾಜ್ಯೋತ್ಸವ ಎಂಬ ದಿನದ ಬದಲು ಎಲ್ಲರೂ ಸಂವಿಧಾನ ಜಾರಿಗೆ ಬಂದ ದಿನ ಎನ್ನಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಉಮೇಶ್, ರಾಜ್ಯಾದ್ಯಕ್ಷ ರವೀಂದ್ರ, ಗೌರವಾಧ್ಯಕ್ಷ ಡಾ.ಆರ್.ಮೋಹನ್ ರಾಜ್, ಸಂಯೋಜಕ ಹೀರೆಮಂಗಳೂರು ರಾಮಚಂದ್ರ, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಬ್ಬಾಳು ಹಾಲಪ್ಪ,ತಾಲ್ಲೂಕು ಪಂಚಾಯತ ಮಾಜಿ ಅಧ್ಯಕ್ಷ ಪವರ್ತಯ್ಯ, ತಾ.ಪಂ.ಮಾಜಿ ಸದಸ್ಯ ಮಂಜುನಾಥ, ಚಿಕ್ಕಮಗಳೂರು ರಸ್ತೆ ಸಾರಿಗೆ ವಿಭಾಧಿಕಾರಿ ಬಸವರಾಜ,ಸಂಪತ್ತು, ನೂರ್ ಅಹಮದ್, ಅರೇಹಳ್ಳಿ ನಿಂಗರಾಜ್, ಅನಿಲ್ ಕುಮಾರ್ ಇನ್ನೂ ಮುಂತಾದವರು ಹಾಜರಿದ್ದರು ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಭಗವಾನ್ ಬುದ್ದನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.


