
ಸಕಲೇಶಪುರ : ಇಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಕಲೇಶಪುರ ಶೌರ್ಯ ವಿಪತ್ತು ನಿರ್ವಹಣಾ ಘಟಕ ವತಿಯಿಂದ ಹೊಳೆಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ನೆಡೆಸಿ ನಂತರ ಮಾಸಿಕ ಸಭೆಯನ್ನು ನಡೆಸಲಾಯಿತು
ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರು ಆಡಳಿತ ಮಂಡಳಿಯ ಉಪಾಧ್ಯಕ್ಷರು ಹಾಗೂ ಸಮಿತಿಯ ಸದಸ್ಯರು ಮುಂದಿನ ಶಿವರಾತ್ರಿ ಸಮಯದಲ್ಲಿ ನಮ್ಮ ಶೌರ್ಯ ತಂಡವನ್ನು ದೇವರ ಕಾರ್ಯ ಕ್ರಮದಲ್ಲಿ ಬಾಗಿಯಾಗಲು ತಿಳಿಸಿದರು ಹಾಗೂ ಶೌರ್ಯ ತಂಡದ ಸ್ವಚ್ಚತಾ ಕಾರ್ಯಗಳನ್ನೂ ಅಭಿನಂದಿಸಿದರು .
ಈ ಸಂದರ್ಭದಲ್ಲಿ ಶೌರ್ಯ ತಂಡದ ಸಂಯೋಜಕ ಮಧುವರನ್, ಘಟಕ ಸೇವಾ ಪ್ರತಿ ನಿಧಿ ದಿವ್ಯ , ಸೇವಾ ಪ್ರತಿ ನಿಧಿ ಹಾಗೂ ಸ್ವಯಂ ಸೇವಕರಾದ ಧನ್ಯ ಕುಮಾರಿ, ಶ್ಯಾಮಲಾ, ಭಾಸ್ಕರ್ ಆಚಾರ್ಯ, ಲಿಲಾವತಿ , ರವಿ ಕುಮಾರ್, ಮಂಜುನಾಥ್ ಹಾಜರಿದ್ದರು.






